newsfirstkannada.com

ಅಗ್ನಿವೀರ್‌ ಕಾರು ಕದಿಯುವ ಚೋರ್ ಆದ್ನಾ? ಇಡೀ ದೇಶದಲ್ಲೇ ಬೆಚ್ಚಿ ಬೀಳಿಸಿದ ಪ್ರಕರಣ; ಆಗಿದ್ದೇನು?

Share :

Published July 25, 2024 at 1:54pm

Update July 25, 2024 at 2:03pm

    ಗಡಿಯಲ್ಲಿ ದೇಶ ಕಾಯುವ ಯೋಧ ಹೆದ್ದಾರಿಯಲ್ಲಿ ದರೋಡೆಗಿಳಿದ

    ಮೊಹಾಲಿ ಪೊಲೀಸರು ಬಂಧಿಸಿರುವ ಆ ಅಗ್ನಿವೀರ ಯಾರು..?

    ಅಗ್ನಿಪಥ್ ಯೋಜನೆಯ ವಿರುದ್ಧ ಮತ್ತೆ ಕೆಂಡ ಕಾರಿದ ವಿಪಕ್ಷಗಳು

ಮೊಹಾಲಿ: ಗಡಿ ಕಾಯುವ ಯೋಧರು ಅಂದ್ರೆ ಈ ದೇಶದಲ್ಲಿ ಅತಿ ದೊಡ್ಡ ಸಮ್ಮಾನವಿದೆ. ಅವರನ್ನು ದೇವರ ಮಟ್ಟಕ್ಕೆ ಹೋಲಿಸುವ ಕಂಡಲ್ಲಿ ಅವರಿಗೆ ಒಂದು ಸೆಲ್ಯೂಟ್ ಹೊಡೆದು ಮುಂದೆ ಹೋಗುವ ಪರಂಪರೆ ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಬಂದಿದೆ. ಭಾರತೀಯ ಸೇನೆ ಅಂದ್ರೆ ತತ್ವಗಳ ಆದರ್ಶಗಳ ಬುನಾದಿಯ ಮೇಲೆ ನಿಂತಿರುವ ಒಂದು ಸರ್ವಶ್ರೇಷ್ಠ ಪಡೆಯೆಂದೇ ಜಗತ್ತು ಗುರುತಿಸುತ್ತಿದೆ. ಆ ವೃತ್ತಿಗೆ, ಆ ಸಮವಸ್ತ್ರಕ್ಕೆ ಅದರದೇ ಆದ ಅಪಾರ ಗೌರವವೂ ಇದೆ. ಆದ್ರೆ ಬೆರಳೆಣಿಕೆಯಷ್ಟು ಜನರು ಆ ವೃತ್ತಿಗೆ ಆ ಸಮವಸ್ತ್ರಕ್ಕೆ ಕಳಂಕ ತರುವಂತೆ ನಡೆದುಕೊಳ್ಳುತ್ತಾರೆ. ಅಂತವರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದಾನೆ ಪಂಜಾಬ್​ನ ಈ ಅಗ್ನೀವರ್ ಯೋಧ.

ಇದನ್ನೂ ಓದಿ: ಭೂ ಕುಸಿತ, ವಿದ್ಯುತ್​ ಸ್ಪರ್ಶಿಸಿ 4 ಸಾವು.. ರಕ್ಷಣೆಗಾಗಿ ಅಲರ್ಟ್​ ಇರುವಂತೆ ಭಾರತೀಯ ಸೇನೆಗೆ ಸೂಚನೆ

ಹೆದ್ದಾರಿಯಲ್ಲಿ ದರೋಡೆಗಿಳಿದ ‘ಅಗ್ನಿವೀರ’

2022ರಲ್ಲಿ ಭಾರತೀಯ ಸೇನೆಗೆ ಅಗ್ನೀವರನಾಗಿ ನೇಮಕಗೊಂಡಿದ್ದ ಇಶಮಿತ್ ಸಿಂಗ್ ಅನ್ನೋ ಯೋಧನೊಬ್ಬ ಪಂಜಾಬ್​ನ ಹೆದ್ದಾರಿಗಳಲ್ಲಿ ಗುಂಪು ಕಟ್ಟಿಕೊಂಡು ವಾಹನಗಳ ದರೋಡೆತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ತನ್ನದೇ ಗುಂಪು ಕಟ್ಟಿಕೊಂಡು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಡ್ರೈವರ್​ಗಳಿಗೆ ಪೇಪರ್ ಸ್ಪ್ರೇ ಮಾಡಿ ವಾಹನ ಕಳ್ಳತನ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ.

ಜುಲೈ 20 ರಂದು ಇದೇ ರೀತಿ ವಾಹನವೊಂದರ ಕಳ್ಳತನಕ್ಕೆ ಇಳಿದ ಇಶಮಿತ್ ಸಿಂಗ್​ ಹಾಗೂ ಅವನ ತಂಡವನ್ನು ಬೆನ್ನಟ್ಟಿದ ಪೊಲೀಸರು ಅಗ್ನಿವೀರ್‌ನನ್ನು ಬಂಧಿಸಿದ್ದಾರೆ. ಅವನ ಜೊತೆ ಅವನ ತಂಡದ ಇನ್ನಿಬ್ಬರನ್ನು ಕೂಡ ಬಂಧಿಸಲಾಗಿದೆ ಎಂದು ಮೊಹಾಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಅಗ್ನಿಪಥ್ ಯೋಜನೆಯಲ್ಲಿ ದೀರ್ಘಾವಧಿ ಉದ್ಯೋಗಕ್ಕೆ ಅವಕಾಶವಿಲ್ಲ. ಇದರಿಂದಾಗಿ ಅಗ್ನಿವೀರರು ಈ ರೀತಿಯ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕಿಡಿಕಾರಿವೆ ವಿಪಕ್ಷಗಳು.

ಇದನ್ನೂ ಓದಿ: ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!

ದೇಶದಲ್ಲಿ ಒಟ್ಟು ಈಗಾಗಲೇ 40 ಸಾವಿರಕ್ಕೂ ಹೆಚ್ಚು ಯುವಕರು ಅಗ್ನಿಪಥ ಯೋಜನೆಯಡಿಯಲ್ಲಿ ಸೇನೆಗೆ ಸೇರಿ ಅಗ್ನಿವೀರರು ಆಗಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗಡಿಯಲ್ಲಿ ಹೋರಾಡುತ್ತಿದ್ದಾರೆ. ಆದ್ರೆ ಇಶಮಿತ್ ಸಿಂಗ್​ನಂತವರು ಮಾಡುವ ಇಂತಹ ಕೃತ್ಯಗಳಿಂದಾಗಿ ಇಡೀ ಅಗ್ನಿವೀರ್ ಪಡೆಗೆ ಕಳಂಕಗಳು ಬರುತ್ತಿವೆ. ವಿಪಕ್ಷಗಳ ಬಾಯಿಗೆ ಅಗ್ನಿಪಥ್ ಯೋಜನೆ ಆಹಾರವಾಗುತ್ತಿರುವುದು ನಿಜಕ್ಕೂ ಖೇದಕರ ವಿಷಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಗ್ನಿವೀರ್‌ ಕಾರು ಕದಿಯುವ ಚೋರ್ ಆದ್ನಾ? ಇಡೀ ದೇಶದಲ್ಲೇ ಬೆಚ್ಚಿ ಬೀಳಿಸಿದ ಪ್ರಕರಣ; ಆಗಿದ್ದೇನು?

https://newsfirstlive.com/wp-content/uploads/2024/07/AGNIVEER-2.jpg

Load More