/newsfirstlive-kannada/media/post_attachments/wp-content/uploads/2024/07/Bagalkote-Baby.jpg)
ಬಾಗಲಕೋಟೆ: 12 ಕಾಲ್ಬೆರಳುಗಳು, 13 ಕೈ ಬೆರಳುಗಳೊಂದಿಗೆ ಅಪರೂಪದ ಗಂಡು ಮಗುವೊಂದು ರಬಕವಿ-ಬನಹಟ್ಟಿಯಲ್ಲಿ ಹುಟ್ಟಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಯ ಸನ್‌ಶೈನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 25 ಬೆರಳುಗಳೊಂದಿಗೆ ಮಗು ಜನಿಸಿದೆ.
ಇದನ್ನೂ ಓದಿ: ನವವಿವಾಹಿತನ ದುರಂತ ಅಂತ್ಯ.. ಕೃಷ್ಣಾ ನದಿ ಹಿನ್ನೀರಿನಲ್ಲಿ ದಾರುಣ ಸಾವು; ಆಗಿದ್ದೇನು?
ಜುಲೈ 19ರಂದು ಹುಟ್ಟಿದ ಅಪರೂಪದ ಗಂಡು ಮಗು ಹಾಗೂ ಮಗುವಿಗೆ ಜನ್ಮ ಕೊಟ್ಟ 35 ವರ್ಷದ ತಾಯಿ ಭಾರತಿ ನೋಡಲು ಜನ ಬರ್ತಿದ್ದಾರೆ. ಮಗುವನ್ನು ಕಂಡ ಕುಟುಂಬದವರು, ಈ ಅಪರೂಪದ ಮಗು ಹುಟ್ಟೋಕೆ ಕುಂದರಗಿಯ ಭುವನೇಶ್ವರಿ ದೇವಿ ಅನುಗ್ರಹವಿದೆ.
ಶಿಶುವನ್ನು ದೇವಿಯ ಅವತಾರವೆಂದು ನಂಬಿ ಆರೈಕೆ ಮಾಡ್ತಿದ್ದಾರೆ. ಮಗುವಿನ ಬಲಗೈಗೆ 6, ಎಡಗೈಗೆ 7 ಬೆರಳುಗಳ ಜೊತೆ ಎರಡು ಕಾಲುಗಳಲ್ಲಿ ಆರಾರು ಬೆರಳುಗಳಿವೆ. 25 ಬೆರಳುಗಳನ್ನು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದು, ವೈದ್ಯ ಲೋಕವೂ ಅಚ್ಚರಿ ಪಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ