newsfirstkannada.com

ಬಿಗ್​ ಬಾಸ್​​ ಮನೆಯಿಂದ ಹೊರಬಂದಿದ್ದೇ ತಡ.. ಡ್ರೋನ್​ ಪ್ರತಾಪ್​ ಮೇಲೆ ದಾಖಲಾಯ್ತು ಕೇಸ್​​!

Share :

Published January 29, 2024 at 10:58am

Update January 29, 2024 at 11:03am

    ಬಿಗ್​ ಬಾಸ್​​ 10 ರನ್ನರ್​ ಅಪ್​ ಡ್ರೋನ್​ ಪ್ರತಾಪ್​

    ಡ್ರೋನ್​ ಮೇಲೆ ರೈತರಿಂದ ಹಣ ಪಡೆದು ವಂಚಿಸಿರುವ ಆರೋಪ

    ಸುಳ್ಳು ಮಾಹಿತಿ ನೀಡಿ ಹಣ ಪಡೆದು ವಂಚಿಸಿದ್ದಾರೆಂದು ದೂರು ದಾಖಲು

ಬೆಂಗಳೂರು: ಬಿಗ್​ ಬಾಸ್​ ಸೀಸನ್​ 10 ಸ್ಪರ್ಧಿ ಡ್ರೋನ್ ಪ್ರತಾಪ್ ರನ್ನರ್​ ಅಪ್​ ಪಟ್ಟವನ್ನು ತೆಗೆದುಕೊಂಡು ದೊಡ್ಮನೆಯಿಂದ ಹೊರ ಬಂದಿದ್ದೇ ತಡ ಆತನ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ರೈತರಿಂದ ಹಣ ಪಡೆದು ವಂಚಿಸಿದ ಆರೋಪ ಆತನ ಮೇಲೆ ಕೇಳಿ ಬಂದಿದೆ.

ಡಾ.ಪ್ರಯಾಗ್ ರಿಂದ ದೂರು ದಾಖಲಾಗಿದೆ. ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ದೂರನ್ನ ಪ್ರಯಾಗ್ ದಾಖಲಿಸಿದ್ದಾರೆ.

ಡ್ರೋನ್ ಪ್ರತಾಪ್, ಸಿರಣ್ ಮಾದವ್, ಸಾರಂಗ ಸೀಮಂತ್ ಮಾನೆ ಮತ್ತು ಸಾಗರ್ ಗಾರ್ಗ್ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು. ಇವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ ಮತ್ತು ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈ.ಲಿ ಕಂಪನಿಗಳನ್ನ ತೆರೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸುಳ್ಳು ಮಾಹಿತಿ ನೀಡಿ ರೈತರಿಂದ ಹಣ ಪಡೆದು ವಂಚಿಸಿದ್ದಾರೆಂದು ಡಾ. ಪ್ರಯಾಗ್ ರಿಂದ ದೂರು ದಾಖಲಾಗಿದೆ.

ಈ ಬಗ್ಗೆ ತನಿಖೆ ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ಪ್ರಯಾಗ್ ರಿಂದ ದೂರು ನೀಡಿದ್ದಾರೆ. ಸದ್ಯ ಡ್ರೋನ್​ ಪ್ರತಾಪ್​ ನಿನ್ನೆ ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದಾರೆ. ಹೊರಬರುತ್ತಿದ್ದಂತೆಯೇ ಪ್ರತಾಪ್ ಮೇಲೆ ವಂಚನೆವ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಬಾಸ್​​ ಮನೆಯಿಂದ ಹೊರಬಂದಿದ್ದೇ ತಡ.. ಡ್ರೋನ್​ ಪ್ರತಾಪ್​ ಮೇಲೆ ದಾಖಲಾಯ್ತು ಕೇಸ್​​!

https://newsfirstlive.com/wp-content/uploads/2023/12/drone-Pratap-1-1.jpg

Load More