ಬೆಂಗಳೂರಲ್ಲಿ ಘೋರ ದುರಂತ.. ನಿರ್ಮಾಣ ಹಂತದ ಕಟ್ಟಡ ಕುಸಿತ; ಸಾವಿನ ಸಂಖ್ಯೆ ಏರಿಕೆ!

author-image
Veena Gangani
Updated On
ಬೆಂಗಳೂರು ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ.. ಅವಶೇಷಗಳ ಅಡಿ ಇನ್ನೂ ಆರ್ತನಾದ!
Advertisment
  • ನೋಡ ನೋಡ್ತಿದ್ದಂತೆ ನೆಲಕ್ಕುರುಳಿದ ​6 ಅಂತಸ್ಥಿನ ಕಟ್ಟಡ
  • ಪಿಲ್ಲರ್​ ಸಮೇತ ಕಿತ್ತು ಪೊಟ್ಟಣದಂತೆ ಬಿತ್ತು ಬಿಲ್ಡಿಂಗ್
  • ಕಟ್ಟಡದಡಿ ಸಿಲುಕಿರೋ ಕಾರ್ಮಿಕರ ರಕ್ಷಣಾ ಕಾರ್ಯ

ಬೆಂಗಳೂರು: ನಿರ್ಮಾಣ ಹಂತದ ಬೃಹತ್ ಕಟ್ಟಡ ನೆಲಕ್ಕುರುಳಿ ಮೂವರು ಮೃತಪಟ್ಟಿರೋ ಘಟನೆ ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3.40ರ ಸುಮಾರಿಗೆ ದಿಢೀರ್ ನೋಡ ನೋಡ್ತಿದ್ದಂತೆ 6 ಅಂತಸ್ಥಿನ ಬಿಲ್ಡಿಂಗ್​ ಪಿಲ್ಲರ್​ ಸಮೇತ ಕಿತ್ತು, ಪೊಟ್ಟಣದಂತೆ ಉರುಳಿ ಬಿಟ್ಟಿದೆ. ಬೇಸ್​​ಮೆಂಟ್​ನಲ್ಲಿದ್ದ ಕಾರ್ಮಿಕರು ಕಟ್ಟಡದಡಿ ಸಿಲುಕಿ ಬಿಟ್ಟಿದ್ದಾರೆ.

ಈಗಾಗಲೇ ಸಿಲುಕಿದ್ದ ಒಬ್ಬರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಐವರು ಕಾರ್ಮಿಕರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ, ಆ ಕಟ್ಟಡದಲ್ಲಿ ತಮಿಳುನಾಡಿನ ‌ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ.

publive-image

ಈಗಾಗಲೇ ಏಳುಮಲೈ ಮೇಸ್ತ್ರಿ, ನಾಗರಾಜ್, ಬಿಹಾರ ಮೂಲದ ಗಿಷನ್,‌ ಮೊಹಮ್ಮದ್‌ ನಾಲ್ಕು ಜನ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಳುಗಳಿಗೆ ಸ್ಥಳೀಯ ಆಸ್ಪತ್ರೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಏಕಾಏಕಿ ಕುಸಿದು ಬಿದ್ದ ಆರು ಅಂತಸ್ತಿನ ಕಟ್ಟಡ ಆಂಧ್ರಮೂಲದ ಮುನಿರಾಜು ರೆಡ್ಡಿ ಎಂಬುವವರಿಗೆ ಸೇರಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಶಾಸಕ ಬೈರತಿ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಾಪತ್ತೆಯಾದವರು

1. ಮಹಮ್ಮದ್ ಅರ್ಮಾನ್ ಬಿಹಾರ
2. ಮಹಮ್ಮದ್ ಅಷೀದ್ ಬಿಹಾರ
3. ತಿರುಪಾಳಿ ಬಿಹಾರ
4. ಸೋಲೆ ಪಾಶ್ವನ್ ಬಿಹಾರ
5. ತುಳಸಿರೆಡ್ಡಿ ಚಿತ್ತೂರು
6. ಗಜೇಂದ್ರ ಚಿತ್ತೂರು
7. ವಳುಮಲೈ ಚಿತ್ತೂರು

ರಕ್ಷಿಸಿದ ಕಾರ್ಮಿಕರ ವಿವರ

1. ಅರ್ಮನ್ ಬಿಹಾರ ಮೂಲ
2. ಜಿಸಾನ್ ಬಿಹಾರ ಮೂಲ
3. ಮಹಮ್ಮದ್ ಸಾಹಿಲ್ ಬಿಹಾರ
4. ರಸೀದ್ ಬಿಹಾರ
5. ಸೀತಾರೆ ಬಿಹಾರ
6. ಇಲಿಫ್ ಬಿಹಾರ
7. ಸೋಹಿಲ್ ಬಿಹಾರ
8. ಪ್ರದೀಪ್ ರೆಡ್ಡಿ ಚಿತ್ತೂರು

ಗಾಯಾಳುಗಳು
1. ಜಗಮ್ಮ ಯಾದಗಿರಿ ಜಿಲ್ಲೆ
2. ಮಲ್ಲಪ್ಪ ಯಾದಗಿರಿ
3. ನಾಗರಾಜ್ ಯಾದಗಿರಿ
4. ರಮೇಶ್ ಕುಮಾರ್ ಬಿಹಾರ
5. ಪಾಶ್ವನ್ ಬಿಹಾರ ಮೂಲ

ಸಾವು

1. ಅರ್ಮನ್ 26 ವರ್ಷ ಬಿಹಾರ ಮೂಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment