newsfirstkannada.com

ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

Share :

Published May 12, 2024 at 2:08pm

  ರಸ್ತೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಹರಿದ ಕಾರು

  ಹಳೇ ಏರ್ ಪೋರ್ಟ್‌ನ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ಘಟನೆ

  ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇವತ್ತು ಭಯಾನಕ ಘಟನೆ ನಡೆದಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ 15 ವರ್ಷದ ಬಾಲಕ ಕಾರು ಹರಿಸಿದ್ದಾನೆ. ಕಾರು ಹೊಡೆದ ರಭಸಕ್ಕೆ 5 ವರ್ಷ ಮಗುವಿನ ದೇಹ ಛಿದ್ರ, ಛಿದ್ರವಾಗಿದೆ. ಹಳೆಯ ಏರ್ ಪೋರ್ಟ್ ಹತ್ತಿರದ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ಸಂಭವಿಸಿದೆ.

ಮುರುಗೇಶಪಾಳ್ಯ ರಸ್ತೆಯಲ್ಲಿ 15 ವರ್ಷದ ಬಾಲಕ ತಂದೆಯ ಜೊತೆ ಕಾರು ವಾಶ್ ಮಾಡುತ್ತಿದ್ದ. ಇದೇ ವೇಳೆ ಅಪ್ರಾಪ್ತ ಬಾಲಕ ಕಾರಿನ ಎಕ್ಸಿಲೇಟರ್ ಒತ್ತಿದ್ದಾನೆ. ಈ ಅಚಾತುರ್ಯದಿಂದ ಕಾರು ರಭಸವಾಗಿ ಚಲಿಸಿದೆ. ಕಾರಿನ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಎಂಬ ಮಗು ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದೆ.

ಇದನ್ನೂ ಓದಿ: ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ದುರಂತ ಅಂತ್ಯ 

5 ವರ್ಷದ ಮಗು ಆರವ್ ಮನೆ ಮುಂದೆ ಆಟ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಣಿಪಾಲ್ ಆಸ್ಪತ್ರೆಗೆ ಮೃತ ದೇಹ ತರಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯಗಳಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

15 ವರ್ಷದ ಬಾಲಕನ ನಿರ್ಲಕ್ಷ್ಯಕ್ಕೆ 5 ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರು ಚಾಲಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

https://newsfirstlive.com/wp-content/uploads/2024/05/Bangalore-Car-Accident.jpg

Load More