ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವಾಗ ಎದ್ದು ಬಂದ ಉದ್ಯಮಿ; ಪೋಸ್ಟ್‌ಮಾರ್ಟಂ ಮಾಡಿದ್ದ ಪೊಲೀಸರಿಗೆ ಶಾಕ್‌!

author-image
admin
Updated On
ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವಾಗ ಎದ್ದು ಬಂದ ಉದ್ಯಮಿ; ಪೋಸ್ಟ್‌ಮಾರ್ಟಂ ಮಾಡಿದ್ದ ಪೊಲೀಸರಿಗೆ ಶಾಕ್‌!
Advertisment
  • ಸತ್ತೇ ಹೋಗಿದ್ದಾನೆ ಅಂದುಕೊಂಡಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರ
  • ತನ್ನದೇ ಶ್ರದ್ಧಾಂಜಲಿ ಸಭೆ ನಡೆಯುವಾಗ ಜೀವಂತವಾಗಿ ಬಂದರು
  • ಸತ್ತ ವ್ಯಕ್ತಿ ಬದುಕಿ ಬಂದ ಮೇಲೆ ಪೊಲೀಸರಿಗೆ ಹೊಸ ತಲೆನೋವು

ಸತ್ತೇ ಹೋಗಿದ್ದಾನೆ ಅಂದುಕೊಂಡಿದ್ದ ವ್ಯಕ್ತಿ ಸ್ಮಶಾನದಲ್ಲಿ ಬದುಕಿದ ಹಲವು ಘಟನೆಗಳು ನಡೆದಿದೆ. ಅಂತ್ಯಕ್ರಿಯೆ ಮುಗಿದ ಮೇಲೂ ಸತ್ತು ಹೋಗಿದ್ದಾನೆ ಅಂದುಕೊಂಡಿದ್ದವರು ಪ್ರತ್ಯಕ್ಷವಾದ ಅಚ್ಚರಿಯ ಘಟನೆಗಳು ಬೆಳಕಿಗೆ ಬಂದಿವೆ. ಇಂತಹದೇ ಒಂದು ಅಪರೂಪದ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವರದಿಯಾಗಿದೆ. ತನ್ನದೇ ಶ್ರದ್ಧಾಂಜಲಿ ಸಭೆ ನಡೆಯುವಾಗ ಉದ್ಯಮಿ ಜೀವಂತವಾಗಿ ಬಂದು ಎಲ್ಲರಿಗೂ ಡಬಲ್‌ ಶಾಕ್ ಕೊಟ್ಟಿದ್ದಾರೆ.

ಕಳೆದ ಅಕ್ಟೋಬರ್ 27ರಂದು ಬ್ರಿಜೇಶ್ ಸುತಾರ್ ಎಂಬ 43 ವರ್ಷದ ವ್ಯಕ್ತಿ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಿದ್ದ ಮನೆಯವರು ಕೊನೆಗೆ ಪೊಲೀಸರಿಗೆ ದೂರು ಕೊಟ್ಟಿದ್ದರು. ನಾಪತ್ತೆ ಪ್ರಕರಣ ದಾಖಲಿಸಿದ್ದ ಪೊಲೀಸರಿಗೆ ಒಂದು ಅನಾಥ ಶವ ಸಿಕ್ಕಿತ್ತು. ಆ ಶವವನ್ನು ಬ್ರಿಜೇಶ್ ಕುಟುಂಬಸ್ಥರಿಗೆ ತೋರಿಸಲಾಗಿತ್ತು. ಅನಾಥ ಶವದ ಗುರುತು ಪತ್ತೆ ಹಚ್ಚಿದ ಮನೆಯವರು ಇದು ಬ್ರಿಜೇಶ್ ಅವರದ್ದೇ ಎಂದು ಹೇಳಿದ್ದರು.

ಇದನ್ನೂ ಓದಿ: Pregnancy Job: 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ ಲಕ್ಷ, ಲಕ್ಷ ಸಂಬಳ; ನಿರುದ್ಯೋಗಿ ಯುವಕರಿಗೆ ಹೊಸ ಆಫರ್‌! 

ಸುಟ್ಟು ಕರಕಲಾಗಿದ್ದ ಅನಾಥ ಶವವನ್ನೇ ಬ್ರಿಜೇಶ್ ಸುತಾರ್ ಎಂದು ನಂಬಿದ್ದ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದರು. ಅಂತ್ಯ ಸಂಸ್ಕಾರದ ಬಳಿಕ ಇದೇ ನವೆಂಬರ್ 14ರಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಸಭೆ ನಡೆಸಲಾಗುತ್ತಿತ್ತು. ಶ್ರದ್ಧಾಂಜಲಿ ಸಲ್ಲಿಸುವ ಸಮಾರಂಭಕ್ಕೆ ನಾಪತ್ತೆಯಾಗಿದ್ದ ಬ್ರಿಜೇಶ್ ಸುತಾರ್ ಅವರು ಜೀವಂತವಾಗಿ ಆಗಮಿಸಿದ್ದು ತಮ್ಮದೇ ಶ್ರದ್ಧಾಂಜಲಿ ಸಭೆ ನೋಡಿ ಶಾಕ್ ಆಗಿದ್ದಾರೆ.

ಕಳೆದು ಹೋಗಿದ್ದ ಬ್ರಿಜೇಶ್ ಸುತಾರ್ ಬದುಕಿ ಬಂದಿದ್ದು ಕುಟುಂಬಸ್ಥರು ಸಮಾಧಾನ ತಂದಿದೆ. ಶ್ರದ್ಧಾಂಜಲಿ ಸಭೆಯಲ್ಲಿದ್ದ ಎಲ್ಲರೂ ಬ್ರಿಜೇಶ್ ನೋಡಿ ದಂಗಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದ ಪೊಲೀಸರಿಗೆ ಹೊಸ ತಲೆನೋವು ಆರಂಭವಾಗಿದೆ. ಬ್ರಿಜೇಶ್‌ರದ್ದು ಎಂದು ಗುರುತಿಸಿದ್ದ ಅನಾಥ ಶವ ಯಾರದ್ದು. ಆ ಸಾವಿಗೆ ಕಾರಣವೇನು ಅನ್ನೋದರ ತನಿಖೆಯನ್ನು ಆರಂಭಿಸಿದ್ದಾರೆ.

ಯಾರು ಈ ಬ್ರಿಜೇಶ್? ನಾಪತ್ತೆಗೆ ಕಾರಣ!
ಉದ್ಯಮಿ ಬ್ರಿಜೇಶ್ ಸುತಾರ್ ಎಂಬುವವರು ಗುಜರಾತ್‌ನಲ್ಲಿ ಪಿಂಟು ಎಂದೇ ಖ್ಯಾತಿಗಳಿಸಿದ್ದರು. ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದ್ದ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಷೇರು ಪೇಟೆಯಲ್ಲಿ ನಷ್ಟ ಅನುಭವಿಸಿದ್ದ ಬ್ರಿಜೇಶ್ ಸಾಕಷ್ಟು ಒತ್ತಡದಲ್ಲಿದ್ದರು. ನರೊಡಾ, ಅಹ್ಮದಾಬಾದ್‌ನಲ್ಲಿ ನೆಲೆಸಿದ್ದ ಬ್ರಿಜೇಶ್ ಸುತಾರ್ ಅವರು ಒತ್ತಡದ ಚಿಂತೆಯಲ್ಲೇ ಮನೆ ಬಿಟ್ಟು ಹೋಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment