newsfirstkannada.com

ಸುತ್ತಿಗೆಯಿಂದ ಸ್ವಂತ ತಮ್ಮನ ತಲೆಗೆ ಹೊಡೆದು ಸಾಯಿಸಿದ ಪಾಪಿ ಅಣ್ಣ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Share :

Published May 19, 2024 at 1:57pm

  7ನೇ ತರಗತಿ ಓದುತ್ತಿದ್ದ ಪ್ರಾಣೇಶ್ ಅಪ್ಪ-ಅಮ್ಮನ ಬಳಿ ಬಂದಿದ್ದ

  ಮೃತ ಬಾಲಕನ ಜೊತೆ ಆಟವಾಡುತ್ತಿದ್ದಾಗ ಆರೋಪಿಯ ಜಗಳ

  ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹೊಡೆದು ನಾಟಕವಾಡಿದ್ದ

ಬೆಂಗಳೂರು: ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಪ್ರಾಣೇಶ್ ಕುಟುಂಬಸ್ಥರು ಆಂಧ್ರದ ಸೂಳೆಕೆರಿ ಗ್ರಾಮದವರು. ಇವರು ಉದ್ಯೋಗಕ್ಕಾಗಿ ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದರು. ಮೃತ ಬಾಲಕ ಪ್ರಾಣೇಶ್‌ ಆಂಧ್ರದಲ್ಲಿ 7ನೇ ತರಗತಿ ಓದುತ್ತಿದ್ದ. ಅಜ್ಜಿಯ ಜೊತೆಗೆ ವಾಸವಿದ್ದ ಪ್ರಾಣೇಶ್‌, ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೆರಿಗಾ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿ ಬಳಿಗೆ ಬಂದಿದ್ದ.

ಇದನ್ನೂ ಓದಿ: ಪೋಷಕರೇ ಎಚ್ಚರ.. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದ ಬಾಲಕ ದಾರುಣ ಸಾವು 

ಪ್ರಾಣೇಶ್‌ನ ಅಣ್ಣ 18 ವರ್ಷದ ಶಿವಕುಮಾರ್ ತಮ್ಮನನ್ನೇ ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿರುವ ಆರೋಪಿ 3 ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿದ್ದ ಕುಟುಂಬದ ಜೊತೆ ಆರೋಪಿ ಕೂಡ ಗಾರೇ ಕೆಲಸ ಮಾಡುತ್ತಿದ್ದ.

ತಮ್ಮನನ್ನೇ ಕೊಲೆ ಮಾಡಿದ ಆರೋಪಿ ಶಿವಕುಮಾರ್

ತಮ್ಮನನ್ನೇ ಕೊಲೆಗೈದ ಅಣ್ಣ!
ಮೊಬೈಲ್​ನಲ್ಲಿ ಅಣ್ಣ ಶಿವಕುಮಾರ್ ಆನ್​ಲೈನ್ ಗೇಮ್ ಆಡುತ್ತಿದ್ದ. ಅಜ್ಜಿ ಮನೆಯಿಂದ ಬಂದಿದ್ದ ಪ್ರಾಣೇಶ್ ಕೂಡ ಫೋನ್​ನಲ್ಲಿ ಆನ್‌ಲೈನ್‌ ಗೇಮ್ ಆಡುತ್ತಿದ್ದ. ಪ್ರಾಣೇಶ್ ಮೊಬೈಲ್ ಕೊಡದೆ ಒಬ್ಬನೇ ಗೇಮ್ ಆಡುತ್ತಿದ್ದ. ಇಬ್ಬರು ಮೊಬೈಲ್​ಗಾಗಿ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು.

ಕಳೆದ ಮೇ 15ನೇ ತಾರೀಖು ತಮ್ಮನನ್ನೇ ಕೊಲೆ ಮಾಡಲು ಅಣ್ಣ ಸ್ಕೆಚ್ ಹಾಕಿದ್ದಾನೆ. ಕೆಲಸದ ಸ್ಥಳದಿಂದ ಸುತ್ತಿಗೆ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದಾನೆ. ಬಯಲು ಶೌಚಾಲಯಕ್ಕೆ ಹೋಗಿದ್ದ ಪ್ರಾಣೇಶನನ್ನು ಹಿಂಬಾಲಿಸಿಕೊಂಡು ಅಲ್ಲೇ ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಾಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮನೆಯವರಿಗೆ ತಮ್ಮ ಪ್ರಾಣೇಶ್‌ ಶವ ಇರುವ ಬಗ್ಗೆ ಶಿವಕುಮಾರ್​ ಹೇಳಿದ್ದ. ಅಣ್ಣನ ಮೇಲೆ ಪೊಲೀಸರಿಗೆ ಸಂಶಯ ಬಂದಿದ್ದು, ಸ್ಟೇಷನ್​ನಲ್ಲಿ ಕರೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ಸತ್ಯ ಬಾಯ್ಬಿಟ್ಟಿದ್ದಾನೆ. ಸರ್ಜಾಪುರ ಪೋಲೀಸರು ಸಹೋದರ ಶಿವಕುಮಾರ ಅನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುತ್ತಿಗೆಯಿಂದ ಸ್ವಂತ ತಮ್ಮನ ತಲೆಗೆ ಹೊಡೆದು ಸಾಯಿಸಿದ ಪಾಪಿ ಅಣ್ಣ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/05/Bangalore-Boy-Murder-Case.jpg

Load More