newsfirstkannada.com

ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ; ಜೋಕಾಲಿ ಆಡುತ್ತಿದ್ದ ಬಾಲಕನಿಗೆ ಉರುಳು ಬಿದ್ದು ಸಾವು

Share :

Published February 25, 2024 at 11:13am

  ನಗರದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ

  ಮನೆಗೆ ಬಂದು ನಡುಮನೆಯಲ್ಲಿ ಜೋಕಾಲಿ ಆಡುವಾಗ ಘಟನೆ

  ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ದಾವಣಗೆರೆ: ಮನೆಯೊಳಗೆ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಉರುಳು ಬಿದ್ದು 4ನೇ ತರಗತಿ ಬಾಲಕ ಸಾವನ್ನಪ್ಪಿರುವ ಘಟನೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ.

ಸವಳಂಗ ಗ್ರಾಮದ ಪಿ.ಜೆ.ಕೊಟ್ರೇಶಿ (13) ಮೃತಪಟ್ಟ ಬಾಲಕ. ಎನ್.ಜಿ ಪ್ರವೀಣ್ ಎನ್ನುವವರ ಮಗ ಕೊಟ್ರೇಶಿ ಶಿವಮೊಗ್ಗ ಖಾಸಗಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಆಗ ತಾನೇ ಶಾಲೆಯಿಂದ ಮನೆಗೆ ಬಂದಿದ್ದ. ನಡುಮನೆಯಲ್ಲಿ ಮೊದಲೇ ಕಟ್ಟಲಾಗಿದ್ದ ಜೋಕಾಲಿಯಲ್ಲಿ ಎಂದಿನಂತೆ ಕುಳಿತು ಆಡುತ್ತಿದ್ದ. ಈ ವೇಳೆ ಜೋಕಾಲಿಯು ಆಕಸ್ಮಿಕವಾಗಿ ಉರುಳು ಬಿದ್ದಿದೆ. ಇದರಿಂದ ಬಾಲಕನು ಮೃತಪಟ್ಟಿದ್ದಾನೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ; ಜೋಕಾಲಿ ಆಡುತ್ತಿದ್ದ ಬಾಲಕನಿಗೆ ಉರುಳು ಬಿದ್ದು ಸಾವು

https://newsfirstlive.com/wp-content/uploads/2024/02/DVG_4th_CLASS_BOY.jpg

Load More