ಪೋಷಕರೇ ಎಚ್ಚರ.. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದ ಬಾಲಕ ದಾರುಣ ಸಾವು

author-image
admin
Updated On
ಪೋಷಕರೇ ಎಚ್ಚರ.. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದ ಬಾಲಕ ದಾರುಣ ಸಾವು
Advertisment
  • ಶಾಲೆಯ ರಜೆ ವೇಳೆ ಆಟವಾಡಲು ಹೋದ ಮಕ್ಕಳ ಸಾಲು, ಸಾಲು ದುರಂತ
  • ಅಜ್ಜಿ ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕ ಮಾವನ ಜೊತೆ ಹೋಗಿದ್ದ
  • ಮಗನ ದೇಹ ಛಿದ್ರ, ಛಿದ್ರವಾಗಿರೋದನ್ನ ಕಂಡು ಮುಗಿಲು ಮುಟ್ಟಿದ ಆಕ್ರಂದನ

ಮೈಸೂರು: ಶಾಲೆಯ ರಜೆ ವೇಳೆ ಆಟವಾಡಲು ಹೋದ ಮಕ್ಕಳು ಸಾವನ್ನಪ್ಪಿರುವ ಸಾಲು, ಸಾಲು ಘಟನೆಗಳು ನಡೆದಿದೆ. ಇತ್ತೀಚೆಗೆ ಈಜಲು ಹೋದ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ದುರಂತಗಳು ಮಾಸುವ ಮುನ್ನವೇ ಮೈಸೂರಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಅಜ್ಜಿ ಮನೆಗೆ ಬಂದಿದ್ದ ಬಾಲಕನ ದೇಹ ಟ್ರ್ಯಾಕ್ಟರ್‌ಗೆ ಸಿಲುಕಿ ಛಿದ್ರ, ಛಿದ್ರವಾದ ಭಯಾನಕ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ. ಭವಿಷ್ ಮೃತ ಬಾಲಕ.

ಇದನ್ನೂ ಓದಿ:ಪೋಷಕರೇ ಎಚ್ಚರ.. ಶಾಲೆಗೆ ರಜೆ ಎಂದು ನೀರಿನ ಹೊಂಡಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವು 

8 ವರ್ಷದ ಭವಿಷ್ ದೇವರಸನಹಳ್ಳಿಯ ಮಮತಾ ಪುತ್ರ. ಚಾಮರಾಜನಗರಕ್ಕೆ ವಿವಾಹವಾಗಿದ್ದ ಮಮತಾ ಅವರು ಮಕ್ಕಳ ಸಮೇತ ತವರು ಮನೆಗೆ ಬಂದಿದ್ದಾರೆ. ನಿನ್ನೆ ಮಧ್ಯಾಹ್ನ ಈ ದಾರುಣ ಘಟನೆ ನಡೆದಿದೆ.

ಅಜ್ಜಿ ಮನೆಯಲ್ಲಿ ಆಟವಾಡುತ್ತಿದ್ದ ಭವಿಷ್, ಸೋದರ ಮಾವನ ಜತೆ ಜಮೀನಿಗೆ ಹೋಗಿದ್ದ. ಟ್ರ್ಯಾಕ್ಟರ್ ರೊಟಾವೆಲ್ಟರ್‌ನಲ್ಲಿ ಉಳುಮೆ ಮಾಡುವಾಗ ಭವಿಷ್ ಕೆಳಗೆ ಬಿದ್ದಿದ್ದಾನೆ. ಟ್ರ್ಯಾಕ್ಟರ್‌ ಉಳುಮೆಗೆ ಸಿಲುಕಿದ ಭವಿಷ್ ದೇಹ ಛಿದ್ರ, ಛಿದ್ರವಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment