/newsfirstlive-kannada/media/post_attachments/wp-content/uploads/2024/08/Ganja.jpg)
ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ
ಸಿಲಿಕಾನ್ ಸಿಟಿಯ ಅದೊಂದು ಜಾಗ ಹಚ್ಚ ಹಸಿರಿನಿಂದ ಕುಣಿದಾಡ್ತಿತ್ತು. ಆ ಕರಾಳ ಸ್ಮಾಶನದ ಅಂತರಂಗ ನಶೆಯಲ್ಲಿ ನಲಿದಾಡ್ತಿತ್ತು. ಅನುಮಾನದ ಘಾಟಿನಿಂದ ಅಲ್ಲಿಗೆ ಕಾಲಿಟ್ಟ ಪೊಲೀಸರಿಗೆ ಒಂದು ಕ್ಷಣ ತಲೆ ತಿರುಗಿತ್ತು. ಅಷ್ಟಕ್ಕೂ ಹಸಿರು ಕಾನನದ ಮಧ್ಯೆ ಪೊಲೀಸರಿಗೆ ಕಂಡಿದ್ದೇನು ಗೊತ್ತಾ?.
‘ಭೀಮಾ’ ನಟ ವಿಜಯ್ ನಟನೆಯ ಸೆನ್ಸೇಷನಲ್ ಸಿನಿಮಾ. ಹೇಗೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಮತ್ತಿನ ಲೋಕದಲ್ಲಿ ಬಿದ್ದು ಹಾಳಾಗ್ತಿದ್ದಾರೆ ಅನ್ನೋ ಕಥೆ ಹೇಳಿದ ಚಿತ್ರ. ಆದ್ರೆ ಅದು ಸಿನಿಮಾದ ಕಥೆ. ಇದು ಸತ್ಯ ಕಥೆ. ವ್ಯತ್ಯಾಸವೇನಿಲ್ಲ. ಥೇಟ್ ಆ ಸಿನಿಮಾದ ರೀತಿಯೇ ಇಲ್ಲೂ ಕೂಡ ಗಾಂಜಾ ವ್ಯಸನಿಗಳು ಸ್ಮಶಾನವನ್ನೇ ಡ್ರಗ್​ ಹಾಟ್​ ಸ್ಪಾಟ್ ಮಾಡಿಕೊಂಡಿದ್ದಾರೆ.
[caption id="attachment_82391" align="alignnone" width="800"]
ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ[/caption]
ಇದು ಬರೀ ಗಿಡಗಳಲ್ಲ. ನಶೆ ಏರಿಸೋ ಗಿಡಗಳು. ಯಲಹಂಕದ ಅಟ್ಟೂರು ಸ್ಮಶಾನದ ದಶದಿಕ್ಕಲ್ಲೂ ಗಾಂಜಾ ಗಿಡಗಳು ತಲೆ ಎತ್ತಿ ನಿಂತಿವೆ. ಮಾಹಿತಿ ಸಿಕ್ಕಿ ರೇಡ್ ಮಾಡಿದ ಯಲಹಂಕ ನ್ಯೂ ಟೌನ್ ಪೊಲೀಸರು ಅಲ್ಲಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನ ಕಿತ್ತು ವಶಕ್ಕೆ ಪಡೆದಿದ್ದಾರೆ. ಆದ್ರೆ ಈ ದೃಶ್ಯಗಳು ಹತ್ತಾರು ಅನುಮಾನಗಳನ್ನ ಮೂಡಿಸಿವೆ.
/newsfirstlive-kannada/media/post_attachments/wp-content/uploads/2024/08/ganja-3.jpg)
ಇದರ ಹಿಂದಿದೆಯಾ ದೊಡ್ಡ ಮಾಫಿಯಾದ ಗ್ಯಾಂಗ್​?
ಹೀಗೆ ಸಾಲು ಸಾಲು ಅನುಮಾನಗಳು ಮೂಡಿದ್ದು, ಈ ಸ್ಮಶಾನಕ್ಕೆ ಯಾಱರು ಬರ್ತಿದ್ರು ಅನ್ನೋ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
[caption id="attachment_82393" align="alignnone" width="800"]
ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ[/caption]
ಒಟ್ಟಿನಲ್ಲಿ ಈ ಗಾಂಜಾ ಗಿಡಗಳ ಹಿಂದಿರುವ ಕಾಣದ ಕೈಗಳನ್ನ ಆದಷ್ಟು ಬೇಗ ಪೊಲೀಸರು ಪತ್ತೆ ಹಚ್ಚಬೇಕಿದೆ. ಸಿಟಿಯಲ್ಲಿ ತಲೆ ಎತ್ತಿರುವ ನಶೆ ಲೋಕವನ್ನ ಬುಡಸಮೇತ ಕಿತ್ತು ಹಾಕಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us