ಪ್ರತಾಪ್ ಪರವಾನಗಿ ಪಡೆಯದೇ ಡ್ರೋನ್ ಹಾರಾಟ ಮಾಡ್ತಿದ್ದಾರೆ
ಆರ್.ಟಿ.ಐ ನೀಡಿದ ಮಾಹಿತಿಯಲ್ಲಿ ಲೈಸೆನ್ಸ್ ಇಲ್ಲದಿರೋದು ಬಹಿರಂಗ
ಫೆಬ್ರವರಿಯಲ್ಲಿ ಪ್ರತಾಪ್ ವಿರುದ್ಧ ಆರ್.ಆರ್.ನಗರ ಠಾಣೆಗೆ ದೂರು
ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಹಾರಿಸಿ, ಹಾರಿಸಿ ಸಖತ್ ಫೇಮಸ್ ಆಗಿದ್ದ ಡ್ರೋನ್ ಪ್ರತಾಪ್ ಅವರ ಬಳಿ ಡ್ರೋನ್ ಹಾರಾಟಕ್ಕೆ ಲೈಸೆನ್ಸ್ ಇಲ್ಲವಂತೆ. ಡ್ರೋನ್ ಪ್ರತಾಪ್ ಅವರ ವಿರುದ್ಧ ದೂರು ನೀಡಿದ್ದ ಡಾ.ಪ್ರಯಾಗ್ ಮತ್ತು ಅವರ ಟೀಂ ಈ ಬಗ್ಗೆ ಮಹತ್ವದ ಸಾಕ್ಷಿ ಕಲೆ ಹಾಕಿದೆ.
ಬಿಗ್‌ಬಾಸ್ ಖ್ಯಾತಿಯ ಪ್ರತಾಪ್ ಬಳಿ ಡ್ರೋನ್ ಹಾರಾಟಕ್ಕೆ ಲೈಸೆನ್ಸ್ ಇಲ್ಲ. ಡ್ರೋನ್ ಲೈಸೆನ್ಸ್ ಬಗ್ಗೆ ಡಾ.ಪ್ರಯಾಗ್ ಅವರು RTIನಲ್ಲಿ ಮಾಹಿತಿ ಕೇಳಿದ್ದರು. ಇದೀಗ RTI ಮಾಹಿತಿ ಬಂದಿದ್ದು, ಪ್ರತಾಪ್ ಅವರ ಬಳಿ ಯಾವ ಪರವಾನಗಿಯೂ ಇಲ್ಲ ಅನ್ನೋ ಸತ್ಯ ಬಹಿರಂಗವಾಗಿದೆ.
ಕಳೆದ ಫೆಬ್ರವರಿಯಲ್ಲಿ ಪ್ರತಾಪ್ ವಿರುದ್ಧ ಆರ್.ಆರ್. ನಗರ ಪೊಲೀಸ್ ಠಾಣೆಗೆ ಪರಮೇಶ್ವರ್ ಎಂಬುವವರು ದೂರು ನೀಡಿದ್ದರು. ಪ್ರತಾಪ್ ಅವರು ಲೈಸೆನ್ಸ್ ಪಡೆಯದೇ ಡ್ರೋನ್ ಹಾರಾಟ ಮಾಡ್ತಿದ್ದಾರೆ. ಹಾರಾಟ ಮಾಡುವುದು ಅಷ್ಟೇ ಅಲ್ಲದೆ ಮಾರಾಟ ಕೂಡ ಮಾಡ್ತಿದ್ದಾರೆಂದು ದೂರು ದಾಖಲು ಮಾಡಲಾಗಿತ್ತು.
ಡ್ರೋನ್ ಪ್ರತಾಪ್ ವಿರುದ್ಧ ನೀಡಿದ ದೂರಿನ ಅನ್ವಯ ಡಾ.ಪ್ರಯಾಗ್ & ಟೀಂ RTIನಲ್ಲಿ ಲೈಸೆನ್ಸ್ ಬಗ್ಗೆ ಅರ್ಜಿ ಸಲ್ಲಿಸಿತ್ತು. ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ (DGCA)ಗೆ ಆರ್.ಟಿ.ಐನಲ್ಲಿ ಈ ಬಗ್ಗೆ ಮಾಹಿತಿ ನೀಡಲು ಕೋರಲಾಗಿತ್ತು. ಆರ್.ಟಿ.ಐ ನೀಡಿದ ಮಾಹಿತಿಯಲ್ಲಿ ಡ್ರೋನ್ ಪ್ರತಾಪ್‌ಗೆ ಯಾವುದೇ ಪರವಾನಗಿ ಇಲ್ಲ ಅನ್ನೋ ಮಾಹಿತಿ ಬಯಲಾಗಿದೆ.
ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ಸಿಕ್ಕ ಬೈಕ್ ಬಡವರಿಗೆ ದಾನ.. ಸುದೀಪ್ಗೆ ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್ ಪ್ರತಾಪ್
RTI ನೀಡಿರುವ ಮಾಹಿತಿ ಪ್ರಕಾರ ಡ್ರೋನ್ ಪ್ರತಾಪ್ ಅವರು ಡ್ರೋನ್ ಹಾರಿಸಲಿಕ್ಕೆ ಡ್ರೋನ್ ತಯಾರಿಸಲಿಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲ. ಅವರು ಅಧಿಕೃತವಾಗಿ ಲೈಸೆನ್ಸ್ ಪಡೆಯದ ಹೊರೆತು ಈ ರೀತಿಯ ಚಟುವಟಿಕೆಯಲ್ಲಿ ಭಾಗಿಯಾಗುವುದು ತಪ್ಪಾಗುತ್ತದೆ. ಬಿಗ್‌ಬಾಸ್‌ನಲ್ಲಿ ಡ್ರೋನ್ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡು ಪ್ರತಾಪ್ ಅವರು ಮಾತನಾಡುತ್ತಿದ್ದರು. ಇದೀಗ ಡ್ರೋನ್ ಪ್ರತಾಪ್ ಅವರ ಬಳಿ ಲೈಸೆನ್ಸ್ ಇಲ್ಲ ಅನ್ನೋ ಮಾಹಿತಿ ಬಯಲಾಗಿರೋದು ಕುತೂಹಲಕ್ಕೆ ಕಾರಣವಾಗಿದೆ.