ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಮಗುವಿನ ಕಣ್ಣು.. ಇವನ ಕಣ್ಣಲ್ಲಿ ಒಂದೇ ದಿನಕ್ಕೆ 8 ಕಲರ್; ಬೆಚ್ಚಿ ಬಿದ್ದ ಜನರು!

author-image
admin
Updated On
ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಮಗುವಿನ ಕಣ್ಣು.. ಇವನ ಕಣ್ಣಲ್ಲಿ ಒಂದೇ ದಿನಕ್ಕೆ 8 ಕಲರ್; ಬೆಚ್ಚಿ ಬಿದ್ದ ಜನರು!
Advertisment
  • ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತಂತೆ ಮಗುವಿನ ಕಣ್ಣು
  • ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು!
  • ಕಂದನ ಕಣ್ಣಿನ ಪರೀಕ್ಷೆಗೆ ನಿಂತವರಿಗೆ ಕಂಡಿದ್ದೇನು?

ಶತ್ರುಗಳಿಂದ ತಪ್ಪಿಸಿಕೊಳ್ಳೋಕೆ ಅಂತಾ ಊಸರವಳ್ಳಿ ಚರ್ಮದ ಬಣ್ಣ ಬದಲಾಯಿಸುತ್ತೆ. ಅದು ಆ ಜೀವಿಗೆ ಪ್ರಕೃತಿ ಕೊಟ್ಟಿರುವ ವರ. ಆದರೆ ಇಲ್ಲೊಬ್ಬ ಬಾಲಕನ ಕಣ್ಣಿನ ಬಗ್ಗೆ ಹರಿದಾಡ್ತಿರೋ ಸುದ್ದಿ ನೋಡಿದ್ರೆ ಎದೆ ಝಲ್​ ಅಂದುಬಿಡುತ್ತೆ. ಒಬ್ಬ ಮನುಷ್ಯನಾಗಿ ಹುಟ್ಟಿದ್ಮೇಲೆ ಅವನ ಕಣ್ಗಳು ಕಪ್ಪು, ಕಂದು ಈ ರೀತಿಯ ಬಣ್ಣದಿಂದ ಕೂಡಿರುತ್ತೆ. ಆದ್ರೆ, ಈ ಬಾಲಕ ಹಾಕೋ ಬಟ್ಟೆಯ ಬಣ್ಣದಂತೆ ಕಣ್ಣಿನ ಬಣ್ಣ ಬದಲಾಗುತ್ತಂತೆ. ಬಾಲಕನಲ್ಲಾಗ್ತಿರೋ ಚಮತ್ಕಾರ ಕಂಡು ಊರೇ ಬೆರಗಾಗಿದೆ.

publive-image

ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತಂತೆ ಮಗುವಿನ ಕಣ್ಣು!
ಇವನ ಕಣ್ಣಲ್ಲಿ ಒಂದೇ ದಿನಕ್ಕೆ 8 ಕಲರ್..ಬೆಚ್ಚಿದ ಜನರು!
ಪ್ರಕೃತಿ ಒಂದು ರೀತಿ ವೈಚಿತ್ರದ ಗೂಡು.. ನಿಸರ್ಗದಲ್ಲಿ ನಡೆಯುವ ಕುತೂಹಲಕಾರಿ ವೈಚಿತ್ರ್ಯಗಳನನ್ನ ಅರ್ಥ ಮಾಡಿಕೊಳ್ಳೋದಕ್ಕೂ ಆಗೋದಿಲ್ಲ. ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳು ಕೆಲವೊಮ್ಮೆ ತರ್ಕಕ್ಕೆ ಕೂಡ ನಿಲುಕಲ್ಲ. ಈಗ ಇಂತದ್ದೇ ಒಂದು ವಿಸ್ಮಯಕ್ಕೆ ಈ ಬಾಲಕನ ಕಣ್ಣು ಕೂಡ ಕಾರಣವಾಗಿದೆ.

ಈ ಕಂದ ಅದೆಷ್ಟು ಮುದ್ದಾಗಿದ್ದಾನೆ ಅಂತ. ಇವನು ಮುಖದಲ್ಲಿ ನಿಮಗೆ ಹೈಲೈಟ್​ ಕಾಣ್ತಿರೋದು ಇವನ ಸ್ಫುರದ್ರೂಪಿ ಕಣ್ಣುಗಳಲ್ಲದೇ ಬೇರೇನೂ ಅಲ್ಲ. ಈ ಕಣ್ಣುಗಳನ್ನ ನೋಡ್ತಿದ್ರೆ ಏನೋ ಒಂದು ಚಮತ್ಕಾರದ ತರಹ ಕಾಣ್ತಿದೆ ಅಲ್ವಾ. ನೀವು ಅಂದುಕೊಂಡಂತೆ ಇದು ಚಮತ್ಕಾರಿ ಕಣ್ಣು. ಯಾಕಂದ್ರೆ, ಈ ಪುಟ್ಟ ಪೋರನ ಕಣ್ಣಿನ ಬಣ್ಣ ನಿಮಿಷ ನಿಮಿಷಕ್ಕೂ ಬದಲಾಗುತ್ತಂತೆ. ಹುಡುಗ ಯಾವ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣ್ತಿದೆ. ನಿಮಗೆ ಇದೇ ನಂಬೋಕೆ ಸಾಧ್ಯವಾಗದೇ ಇದ್ರೂ ನಂಬಲೇಬೇಕು.

publive-image

ಈ ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತೆ ಅಂತಾ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ ಬಣ್ಣದ ಬಟ್ಟೆ ಧರಿಸ್ತಾನೋ ಕಣ್ಣು ಅದೇ ಬಣ್ಣಕ್ಕೆ ತಿರುಗುತ್ತಂತೆ. ಈಗ ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದ್ದು, ಬಾಲಕನ ಕಣ್ಣಿನ ಬಗ್ಗೆ ಸತ್ಯಾನ್ವೇಷಣೆಗಳು ಶುರುವಾಗಿದೆ.

ಸಾಮಾನ್ಯವಾಗಿ ಒಬ್ಬ ಮನುಷ್ಯನ ಕಣ್ಣುಗಳು ಕಪ್ಪು ಬಣ್ಣದಲ್ಲಿ ನೋಡಬಹುದು. ಬಿಟ್ರೆ ಕೆಲವರಿಗೆ ನೀಲಿ ಕಣ್ಣು ಕೂಡ ಇರೋದನ್ನ ನೀವು ನೋಡಿರ್ತಿರಾ. ಇನ್ನೂ ಕೆಲವರಿಗೆ ಬೆಕ್ಕಿನ ಕಣ್ಣು ಇರೋದು ಕಂಡಿರ್ತಿರಿ. ಅಚ್ಚರಿಯೂ ವಿಚಿತ್ರವೂ ಏನೋ ಗೊತ್ತಿಲ್ಲ. ಆದ್ರೆ ಈ ಬಾಲಕನ ಕಣ್ಣು ಮಾತ್ರ ಈಗ ಜನರನ್ನ ಬೆಕ್ಕಸ ಬೆರಗುಗೊಳಿಸ್ತಿದೆ. ಸೋಷಿಯಲ್​ ಮೀಡಿಯಾದಲ್ಲೂ ಬಾಲಕನ ಬಣ್ಣ ಬಣ್ಣದ ಕಣ್ಣಿನ ಟಾಕ್​ ಜೋರಾಗಿದೆ. ಬಾಲಕನಿಗೆ ಮೊದಲು ನೀಲಿ ಬಣ್ಣದ ಬಟ್ಟೆ ಹಾಕಲಾಗಿತ್ತು.. ಆಗ ಕಣ್ಣು ನೀಲಿ ಕಲರ್ ಕಾಣ್ತಿತ್ತು. ಅದ್ಯಾವಾಗ ಬಿಳಿ ಬಣ್ಣದ ಶರ್ಟ್​ ಹಾಕಿದ್ರೊ ಕಣ್ಣು ಬಿಳಿ ಬಣ್ಣಕ್ಕೆ ತಿರುಗಿತ್ತು.

publive-image

ಬಾಲಕನ ಬಣ್ಣ ಬಣ್ಣದ ಕಣ್ಣು ಕಂಡು ಜನ ಶಾಕ್​!
ಕಂದನ ಕಣ್ಣಿನ ಪರೀಕ್ಷೆಗೆ ನಿಂತವರಿಗೆ ಕಂಡಿದ್ದೇನು?
ಅದ್ಯಾವಾಗ ಬಾಲಕನ ಕಣ್ಣು ಬಟ್ಟೆಗೆ ತಕ್ಕಂತೆ ಬದಲಾಗ್ತಿದೆ ಅನ್ನೋ ಸುದ್ದಿ ಗೊತ್ತಾಯ್ತೋ ಜನ ಕಂಡ ಅಚ್ಚರಿಗೊಂಡಿದ್ದಾರೆ. ಊರಿನಲ್ಲಿದವರಿಗೂ ಇದೇನಪ್ಪ ವಿಚಿತ್ರ ಅಂತ ಈ ಬಾಲಕನ ಮನೆ ಮುಂದೆ ಬಂದು ಜಮಾಯಿಸಿದ್ದಾರೆ. ಅಷ್ಟಕ್ಕೂ ಇಂತಾದೊಂದು ಅಚ್ಚರಿ ನಡೀತಾ ಇರೋದು ಎಲ್ಲಿ ಅಂದ್ರೆ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದಲ್ಲಿ. ಈ ಕೇತ್ವಾಲಿ ಗ್ರಾಮದ ಬಿಸಾ ಕಾಲೋನಿಯಲ್ಲಿ ವಾಸವಿರು ಅಸಲಂ ಅನ್ನೋರ ಮಗನ ಕಣ್ಣು ಧರಿಸೋ ಬಟ್ಟೆಗೆ ತಕ್ಕಂತೆ ಬದಲಾಗ್ತಿದೆ.. ಬಾಲಕನ ಹೆಸರು ಅರ್ಶ್ ಅಂತ. ಜಸ್ಟ್ ಒಂದೂವರೆ ವರ್ಷದ ಪುಟ್ಟ ಕಂದ ಇವನು. ಆದ್ರೀಗ ಇವನು ಕಣ್ಣು ಜಗತ್ತನೆ ಬೆರಗುಗೊಳಿಸ್ತಿದೆ.

ಕಲರ್​ ಬಟ್ಟೆ ಹಾಕಿದ ತಕ್ಷಣ ಕೆಂಪು ನೀಲಿ. ಯಾವುದೇ ಬಟ್ಟೆ ಹಾಕಿದ್ರು ಕಣ್ಣಿನ ಕಲರ್​ ಕೂಡ ಅದೇ ಆಗುತ್ತೆ. ತನ್ನಷ್ಟಕ್ಕೆ ತಾನೆ ಕಣ್ಣಿನ ಬಣ್ಣ ಬದಲಾಗುತ್ತೆ. ತುಂಬಾ ಜನ ಬಂದು ಪರೀಕ್ಷೆ ಮಾಡಿ ಹೋಗಿದ್ದಾರೆ. ಇವನ ಕಣ್ಣು ಇಷ್ಟೊಂದು ವಿಚಿತ್ರವಾಗಿವೆ ಅಂತ್ ಶಾಕ್ ಆಗಿದ್ದಾರೆ. ನಾವು ಡಾಕ್ಟರ್​ಗೂ ತೋರಿಸಿದ್ವಿ. ಡಾಕ್ಟರ್ ಕೂಡ ಅಂಥಾ ಸಮಸ್ಯೆ ಏನೂ ಇಲ್ಲ ಕಣ್ಣು ಸರಿಯಾಗಿವೆ ಅಂತಲೇ ಹೇಳಿದ್ರು. ಅವನಿಗೆ ಕಣ್ಣು ಕೂಡ ಚೆನ್ನಾಗಿ ಕಾಣತ್ತೆ. ಓಡ್ತಾನೆ ಆಡ್ತಾನೆ ಎಲ್ಲ ಮಾಡ್ತಾನೆ. ಹಸಿರು ಕಲರ್ ಆಗುತ್ತೆ. ಅಂದ್ರೆ ಯಾವ ಬಟ್ಟೆ ಹಾಕ್ತಾನೋ ಆ ಬಟ್ಟೆ ಕಲರ್​ನಲ್ಲಿ ಕಣ್ಣು ಕಾಣುತ್ತೆ. ರೆಡ್​ ಗ್ರೀನ್​ ಬ್ಲೂ ಎಲ್ಲ ಕಲರ್​​ ಬದಲಾಗುತ್ತೆ. ಅವನಿಗೆ ಒಂದೂವರೆ ವರ್ಷ ಅಷ್ಟೇ.

publive-image

ಅರ್ಶ್​​ನ ಕಣ್ಣು ಕಳೆದ ಒಂದು ವರ್ಷದಿಂದ ಈ ರೀತಿ ಬಣ್ಣ ಬದಲಾಯಿಸ್ತಿದೆ. ಆರಂಭದಲ್ಲಿ ಮಗುವಿನ ಕಣ್ಣಿನ ಕಲರ್ ಬದಲಾಗ್ತಿರೋದು ಕಂಡು ಅರ್ಶ್​ ಪೋಷಕರಿಗೂ ಆತಂಕ ಶುರುವಾಗಿತ್ತು. ಕಣ್ಣಲ್ಲಿ ಏನಾದ್ರೂ ಸಮಸ್ಯೆ ಇರಬಹುದು ಡಾಕ್ಟರ್​ ಹತ್ರ ಕರ್ಕೊಂಡು ಹೋಗಿ ಕಣ್ಣಿನ ಪರೀಕ್ಷೆ ಕೂಡ ಮಾಡಿಸಿದ್ರು. ಆದ್ರೆ ಕಂದನ ಕಣ್ಣು ಟೆಸ್ಟ್ ಮಾಡಿದ್ದ ವೈದ್ಯರು ಮಗುವಿಗೆ ಯಾವುದೇ ಸಮಸ್ಯೆ ಇಲ್ಲ ಅಂತ ಹೇಳಿದ್ರು. ಕಣ್ಣಿನ ದೋಷಗಳು ಯಾವುದು ಇಲ್ಲ ಅಂತ ಹೇಳಿದ್ರು. ಹೀಗಾಗಿ ಅರ್ಶ್ ಕುಟುಂಬ ಕೂಡ ನಿಟ್ಟುಸಿರು ಬಿಟ್ಟಿತ್ತು. ಈಗ ಬಣ್ಣ ಬದಲಾಯಿಸುವ ಬಾಲಕ ಕಣ್ಣಿನ ಸುದ್ದಿ ಸಖತ್ ವೈರಲ್ ಆಗಿದ್ದು, ಮನೆಗೆ ಬಂದ ಜನರೆಲ್ಲ ಪರೀಕ್ಷೆ ಮಾಡಿ ಅಚ್ಚರಿಗೊಳ್ತಿದ್ದಾರೆ.

ಇದನ್ನೂ ಓದಿ: ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಬಾಲಕನ ಕಣ್ಣಿನ ಕಲರ್​.. ಈ ವಿಸ್ಮಯ ನಯನ ಹೊಂದಿರುವ ಪೋರ ಯಾರು? 

ಯಾವಾಗ ಬಾಲಕನಿಗೆ ಪೂರ್ತಿಯಾಗಿ ಒಂದೇ ಬಣ್ಣದ ಬಟ್ಟೆ ಹಾಕ್ತಾರೋ ಆಗ ಕಣ್ಣಿನ ಕಲರ್ ಬದಲಾಗುತ್ತಂತೆ. ಅದ್ರಲ್ಲೂ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆ ಹಾಕ್ದಾಗ ಅದೇ ಬಣ್ಣಕ್ಕೆ ಕಣ್ಣು ತಿರುಗಿದ್ದು ಹೆಚ್ಚಾಗಿ ಕಂಡಿದೆಯಂತೆ. ಇದನ್ನ ನೋಡಿ ಅರ್ಶ್ ಪೋಷಕರಿಗೂ ದಿಗ್ಭ್ರಮೆಯಾಗಿದೆ.. ಈಗ ಇಡೀ ಊರಿಗೆ ಊರೇ ಅಚ್ಚರಿಗೊಂಡಿದ್ದು, ಮಾತ್ರವಲ್ಲ ಊರಲ್ಲಿರುವ ಯುವಕರು ಕೂಡ ಅರ್ಶ್​ ಕಣ್ಣಿಗೆ ಬಗ್ಗೆ ಪರೀಕ್ಷೆ ಮಾಡಿದ್ದಾರೆ. ಆಮೇಲೆ ಬಣ್ಣದ ಬಣ್ಣದ ಕಂಡು ಬಾಯ್ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

publive-image

ಕೇವಲ ಒಂದೆರಡು ಕಲರ್​​ನಲ್ಲಿ ಕಣ್ಣು ಕಾಣ್ತಿದ್ರೆ ಜನ ಕೂಡ ನಿಬ್ಬೆರಗಾಗ್ತಿರಲಿಲ್ಲ. ಆದ್ರೆ ಈ ಬಾಲಕನ ಕಣ್ಣು ದಿನಕ್ಕೆ ಏಳರಿಂದ ಎಂಟು ಕಲರ್​ನಲ್ಲಿ ಚೇಂಜ್ ಆಗ್ತಿದೆಯಂತೆ. ನೀಲಿ ಕಪ್ಪು ಹಳದಿ ಹಸಿರು ಬಿಳಿ ಹೀಗೆ ಯಾವ ಕಲರ್ ಬಟ್ಟೆ ಹಾಕ್ತಾರೋ ಅದೇ ಕಲರ್​​ನಲ್ಲಿ ಕಣ್ಣಿನ ಕಲರ್ ಬದಲಾಗ್ತಿದೆ. ಇದೇ ವಿಚಾರ ಜನರನ್ನ ಕುತೂಹಲಕ್ಕೆ ಕಾರಣವಾಗಿದ್ದು, ಕಂದನ ಅಚ್ಚರಿಯ ಕಣ್ಣು ನೋಡೋದಕ್ಕೆ ಅರ್ಶ್ ಮನೆ ಮುಂದೆ ನೂರಾರು ಜನ ಆಗಮಿಸ್ತಿದ್ದಾರೆ. ಬಂದವರೆಲ್ಲ ಮಗುವಿನ ಚಮತ್ಕಾರಿ ಕಣ್ಣು ಕಂಡು ನಿಬ್ಬೆರಾಗ್ತಿದ್ದಾರೆ.

ಅಸಲಿಗೆ ಹರ್ಷ್​ ತಂದೆ ಪ್ಲಂಬರ್​ ಕೆಲಸ ಮಾಡೋದು.. ಬಡ ಕುಟುಂಬವೇ.. ಆದ್ರೀಗ ರಾತ್ರೋ ರಾತ್ರಿ ಈ ಬಾಲಕನ ವೈರಲ್ ಆಗ್ಬಿಟ್ಟಿದ್ದಾರೆ. ನಿತ್ಯ ನೂರಾರು ಜನ ಅರ್ಷ್​ ಕಣ್ಣಿನ ಅಚ್ಚರಿ ನೋಡೋದಕ್ಕೆ ಬರ್ತಿದ್ದು, ಬಂದವರೆಲ್ಲ ಕಲರ್ ಕಲರ್ ಕಣ್ಣು ಕಂಡು ಶಾಕ್ ಆಗ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment