newsfirstkannada.com

ಹುರುಳಿ ಸೊಪ್ಪಿನಿಂದ ಬೆಂಕಿಗಾಹುತಿಯಾದ ಕಾರು.. ಐವರು ಪ್ರಯಾಣಿಕರು ಗ್ರೇಟ್​ ಎಸ್ಕೇಪ್​

Share :

Published January 13, 2024 at 9:21am

    ರಸ್ತೆ ಮೇಲೆ ಒಕ್ಕಣೆಗೆ ಎಂದು ಹಾಕಿದ್ದ ಹುರುಳಿ ಸೊಪ್ಪಿನಿಂದ ಬೆಂಕಿ

    ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಐವರು ಪ್ರಯಾಣಿಕರು

    ಹುರುಳಿ ಸೊಪ್ಪಿನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದಾದ್ರೂ ಹೇಗೆ.?

ಮೈಸೂರು: ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕಾರಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಭಸ್ಮವಾದ ಘಟನೆ ನಂಜನಗೂಡು ತಾಲೂಕಿನ ಎಸ್​ ಹೊಸಕೋಟೆ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್​ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಸ್. ಹೊಸಕೋಟೆ ಗ್ರಾಮದ ಬಳಿಯ ರಸ್ತೆಯಲ್ಲಿ ಒಕ್ಕಣೆಗೆಂದು ಹುರುಳಿ ಸೊಪ್ಪು ಹಾಕಿದ್ದಾರೆ. ಈ ಹುರುಳಿ ಸೊಪ್ಪಿನ ಮೇಲೆ ಕಾರು ಚಲಿಸುವ ವೇಳೆ ಚಕ್ರಗಳಿಗೆ ಸೊಪ್ಪು ಸಿಲುಕಿಕೊಂಡಿದೆ. ಪರಿಣಾಮ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಮೊದಲೇ ಗಮನಿಸಿದ್ದ ಕಾರಿನಲ್ಲಿದ್ದ ಐವರು ತಕ್ಷಣ ಕಾರು ನಿಲ್ಲಿಸಿ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟೋತ್ತಿಗೆ ಕಾರೆಲ್ಲ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಇನ್ನು ಈ ಸಂಬಂಧ ಸ್ಥಳಕ್ಕೆ ಬಿಳಿಗೆರೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುರುಳಿ ಸೊಪ್ಪಿನಿಂದ ಬೆಂಕಿಗಾಹುತಿಯಾದ ಕಾರು.. ಐವರು ಪ್ರಯಾಣಿಕರು ಗ್ರೇಟ್​ ಎಸ್ಕೇಪ್​

https://newsfirstlive.com/wp-content/uploads/2024/01/MYS_CAR_FIRE.jpg

Load More