newsfirstkannada.com

6 ವರ್ಷ ಕೋಮಾಕ್ಕೆ ತಳ್ಳಿದ್ದ ವೈದ್ಯರಿಂದ ಬಾಲಕ ಸಾವು.. ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

Share :

Published January 12, 2024 at 1:07pm

    2017ರ ಏಪ್ರಿಲ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದ ವಿಘ್ನೇಶ್

    ವಿಘ್ನೇಶ್ ಚಿಕಿತ್ಸೆಗೆ 19 ಲಕ್ಷ ಖರ್ಚು ಮಾಡಿದ್ದ ಕುಟುಂಬಸ್ಥರು

    6 ವರ್ಷ ಕೋಮಾದಲ್ಲಿದ್ದ ಬಾಲಕ ಜನವರಿ 3, 2024ರಂದು ಸಾವು

ಬೆಂಗಳೂರು: ಖಾಸಗಿ ಆಸ್ಪತ್ರೆ ವೈದರು ಮಾಡಿದ ಯಡವಟ್ಟಿಗೆ ಬಾಲಕನೋರ್ವ 6 ವರ್ಷ ನರಳಿ, ನರಳಿ ಕೊನೆಯುಸಿರು ಬಿಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಹರ್ನಿಯಾ ಚಿಕಿತ್ಸೆಗೆ ದಾಖಲಾಗಿದ್ದ ವಿಘ್ನೇಶ್‌, ನಿರಂತರ 6 ವರ್ಷಗಳ ಕಾಲ ಕೋಮಾದಲ್ಲಿ ನರಕ ಯಾತನೆ ಅನುಭವಿಸಿ ಪ್ರಾಣ ಬಿಟ್ಟಿದ್ದಾನೆ. ಮಹಾರಾಜ ಅಗ್ರಸೇನಾ ಆಸ್ಪತ್ರೆಯ ವಿರುದ್ಧ ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದು, ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ 2017ರ ಏಪ್ರಿಲ್ 4ರಂದು 20 ವರ್ಷದ ಈ ವಿಘ್ನೇಶ್ ಸುಬ್ರಹ್ಮಣ್ಯನಗರದಲ್ಲಿರುವ ಮಹಾರಾಜ ಅಗ್ರಸೇನಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಇಲ್ಲಿನ ವೈದ್ಯರು ಹರ್ನಿಯಾ ಶಸ್ತ್ರ ಚಿಕಿತ್ಸೆ ವೇಳೆ 3 ಬಾರಿ ಅನೆಸ್ತೇಷಿಯಾ ಕೊಟ್ಟಿದ್ದಾರೆ. ಅನೆಸ್ತೇಷಿಯಾ ನೀಡಿದಾಗಿನಿಂದ ವಿಘ್ನೇಶ್‌, ಪ್ರಜ್ಞೆ ಕಳೆದುಕೊಂಡಿದ್ದಾನೆ. ಅಂದೇ ಕುಟುಂಬಸ್ಥರು ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ.

ಕೋಮಾದಲ್ಲಿದ್ದ ವಿಘ್ನೇಶ್‌ ಗುಣಮುಖನಾಗಲು ಪೋಷಕರು ಚಿಕಿತ್ಸೆಗೆಂದು ಬರೋಬ್ಬರಿ 19 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ನಿರಂತರ 6 ವರ್ಷ ಕೋಮಾದಲ್ಲಿ ನರಳಿ, ನರಳಿ ಕಳೆದ ಜನವರಿ 3ರಂದು ಸಾವನ್ನಪ್ಪಿದ್ದಾನೆ. ವಿಘ್ನೇಶ್ ಸಾವಿಗೆ ದಿಗ್ಭ್ರಾಂತರಾದ ವಿಘ್ನೇಶ್ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೈಕ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಬಸ್; ಮಾವ, ಅಳಿಯ ಸ್ಥಳದಲ್ಲೇ ಸಾವು

ವಿಘ್ನೇಶ್ ಪೋಷಕರು ದೂರು ದಾಖಲಿಸಿದ ಮೇಲೆ ಆಸ್ಪತ್ರೆ ವೈದ್ಯರು ಚಿಕಿತ್ಸೆ ವೆಚ್ಚವನ್ನ ಭರಿಸೋದಾಗಿ ಹೇಳಿದ್ದರಂತೆ. ವಿಘ್ನೇಶ್ ಚಿಕಿತ್ಸೆಗೆ ಒಟ್ಟು 19 ಲಕ್ಷ ರೂಪಾಯಿ ಖರ್ಚು ಮಾಡಿದ್ದ ಕುಟುಂಬಸ್ಥರಿಗೆ ಆಸ್ಪತ್ರೆ ಆಡಳಿತ ಮಂಡಳಿ 5 ಲಕ್ಷ ರೂಪಾಯಿ ನೀಡಿ ಕೈ ತೊಳೆದುಕೊಂಡು ಬಿಟ್ಟಿದೆ. ಬಾಕಿ ಚಿಕಿತ್ಸಾ ವೆಚ್ಚ ನೀಡದೆ ಇದೀಗ ಬೆದರಿಕೆ ಹಾಕಿದ್ದಾರೆಂದು ವಿಘ್ನೇಶ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದೀಗ ಮತ್ತೆ ಬನಶಂಕರಿ ಪೊಲೀಸ್‌ ಠಾಣೆಗೆ ಈ ಸಂಬಂಧ ದೂರು ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ವರ್ಷ ಕೋಮಾಕ್ಕೆ ತಳ್ಳಿದ್ದ ವೈದ್ಯರಿಂದ ಬಾಲಕ ಸಾವು.. ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

https://newsfirstlive.com/wp-content/uploads/2024/01/Bangalore-Boy-Death.jpg

Load More