newsfirstkannada.com

ಹೇಗೆಂದರೆ ಹಾಗೆ ಕಾರು ಡ್ರೈವಿಂಗ್.. 2 ಆಟೋ, ಖಾಸಗಿ ಬಸ್​ಗೆ ಭಯಾನಕವಾಗಿ ಡಿಕ್ಕಿ, ಇಬ್ಬರು ಗಂಭೀರ

Share :

Published February 19, 2024 at 10:51am

  ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಜಖಂ

  ಅಪಘಾತದಲ್ಲಿ ಖಾಸಗಿ ಬಸ್ ಹಾಗೂ ಕಾರಿನ ಮುಂಭಾಗಕ್ಕೆ ಹಾನಿ

  ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿದ್ದಾನೆ ಎಂದು ಆರೋಪ

ಶಿವಮೊಗ್ಗ: ಕಾರೊಂದು ಹೇಗೆಂದರೆ ಹಾಗೇ ಚಲಿಸಿ 2 ಆಟೋ, ಒಂದು ಖಾಸಗಿ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಭದ್ರಾವತಿಯ ಅಂಬೇಡ್ಕರ್ ಸರ್ಕಲ್​ನ ಬಸ್ ನಿಲ್ದಾಣದ ಬಳಿ ರಾತ್ರಿ ನಡೆದಿದೆ.

ಅಪಘಾತದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿಯಂತ್ರಣ ತಪ್ಪಿದ ಕಾರು ಅರಂಭದಲ್ಲೇ ಅಂಬೇಡ್ಕರ್ ಸರ್ಕಲ್ ಪ್ರತಿಮೆ ಬಳಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿಯಾಗಿತ್ತು. ಬಳಿಕ ಖಾಸಗಿ ಬಸ್ ಹಾಗೂ 2 ಆಟೋಗಳಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಆಟೋ ಡ್ರೈವರ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಕಾರು ಡಿಕ್ಕಿಯಾಗಿದ್ದರಿಂದ ಒಂದು ಆಟೋ ಸಂಪೂರ್ಣ ಜಖಂ ಆಗಿದ್ದು ಇನ್ನೊಂದಕ್ಕೆ ಸ್ವಲ್ಪ ಹಾನಿಯಾಗಿದೆ. ಅದರಂತೆ ಬಸ್​ನ ಮುಂಭಾಗವೂ ಹಾನಿಯಾಗಿದೆ. ಕಾರು ಡ್ರೈವರ್ ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿದ್ದರಿಂದ ಈ ಅಪಘಾತಗಳು ನಡೆದಿವೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಸಂಬಂಧ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೇಗೆಂದರೆ ಹಾಗೆ ಕಾರು ಡ್ರೈವಿಂಗ್.. 2 ಆಟೋ, ಖಾಸಗಿ ಬಸ್​ಗೆ ಭಯಾನಕವಾಗಿ ಡಿಕ್ಕಿ, ಇಬ್ಬರು ಗಂಭೀರ

https://newsfirstlive.com/wp-content/uploads/2024/02/SMG_CAR_AUTO.jpg

Load More