newsfirstkannada.com

ಬೈಕ್​-ಕಾರು ನಡುವೆ ಭೀಕರ ಅಪಘಾತ.. ಪೊಲೀಸ್​​​​ ಹೆಡ್ ಕಾನ್​​ಸ್ಟೇಬಲ್ ಸಾವು

Share :

Published April 9, 2024 at 11:23pm

  ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ನಡೆದ ಅವಘಡ

  ಆಸ್ಪತ್ರೆಗೆ ಕರೆದುಕೊಂಡು ಹೋದರು ಬದುಕಲಿಲ್ಲ ಪೊಲೀಸ್

  ಕ್ರಾಸ್ ಬಳಿ ಕಾರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ

ಚಿಕ್ಕಮಗಳೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಹೆಡ್ ಕಾನ್​ಸ್ಟೇಬಲ್ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ತಂಗಲಿ ಕ್ರಾಸ್​ನಲ್ಲಿ ನಡೆದಿದೆ.

ಕಡೂರು ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಮಲ್ಲಿಕ್ ಸಾವನ್ನಪ್ಪಿರುವ ಅಧಿಕಾರಿ. ಇವರು ತಮ್ಮ ಕರ್ತವ್ಯ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಂಗಲಿ ಕ್ರಾಸ್ ಬಳಿ ಕಾರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಪರಿಣಾಮ ಹೆಡ್ ಕಾನ್​ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​-ಕಾರು ನಡುವೆ ಭೀಕರ ಅಪಘಾತ.. ಪೊಲೀಸ್​​​​ ಹೆಡ್ ಕಾನ್​​ಸ್ಟೇಬಲ್ ಸಾವು

https://newsfirstlive.com/wp-content/uploads/2024/04/POLICE.jpg

Load More