newsfirstkannada.com

ಲಾರಿಗೆ ಡಿಕ್ಕಿ ಹೊಡೆದ ಪರೀಕ್ಷೆ ಬರೆಯಲು ತೆರಳುತ್ತಿದ್ದ 11 ಮಕ್ಕಳಿದ್ದ ಕಾರು.. ಚಾಲಕ ಸೇರಿ ಇಬ್ಬರು ವಿದ್ಯಾರ್ಥಿಗಳು ಸಾವು

Share :

Published April 1, 2024 at 7:20am

  ಕಾರಿನಲ್ಲಿ ಒಟ್ಟು 11 ಮಕ್ಕಳಿದ್ದು, ಪರೀಕ್ಷೆ ಬರೆಯಲು ತೆರಳುತ್ತಿದ್ದರು

  ಹೈವೇಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಗೆ ಬಂದು ಡಿಕ್ಕಿ ಹೊಡೆದ ಕಾರು

  ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ದೆಹಲಿ: ಅಲ್ಲಿನ ಗಾಜಿಯಾಬಾದ್ ಬಳಿಯ ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಈ ಭೀಕರ ರಸ್ತೆ ಅಪಘಾತದ ದೃಶ್ಯ ಎಲ್ಲೆಡೆ ವೈರಲ್‌ ಆಗ್ತಿದೆ.

ಎಕ್ಸ್‌ಪ್ರೆಸ್‌ ವೇಯಲ್ಲಿ ಸಾಗುತ್ತಿದ್ದ ಕಾರು, ಟ್ರಕ್‌ಗೆ ಡಿಕ್ಕಿಯಾಗಿದೆ, ಬಳಿಕ ಒಂದೆರಡು ಬಾರಿ ತಿರುಗಿ ಮತ್ತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇನ್ನೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದ್ರಿಂದಾಗಿ ಕಾರು ಜಖಂಗೊಂಡಿದ್ದು, ಚಾಲಕ ಸೇರಿ ಪರೀಕ್ಷೆ ಬರೆಯಲು ಹೊರಟಿದ್ದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಏರ್ಟಿಗಾ ಕಾರು 11 ಮಕ್ಕಳನ್ನು ಆಮ್ರೋದಾದಿಂದ ಹೊತ್ತೊಯ್ಯುತ್ತಾ ಸಾಗಿತ್ತು. ಈ ವೇಳೆ ಡಂಪರ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 11 ಮಕ್ಕಳು ಮತ್ತು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ 2 ಮಕ್ಕಳು ಮ್ತು ಚಾಲಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಸುಮಲತಾ ಮನೆಗೆ HDK ಭೇಟಿ.. ಅಲ್ಲಿ ಏನೆಲ್ಲಾ ಚರ್ಚೆ ಆಯ್ತು? ಶತ್ರುತ್ವಕ್ಕೆ ತಿಲಾಂಜಲಿ ಹಾಡಿದ್ರಾ? ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ

ಗಾಯಗೊಂಡ ಮಕ್ಕಳನ್ನು 10-12 ವರ್ಷದವರು ಎಂದು ತಿಳಿದುಬಂದಿದೆ. ದೆಹಲಿ ಜಾಮೀಯಾದಲ್ಲಿ 6ನೇ ತರಗತಿ ಪರೀಕ್ಷೆ ಬರೆಯಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಟ್ರಕ್​ ಚಾಲಕನನ್ನು ಈಗಾಗಲೇ ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾರಿಗೆ ಡಿಕ್ಕಿ ಹೊಡೆದ ಪರೀಕ್ಷೆ ಬರೆಯಲು ತೆರಳುತ್ತಿದ್ದ 11 ಮಕ್ಕಳಿದ್ದ ಕಾರು.. ಚಾಲಕ ಸೇರಿ ಇಬ್ಬರು ವಿದ್ಯಾರ್ಥಿಗಳು ಸಾವು

https://newsfirstlive.com/wp-content/uploads/2024/04/Delhi-Accident.png

Load More