/newsfirstlive-kannada/media/post_attachments/wp-content/uploads/2024/10/Reels.jpg)
ಮೊಬೈಲ್​ ಬಂದ ಬಳಿಕ ರೀಲ್ಸ್​ ಹುಚ್ಚಾಟ ಹೆಚ್ಚಾಗುತ್ತಿದೆ. ತಿರುಪತಿ ತಿಮ್ಮಪ್ಪನ ಗುಡಿಯ ಮುಂದೆ ಶಾಸಕರೊಬ್ಬರ ಸಂಗಾತಿ ರೀಲ್ಸ್​ ಮಾಡಿರುವ ಆರೋಪವೊಂದು ಕೇಳಿಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈಎಸ್​ಆರ್​ ಕಾಂಗ್ರೆಸ್​ ಶಾಸಕ ಡುವ್ವಾಡ್​​ ಶ್ರೀನಿವಾಸ್​​ ಅವರ ಸಂಗಾತಿ ಮಾಧುರಿ ದಿವ್ವಾಳ ತಿಮ್ಮಪ್ಪನ ಗುಡಿಯ ಮುಂದೆ ರೀಲ್ಸ್​ ಮಾಡಿದ್ದಾರೆ. ದೇವಾಲಯದ ನಿಯಮ ಮೀರಿ ನಡೆದುಕೊಂಡಿದ್ದಾರೆ. ಈ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಧುರಿ ದಿವ್ವಾಳ ವಿಜಯದಶಮಿ ಪ್ರಯುಕ್ತ ಶಾಸಕ ಡುವ್ವಾಡ್​​ ಶ್ರೀನಿವಾಸ್​ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಆವರಣದಲ್ಲಿ ರೀಲ್ಸ್​ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ರೀಲ್ಸ್​ ವೈರಲ್​ ಆಗಿತ್ತು.
ಇದನ್ನೂ ಓದಿ: Bengaluru: ವಿಷ ಸೇವಿಸಿ ಮಲಗಿದ್ದ ಪತ್ನಿ, ಇಬ್ಬರು ಮಕ್ಕಳು.. ಪ್ರಾಣಬಿಟ್ಟ ಕ್ಯಾಬ್​ ಚಾಲಕ
ಇನ್ನು ಡುವ್ವಾಡ್​​ ಶ್ರೀನಿವಾಸ್ ಮತ್ತು ಮಾಧುರಿ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ದೇವಸ್ಥಾನದ ಮುಂದೆ ರೀಲ್ಸ್​ ಹುಚ್ಚಾಟ ಮೆರೆದ ಶಾಸಕ ಸಂಗಾತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us