newsfirstkannada.com

ಅಮ್ಮನ ಗರ್ಭದಲ್ಲೇ ಪ್ರಾಣಬಿಟ್ಟ ಶಿಶು.. ವೈದ್ಯರ ವಿರುದ್ಧ ಗಂಭೀರ ಆರೋಪ

Share :

Published June 1, 2024 at 9:10am

    ತಾಯಿ ಪರಿಸ್ಥಿತಿಯೂ ಚಿಂತಾಜನಕವಾಗಿದೆ‌ ಎಂದು ಕುಟಂಬಸ್ಥರ ಅಳಲು

    ಸರ್ಕಾರಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭದಲ್ಲಿಯೇ ಮಗು ಸಾವು ಆರೋಪ

    ಆರೋಗ್ಯ ತಪಾಸಣೆಗೆಂದು ಗರ್ಭಿಣಿಯನ್ನು ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರ

ಬೀದರ್‌: ವೈದ್ಯರ ನಿರ್ಲಕ್ಷ್ಯದಿಂದ ಏಳು ತಿಂಗಳ ಮಗು ಗರ್ಭದಲ್ಲೇ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ನಗರದ ಬ್ರಿಮ್ಸ್​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಗೊಂಬೆ.. ಸಂಭ್ರಮದಲ್ಲಿ ನೇಹಾ-ಚಂದನ್​.. ಅಭಿಮಾನಿಗಳಿಂದ ಶುಭ ಹಾರೈಕೆ

ಏಳೂವರೆ ತಿಂಗಳು ಗರ್ಭಿಣಿಯಾಗಿದ್ದ ಯಲ್ಲಮ್ಮನಿಗೆ ಆರೋಗ್ಯ ತಪಾಸಣೆಗಾಗಿ ಹುಮನಾಬಾದ್ ತಾಲೂಕಿನ ಕನಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಗರ್ಭಿಣಿ ಮಹಿಳೆಯರಿಗೆ ನೀಡಲಾಗುವ ಇಂಜೆಕ್ಷನ್ ಯಲ್ಲಮ್ಮನಿಗೆ ಆಸ್ಪತ್ರೆಯ ನರ್ಸ್ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಬಳಿಕ ಸುಸ್ತು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಮ್ಸ್​ಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿಲ್ಲ. ಇದರಿಂದ ಮಗು ಸಾವನ್ನಪ್ಪಿದೆ. ಜೊತೆಗೆ ತಾಯಿಯ ಪರಿಸ್ಥಿತಿಯೂ ಚಿಂತಾಜನಕವಾಗಿದೆ‌ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮನ ಗರ್ಭದಲ್ಲೇ ಪ್ರಾಣಬಿಟ್ಟ ಶಿಶು.. ವೈದ್ಯರ ವಿರುದ್ಧ ಗಂಭೀರ ಆರೋಪ

https://newsfirstlive.com/wp-content/uploads/2024/06/death8.jpg

Load More