/newsfirstlive-kannada/media/post_attachments/wp-content/uploads/2024/04/BBMP_LORRY.jpg)
ಬೆಂಗಳೂರು: ಕಸದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ವೈಟ್​ಫೀಲ್ಡ್​ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಗತ್ತ್ ಜಂಕ್ಷನ್​ನಲ್ಲಿ ನಡೆದಿದೆ.
ಓಡಿಶಾ ಮೂಲದ ಸಾಗರ್ ( 23) ಸಾವನ್ನಪ್ಪಿದ ಯುವಕ. ನಿನ್ನೆ ರಾತ್ರಿ 10:30ರ ವೇಳೆ ಬಾಲಗತ್ತ್ ಜಂಕ್ಷನ್​ ಬಳಿ ವೇಗವಾಗಿ ಬಂದ ಐವರು ಪ್ರಯಾಣಿಕರಿದ್ದ ಕಾರು ಕಸದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ನಾಲ್ವರು ಟೆಕ್ಕಿಗಳು ಗಾಯಗೊಂಡಿದ್ದಾರೆ. ಇವರೆಲ್ಲ ಒಡಿಶಾ ಮೂಲದವರಾಗಿದ್ದಾರೆ.
ಇದನ್ನೂ ಓದಿ: ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಕಳ್ಳ, ದೇವತೆಗೆ ಕೈ ಮುಗಿದಂತೆ ಕಳ್ಳನಾಟಕವಾಡಿದ ಚೋರ..! ವಿಡಿಯೋ
ಸದ್ಯ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us