newsfirstkannada.com

ವೇಗವಾಗಿ ಬಂದು ಬಟ್ಟೆ ಅಂಗಡಿಗೆ ನುಗ್ಗಿದ ಕಾರು.. ತಡರಾತ್ರಿ ಭಯಾನಕ ಅಪಘಾತ

Share :

Published May 8, 2024 at 11:53am

Update May 8, 2024 at 11:56am

    ಪಟ್ಟಣದ ಗಾಂಧಿ ಚೌಕ್‌ನಲ್ಲಿ ತಡರಾತ್ರಿಯಲ್ಲಿ ನಡೆದಿರುವ ಘಟನೆ

    ಕರ್ನಾಟಕ ಬ್ಯಾಂಕ್ ಕಟ್ಟಡದ ಗಜಾನನ ಟೆಕ್ಸ್​ಟೈಲ್ಸ್​ಗೆ ನುಗ್ಗಿದ ಕಾರು

    ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಆಗಿದೆ ಎಂದ ಸ್ಥಳೀಯರು

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಗೆ ನುಗ್ಗಿದ ಕಾರೊಂದು ಉಲ್ಟಾ ಬಿದ್ದಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕನಲ್ಲಿ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್​ನಲ್ಲಿ ಮೊಬೈಲ್ ಇಟ್ಟು ವಿಡಿಯೋ.. ಅಪ್ರಾಪ್ತ ಅರೆಸ್ಟ್​

ಕಾರು ವೇಗವಾಗಿ ಬಂದು ನಿಯಂತ್ರಣ ರಪ್ಪಿ ಗಾಂಧಿ ಚೌಕ್‌ದಲ್ಲಿನ ಕರ್ನಾಟಕ ಬ್ಯಾಂಕ್ ಕಟ್ಟಡದ ಗಜಾನನ ಟೆಕ್ಸ್​ಟೈಲ್ಸ್​ ಬಟ್ಟೆ ಅಂಗಡಿಗೆ ನುಗ್ಗಿದೆ. ಇದರಿಂದ ಅಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿ ಪುಡಿ, ಪುಡಿಯಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಕಾರು ಆಗುಂಬೆ ರಸ್ತೆಯಿಂದ ಛತ್ರಕೇರಿ ಕಡೆಗೆ ತಿರುಗಿಸುವ ವೇಳೆ ಬಟ್ಟೆ ಅಂಗಡಿಗೆ ಕಾರು ನುಗ್ಗಿದೆ. ಇದಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವೇಗವಾಗಿ ಬಂದು ಬಟ್ಟೆ ಅಂಗಡಿಗೆ ನುಗ್ಗಿದ ಕಾರು.. ತಡರಾತ್ರಿ ಭಯಾನಕ ಅಪಘಾತ

https://newsfirstlive.com/wp-content/uploads/2024/05/CAR-2.jpg

Load More