newsfirstkannada.com

ಗಣರಾಜೋತ್ಸವದ ವೇಳೆ ಭದ್ರತಾ ಲೋಪ ಪ್ರಕರಣ.. 62 ವರ್ಷದ ವ್ಯಕ್ತಿಯ ಹಿನ್ನೆಲೆಯೇ ವಿಚಿತ್ರ

Share :

Published January 27, 2024 at 10:17am

    ಸಿಎಂ ಸಿದ್ದರಾಮಯ್ಯ ಮುಂದೆ ನಿಂತು ಪೋಸ್ಟರ್ ಪ್ರದರ್ಶನ

    ಅನೇಕ ಬಾರಿ ಸೂಸೈಡ್​ಗೆ ಯತ್ನಿಸಿದ ಈ 62 ವರ್ಷದ ವ್ಯಕ್ತಿ ಯಾರು?

    ಸರ್ಕಾರಿ ಕಾರ್ಯಕ್ರಗಳ್ಲಿ ಭಾಗಿಯಾಗಿ ಬೇಡ

ಗಣರಾಜ್ಯೋತ್ಸವದ ದಿನದಂದು ಮಾಣೀಕ್ ಶಾ ಪರೇಡ್ ಮೈದಾನದಲ್ಲಿ ಭದ್ರತಾ ಲೋಪ ಪ್ರಕರಣ ಕಂಡುಬಂದಿತ್ತು. 62 ವರ್ಷದ ಪರಶುರಾಮ್​ ಎಂಬ ವ್ಯಕ್ತಿ ಕರಪತ್ರ ಹಿಡಿದು ಒಳನುಗ್ಗಿದ ಪ್ರಸಂಗ ನಡೆದಿತ್ತು. ಗ್ರೌಂಡ್ ಒಳಗೆ ಓಡಿ ಬಂದ ಪರಶುರಾಮ್​ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಥಾವರ್​ ಚಂದ್​ ಗೆಹ್ಲೋಟ್​ ಬಳಿ ನಿಂತು ಪೋಸ್ಟರ್ ಪ್ರದರ್ಶನ ಮಾಡಿದ್ದರು. ಇಷ್ಟೆಲ್ಲಾ ಅವಾಂತರ ಮಾಡಿದ ಈ ವ್ಯಕ್ತಿಯ ಹಿನ್ನೆಲೆ ಬೆಳಕಿಗೆ ಬಂದಿದ್ದು, ಈ ಮೊದಲು ಸಹ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಹೈಡ್ರಾಮ ಸೃಷ್ಟಿಸಿದ್ದರು.

ಪ್ರೆಸ್ ಪಾಸ್ ಮೂಲಕ ಎಂಟ್ರಿ

ನಿನ್ನೆ ಪರಶರಾಮ್​ ಪ್ರೆಸ್ ಪಾಸ್ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ವ್ಯಕ್ತಿ 1993 ರಲ್ಲಿ ಕೆಪಿಎಸ್​ಸಿ ಪರೀಕ್ಷೆ ಬರೆದಿದ್ದು, ಆದರೆ ಪರೀಕ್ಷೆಯ ಫಲಿತಾಂಶವನ್ನು ಸರ್ಕಾರ ಹೋಲ್ಡ್ ಮಾಡಿತ್ತು. ಇದರಿಂದ ಪರುಶರಾಮ್ ಬೇಸತ್ತಿದ್ದಾರೆ. ಪೊಲೀಸರ ಬಳಿ ಕೆಪಿಎಸ್ ಸಿ ಪರೀಕ್ಷೆ ರಿಸಲ್ಟ್ ಬಿಟ್ಟಿದ್ರೆ ನಾನು ಪಾಸಗಿರುತ್ತಿದ್ದೆ ಎಂದು ಹೇಳಿದ್ದಾರೆ.

ಸಿಎಂ ಮುಂದೆ ಸೂಸೈಡ್​ಗೆ ಯತ್ನ

ಪರುಶುರಾಮ್ ಅಂದಿನಿಂದ ಅನೇಕ ಬಾರಿ ಸರ್ಕಾರಿ ಕಚೇರಿ ಅಲೆದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿ 16-2-2017 ರಂದು ಆತ್ಮಹತ್ಯೆಗೂ ಯತ್ನಿಸಿದ್ದರು. ಜ್ನಾನ ಜ್ಯೋತಿ ಆಡಿಟೋರಿಯಂನಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ನುಗ್ಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಂದು ಸಹ ಸಿಎಂ ಸಿದ್ದರಾಮಯ್ಯ ಮುಂದೆ ಹೈಡ್ರಾಮ ಮಾಡಿದ್ದರು. ಮಾತ್ರವಲ್ಲದೆ, ಸೀಮೆಎಣ್ಣೆ ಸುರಿದುಕೊಂಡು ಸೂಸೈಡ್ ಗೆ ಯತ್ನಿಸಿದ್ದರು. ಆ ಬಳಿಕ ಹಲಸೂರು ಗೇಟ್ ಪೊಲೀಸರು ಅವರನ್ನು ವಶಕ್ಕೆ ಪಡೆದು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ್ದರು.

ಪಟಾಕಿ ಸಿಡಿಸಿ ಅವಂತಾರ 

ಪರಶುರಾಮ್​ ವಿಚಾರವಾಗಿ ಅಂದು ಸಿಎಂ ಸಿದ್ದರಾಮಯ್ಯ ಪತ್ರ ಕೊಟ್ಟು ಪರಿಶೀಲನೆ ನಡೆಸುವಂತೆ ಕೆಪಿಎಸ್ ಸಿ ತಿಳಿಸಿದ್ದರಂತೆ. ಆದರೆ ಪರುಶರಾಮ್ ಸಮಸ್ಯೆ ಮಾತ್ರ ಸರಿಯಾಗಿರಲಿಲ್ಲ. ಇದಾದ ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ ಪರಶುರಾಮ್​ ಅವಂತಾರ ಸೃಷ್ಟಿಸಿದ್ದರು.

ಮೈಸೂರಿಂದ ಬೆಂಗಳೂರಿಗೆ ಬಂದ ವ್ಯಕ್ತಿ

ನಿನ್ನೆ ನಡೆದ ಗಣರಾಜ್ಯೋತ್ಸವದ ದಿನದಂದು ಸಿಎಂ ಭೇಟಿಯಾಗಲು ಪರಶುರಾಮ್​ ನಿರ್ಧರಿಸಿದ್ದಾರೆ. ಪಾಕ್ಷಿಕ ಪತ್ರಿಕೆಯ ಸಂಪಾದಕನ ಹೆಸರಲ್ಲಿ ಕಾರ್ಯಕ್ರಮದ ಪಾಸ್ ಪಡೆದುಕೊಂಡಿದ್ದರು. ಅದಕ್ಕಾಗಿ ನಿನ್ನೆ ಮೈಸೂರಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದಿದ್ದರು. ಮೊದಲು ಸಿಎಂ ಸಿದ್ದರಾಮಯ್ಯ ಗಮನ ಸೆಳೆಯಲು ಕೆಪಿಎಸ್ ಸಿಯ ಕೆಲ ಪತ್ರಗಳನ್ನು ಪ್ರದರ್ಶಿಸಿರುವ ಪ್ರದರ್ಶಿಸಿದ್ದಾರೆ. ಬಳಿಕ ಸಿಎಂ ಗಮನಿಸದೇ ಇದ್ದಾಗ ಗ್ರೌಂಡ್ ನುಗ್ಗಲು ಯತ್ನಿಸಿದ್ದಾರೆ. ತಕ್ಷಣ ಪರುಶರಾಮನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ವಶಕ್ಕೆ ಪಡೆದಾಗ ‘ನನಗೆ ನ್ಯಾಯ ಬೇಕು, ಇಲ್ಲ ಪರಿಹಾರ ಕೊಡಿಸಿ’ ಎಂದು ಪೊಲೀಸರ ಮುಂದೆ ಕೇಳಿಕೊಂಡಿದ್ದಾರೆ. ಸದ್ಯ 62 ವರ್ಷದ ವ್ಯಕ್ತಿ ಮೇಲೆ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣರಾಜೋತ್ಸವದ ವೇಳೆ ಭದ್ರತಾ ಲೋಪ ಪ್ರಕರಣ.. 62 ವರ್ಷದ ವ್ಯಕ್ತಿಯ ಹಿನ್ನೆಲೆಯೇ ವಿಚಿತ್ರ

https://newsfirstlive.com/wp-content/uploads/2024/01/1-8.jpg

Load More