3ನೇ ಘಟನೆಯಲ್ಲಿ ಸಿದ್ದಪ್ಪನ ಆಶೀರ್ವಾದದಿಂದ ಮಗು ಸೇಫ್
ಪೋಷಕರಿಗೆ ಸಂತಸ ಕರೆಯಂತಿದ್ದ ಮಗು ಅಳುವಿನ ಶಬ್ಧ
20 ಗಂಟೆಗಳ ಬಳಿಕ ಮಗನನ್ನ ಕಂಡು ಹೆತ್ತೊಡಲು ಸಂತಸ
ವಿಜಯಪುರ: ಪವಾಡದ ನೆಲದಲ್ಲಿ ಮತ್ತೊಂದು ಪವಾಡ ನಡೆದಿದೆ. ಕೊಳವೆ ಬಾವಿಯೊಳಗೆ ಬಿದ್ದ 2 ವರ್ಷದ ಬಾಲಕ ಪವಾಡ ಸದೃಶವಾಗಿ ಬದುಕಿ ಬಂದಿದ್ದಾನೆ. ಆಪರೇಷನ್ ಸಾತ್ವಿಕ್ ಸಕ್ಸಸ್ ಆಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚಾಣ್ಯ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನ ಹೊರ ತೆಗೆಯುವಲ್ಲಿ ಎನ್‌ಡಿಆರ್‌ಎಫ್ ತಂಡ ಯಶಸ್ವಿಯಾಗಿದೆ. ಹೆತ್ತವರು ನಿಟ್ಟುಸಿರು ಬಿಟ್ಟಿದ್ದು, ಗ್ರಾಮದಲ್ಲಿ ಸಂತೋಷ ಮನೆ ಮಾಡಿದೆ.
ಸುರಕ್ಷಿತವಾಗಿ ಕಂದನ ಆಚೆ ತೆಗೆದು ಜೀವ ಉಳಿಸಿದ ರಕ್ಷಣಾ ತಂಡ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಪುಟ್ಟ ಕಂದ ಸಾತ್ವಿಕ್‌ನನ್ನ ಎನ್‌ಡಿಆರ್‌ಎಫ್ ತಂಡ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಸುಮಾರು 265 ಅಡಿ ಆಳವಿರುವ ಬೋರ್‌ಗೆ ಬಿದ್ದಿದ್ದ ಮಗು, 16 ಅಡಿ ಆಳದಲ್ಲಿ ಸಿಲುಕಿಕೊಂಡಿತ್ತು. ಮಗುವನ್ನ ಹೊರ ತರಲು ಕಾರ್ಯಾಚರಣೆಗಿಳಿದ ಎನ್‌ಡಿಆರ್‌ಎಫ್ ಸಿಬ್ಬಂದಿ, ಕೊಳವೆ ಬಾವಿಯ ಕೊಂಚ ದೂರದಲ್ಲಿ ಮತ್ತೊಂದು ಸುರಂಗ ಕೊರೆದಿದೆ. 20 ಅಡಿ ಆಳದವರೆಗೂ ಗುಳಿ ನಿರ್ಮಿಸಿ ಬಳಿಕ ಅಡ್ಡಲಾಗಿ ಸುರಂಗ ನಿರ್ಮಿಸಿ ಮಗುವನ್ನ ತಲುಪಿದ್ದಾರೆ.
ಇದನ್ನೂ ಓದಿ: Exclusive Photos: ಕೊಳವೆ ಬಾವಿಯಿಂದ ಹಿಡಿದು ಸಾವು ಗೆದ್ದ ಸಾತ್ವಿಕನ ಕ್ಷಣ ಕ್ಷಣದ ಫೋಟೋಗಳು ಇಲ್ಲಿವೆ
ಅಷ್ಟಕ್ಕೂ ಮಗು ಬದುಕಿ ಬರುತ್ತೋ ಇಲ್ವೋ ಅನ್ನೋ ನಂಬಿಕೆಯೇ ಹೆತ್ತವರಿಗೆ ಇರಲಿಲ್ಲ. ಬೋರ್‌ವೆಲ್‌ನೊಳಗೆ ಕ್ಯಾಮೆರಾ ಬಿಟ್ಟು ನೋಡಿದಾಗ ಕಂದನ ಕಾಲಿನ ಚಲನವಲನ ಕಾಣಿಸ್ತಾ ಇತ್ತು. ಅದೊಂದೇ ಆಶಾಭಾವನೆ ಮಗು ಜೀವಂತವಾಗಿರೋದನ್ನ ಹೇಳ್ತಿತ್ತು. ಇನ್ನು ಮಗುವಿನ ಸಮೀಪಕ್ಕೆ ತಲುಪಿದ ರಕ್ಷಣಾ ಸಿಬ್ಬಂದಿ ರಂಧ್ರ ಕೊರೆಯುವ ವೇಳೆ ಮಗು ಅಳುವಿನ ಧ್ವನಿ ಕೇಳಿಸತೊಡಗಿತು. ಅತ್ತ ಮಗು ಒದ್ದಾಟದಲ್ಲಿ ಅಳುತ್ತಿದ್ರೂ, ಅಳುವಿನ ಸದ್ದೇ ಪೋಷಕರಿಗೆ ಸಂತೋಷದ ಕರೆಯಂತೆ ಕೇಳಿಸತೊಡಗಿತ್ತು.
ಮಗು ಅಳುತ್ತಿರೋ ಸದ್ದು ಪೋಷಕರಲ್ಲಿ ಆಶಾಭಾವನೆ ಮೂಡಿಸಿತ್ತು. ಕಾರ್ಯಾಚರಣೆ ನಡೆಸುತ್ತಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿಗೂ ಹುಮ್ಮಸ್ಸು ಕೊಟ್ಟಿತ್ತು. ಬೋರ್‌ವೆಲ್‌ನ ಪಕ್ಕದಿಂದ ರಂದ್ರ ಕೊರೆದು ಮಗು ಇದ್ದ ಜಾಗವನ್ನ ಕೆಳಭಾಗದಿಂದ ತಲುಪಿದ ತಂಡ ಕ್ಯಾಮರಾ ಬಿಟ್ಟು ನೋಡಿದಾಗ ತಲೆ ಕಾಣತೊಡಗಿದೆ. ಅಲ್ಲಿಗೆ ಮಗು ಬಚಾವಾಗೋದು ಪಕ್ಕಾ ಆಗಿದೆ. ಕೆಳ ಭಾಗದಿಂದಲೇ ಮಗುವನ್ನ ತಲುಪಿದ ಸಿಬ್ಬಂದಿ ಕೊನೆಗೂ ಪುಟಾಣಿ ಸಾತ್ವಿಕ್‌ನನ್ನ ಸುರಕ್ಷಿತವಾಗಿ ಹೊರಗೆಳೆದಿದ್ದರು. ಮಗು ಆಚೆ ಬರುತ್ತಲೇ ಸ್ಥಳದಲ್ಲಿ ಹರ್ಷೋದ್ಘಾರಗಳೇ ಮೊಳಗಿದ್ವು.
ಜೀವಂತವಾಗಿ ಹೊರಬಂದ ಮಗುವನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಿನಲ್ಲಿ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ. ಕೊಳವೆ ಬಾವಿಯೊಳಗೆ 16 ಅಡಿ ಆಳದಲ್ಲಿ 20 ಗಂಟೆಯಿಂದ ಸಿಲುಕಿದ್ರೂ, ಬಾಲಕ ಬದುಕಿ ಬಂದಿದ್ದೆ ರೋಚಕ. ಸ್ಥಳೀಯರು ಪವಾಡ ಪುರುಷನ ನೆಲದಲ್ಲಿ ಮತ್ತೊಂದು ಪವಾಡ ನಡೆದಿದೆ ಎನ್ನುತ್ತಿದ್ದಾರೆ. 2024ರಲ್ಲಿ ಸಿದ್ದಲಿಂಗ ಮಹಾರಾಜರ ಪವಾಡ ವಾಗಿದೆ ಎಂದು ಯುವಕರು ಮಠದಲ್ಲಿ ಕಾಯಿ ಒಡೆದು ದೀರ್ಘ ದಂಡ ನಮಸ್ಕಾರ ಹಾಕಿದ್ರು. ಅದೇನೆ ಇರ್ಲಿ ಕಂದಮ್ಮ ಜೀವಂತವಾಗಿ ಸುರಕ್ಷಿತವಾಗಿ ಹೊರಬಂದಿದ್ದಕ್ಕೆ ರಕ್ಷಣಾ ಸಿಬ್ಬಂದಿಯೂ ಕಾರಣವೇ.. ಬಿಡುವಿಲ್ಲದೇ ಸತತ ಕಾರ್ಯಾಚರಣೆ ನಡೆಸಿ ಮಗುವನ್ನ ರಕ್ಷಿಸಿದ ರಕ್ಷಣಾ ತಂಡಕ್ಕೆ ನಮ್ಮದೊಂದು ಸಲಾಂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ