ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದುರಂತ.. 7 ವರ್ಷದ ಬಾಲಕಿ ದಾರುಣ ಸಾವು; ಆಗಿದ್ದೇನು?

author-image
admin
Updated On
ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದುರಂತ.. 7 ವರ್ಷದ ಬಾಲಕಿ ದಾರುಣ ಸಾವು; ಆಗಿದ್ದೇನು?
Advertisment
  • ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು
  • ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ಸಂಭವಿಸಿದ ದುರಂತ
  • ಯಾವುದೇ ತಪ್ಪು ಮಾಡದ ಬಾಲಕಿ ಯಾರದೋ ನಿರ್ಲಕ್ಷ್ಯಕ್ಕೆ ದಾರುಣ ಸಾವು

ವಿಜಯನಗರ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿ 7 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ನಡೆದಿದೆ. 7 ವರ್ಷದ ತುಳಸಿ ಮೃತ ಬಾಲಕಿ.

ಇದನ್ನೂ ಓದಿ:ವಿಜಯಪುರದಲ್ಲಿ ಭೀಕರ ಅಪಘಾತ.. ಲಾರಿ ಗುದ್ದಿದ ಹೊಡೆತಕ್ಕೆ ಪ್ರಯಾಣಿಕರಿದ್ದ ಬಸ್​ ಪುಡಿಪುಡಿ 

ತುಳಸಿ, ಕಾತ್ರಿಕಾಯನಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಇಂದು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ.

publive-image

ಯಾವುದೇ ತಪ್ಪು ಮಾಡದ ತುಳಸಿ ಬೇರೆ ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗಿರೋದು ದುರಂತವಾಗಿದೆ. ಬಾಲಕಿ ಸಾವನ್ನಪ್ಪಿರೋದ್ರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment