/newsfirstlive-kannada/media/post_attachments/wp-content/uploads/2024/07/kerala14.jpg)
ವಯನಾಡು ಕೇರಳ ಪ್ರಮುಖ ಪ್ರವಾಸಿ ತಾಣವಾಗಿದೆ. ಹಚ್ಚ ಹಸಿರಿನಿಂದ ಕೂಡಿರುವ ವಯನಾಡು ರಜಾ ದಿನಗಳನ್ನು ಕಳೆಯಲು ಸೂಕ್ತವಾಗಿದೆ. ಚಹಾ ತೋಟಗಳಿಂದ ಕೂಡಿರುವ ವಯನಾಡಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ವಯನಾಡಿನ ಹಚ್ಚ ಹಸಿರನ್ನು ಕಣ್ತುಂಬಿಕೊಳ್ಳಲು ಹೋಗಿದ್ದವರು ಪ್ರಾಣ ಸಂಕಟಕ್ಕೆ ಸಿಲುಕಿದ್ದಾರೆ.
ಮೊನ್ನೆ ರಾತ್ರಿ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭೀಕರ ಭೂಕುಸಿತಕ್ಕೆ ಮೃತರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಪವಾಡ ಸದೃಶ ರೀತಿಯಲ್ಲಿ ಕನ್ನಡಿಗರೊಬ್ಬರು ಬಚಾವ್ ಆಗಿ ಬಂದಿದ್ದಾನೆ. ಒಂದೇ ಒಂದು ಮೆಸೇಜ್ನಿಂದ ಕನ್ನಡಿಗ ಬದುಕಿ ಬಂದಿದ್ದಾನೆ. ಆ ಮಿಡ್ ನೈಟ್ ಬಂದ ಅದೊಂದು ಮೆಸೇಜ್ನಿಂದ ಯುವಕನ ಪ್ರಾಣ ಉಳಿಸಿದ್ಹೇಗೆ? ಇಲ್ಲಿದೆ ಭೂಕುಸಿತದಿಂದ ಬಚಾವ್ ಆದ ಬೆಂಗಳೂರು ಕಾರು ಚಾಲಕನ ಸ್ಟೋರಿ.
ಇದನ್ನೂ ಓದಿ: ಹನಿಮೂನ್‌ಗೆ ಹೋದ ನವಜೋಡಿಗಳು ನಾಪತ್ತೆ; ಕೇರಳದ ಭೀಕರತೆ ಬಿಚ್ಚಿಟ್ಟ ಬೆಂಗಳೂರಿನ ಚಾಲಕ- VIDEO
ಆ ಮಧ್ಯರಾತ್ರಿ ನಡೆದಿದ್ದೇನು?
ಮಂಜುನಾಥ್ ಅವರು ಟ್ಯಾಕ್ಸಿ ಡ್ರೈವರ್ ಆಗಿ ವಯನಾಡ್ಗೆ ಹೋಗಿದ್ದರು. ಮಂಜುನಾಥ್ ಮೂಲತಃ ಬೆಂಗಳೂರಿನವರು. ಇಬ್ಬರು ಯುವಕರು ಮತ್ತು ಇಬ್ಬರು ಯುವತಿ ಜೊತೆಗೆ ವಯನಾಡ್ಗೆ ಟ್ರಿಪ್ ಅಂತ ಹೋಗಿದ್ದರು. ಉತ್ತರ ಭಾರತ ಮೂಲದವರಾಗಿ ನಾಲ್ವರು ಕಾರು ಡ್ರೈವರ್ ಆಗಿ ಮಂಜುನಾಥ್ ವಯನಾಡಿಗೆ ಹೋಗಿದ್ದರು. ಆ ನಾಲ್ವರು ವಯನಾಡ್ನ ರೆಸಾರ್ಟ್ ಒಂದರಲ್ಲಿ ಇದ್ದರಂತೆ. ಆದರೆ ಮಂಜುನಾಥ್ ಕಾರು ನಿಲ್ಲಿಸಿ ಅಲ್ಲೇ ನಿದ್ದೆಗೆ ಜಾರಿದ್ದರಂತೆ. ಮಧ್ಯರಾತ್ರಿ ಒಂದು ಗಂಟೆ 15 ನಿಮಿಷಕ್ಕೆ ಭೂ ಕುಸಿತವಾಗಿದೆ. ಆಗ ರೆಸಾರ್ಟ್ನಲ್ಲಿದ್ದ ಹಲವರಿಗೆ ಸಂಕಷ್ಟ ಎದುರಾಗಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದ ನಿದ್ದೆಗೆ ಮಂಜುನಾಥ್ ಗಾಡ ನಿದ್ರೆಗೆ ಜಾರಿದ್ದರಂತೆ.
ಆ ಒಂದು ಮೆಸೇಜ್ನಿಂದ ಉಳಿಯಿತು ಚಾಲಕನ ಜೀವ
ಭೂ ಕುಸಿತದ ಬಳಿಕ ನೀರು ವೇಗವಾಗಿ ಹರಿಯುತ್ತಿತ್ತು. ಆಗ ಮಂಜುನಾಥ್ ಅವರ ಕಾರಿಗೂ ಜಲದಿಗ್ಬಂಧನ ಉಂಟಾಗಿದೆ. ಈ ವೇಳೆ ಚಾಲಕ ತರಾತುರಿಯಲ್ಲಿ ಕಾರನ್ನು ಚಲಾಯಿಸಲು ಮುಂದಾಗಿದ್ದಾನೆ. ಕಾರು ಸ್ಟಾರ್ಟ್ ಆಗುತ್ತಿದ್ದಂತೆ ಓನರ್ ಸಚಿನ್ಗೆ ಮೆಸೇಜ್ ಹೋಗಿದೆ. ಏಕೆಂದರೆ ಮೊಬೈಲ್ನಲ್ಲಿ ಕಾರಿನ ಜಿಪಿಎಸ್ ಆನ್ ಆಗುತ್ತಿದ್ದಂತೆ ಆಟೋಮ್ಯಾಟಿಕ್ ಮೆಸೇಜ್ ಹೋಗಿದೆ. ಹೊತ್ತಲ್ಲದ ಹೊತ್ತಲ್ಲಿ ಗಾಡಿ ಆನ್ ಆದ ಮೆಸೇಜ್ ನೋಡಿ ಓನರ್ ಶಾಕ್ ಆಗಿದ್ದಾರೆ. ಕೂಡಲೇ ಓನರ್ ಸಚಿನ್ ಚಾಲಕ ಮಂಜುನಾಥ್ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಪ್ರವಾಹದ ಬಗ್ಗೆ ಚಾಲಕ ವಿವಹರಿಸಿದ್ದಾರೆ. ಆ ಕೂಡಲೇ ಚಾಲಕ ಮಂಜುನಾಥ್ಗೆ ಸಚಿನ್ ಧೈರ್ಯ ತುಂಬಿದ್ದಾರೆ. ಅದೇ ಜಾಗದಲ್ಲಿದ್ದ ತನ್ನ ಪರಿಚಯಸ್ಥರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಅಲ್ಲಿನ ಜನರು ಚಾಲಕನ ಸಹಾಯಕ್ಕೆ ದೌಡಾಯಿಸಿದ್ದಾರೆ. ಹೀಗಾಗಿ ಒಂದೇ ಒಂದು ಮೆಸೇಜ್ನಿಂದ ಕಾರು ಚಾಲಕ ಪಾರಾಗಿದ್ದಾನೆ.
ಇಬ್ಬರು ಯುವಕರ ಕಣ್ಮರೆ
ಚಾಲಕ ಮಂಜುನಾಥ್ ಸೇರಿ ಒಟ್ಟು ಐದು ಮಂದಿ ವಯನಾಡ್ಗೆ ಹೋಗಿದ್ದರು. ತನ್ನ ಟ್ಯಾಕ್ಸಿಯಲ್ಲಿ ಹೋದ ಇಬ್ಬರು ಕಣ್ಮರೆಯಾಗಿದ್ದಾರೆ. ಸದ್ಯ ಇಬ್ಬರು ಯುವತಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ಯುವತಿಗೆ ಐಸಿಯು, ಇನ್ನೋರ್ವ ಯುವತಿಗೆ ಎಮರ್ಜೆನ್ಸಿ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ