newsfirstkannada.com

ಪೋಷಕರೇ ಹುಷಾರ್‌! ಆಟ ಆಡುವಾಗ ಮೀನು ನುಂಗಿದ ಒಂದು ವರ್ಷದ ಮಗು; ಆಮೇಲೇನಾಯ್ತು?

Share :

Published February 6, 2024 at 5:52pm

    ಆಟ ಆಡುವಾಗ ವೇಳೆ ಏಕಾಏಕಿ ಮೀನು‌ ನುಂಗಿದ ಮಗು

    ಮಗುವನ್ನ ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲು

    ಮಗುವನ್ನು ರಕ್ಷಣೆ ಮಾಡಿದ ಖಾಸಗಿ ಆಸ್ಪತ್ರೆ ವೈದ್ಯರು

ಶಿವಮೊಗ್ಗ: ಪುಟ್ಟ ಮಕ್ಕಳು ಜೊತೆ ಇದ್ದಾಗ ಮೈಯೆಲ್ಲಾ ಕಣ್ಣಾಗಿದ್ರು ಕಷ್ಟ. ಎಷ್ಟು ಜಾಗರೂಕರಾಗಿದ್ರು ಕೂಡ ಮಕ್ಕಳು ಕಣ್ಣುಮುಚ್ಚಿ ಬಿಡೋವಷ್ಟರಲ್ಲೇ ಏನಾದರೂ ಮಾಡಿಕೊಂಡು ಬಿಡುತ್ತಾರೆ. ಕೆಲವು ಬಾರಿ ಪೋಷಕರು ಎಷ್ಟೇ ಗಮನ ಹರಿಸಿದ್ರು ಆಗೋ ಅವಘಡ ಹೇಗಾದ್ರೂ ಆಗಿಬಿಡುತ್ತೆ. ಇಲ್ಲೂ ಅದೇ ಆಗಿದೆ ಒಂದು ವರ್ಷದ ಪುಟ್ಟ ಕಂದಮ್ಮ ಮನೆಯಲ್ಲಿ ಅಡುಗೆ ಮಾಡಲು ತಂದಿದ್ದ ಮೀನನ್ನು ಮಗು ನುಂಗಿ ಬಿಟ್ಟಿದೆ.

ಇದನ್ನು ಓದಿ: ಬಾಲಕನ ಮೇಲೆಯೇ ಹರಿದ ಎಲೆಕ್ಟ್ರಿಕ್​​ ವೆಹಿಕಲ್​​.. ಪೋಷಕರು ಓದಲೇಬೇಕಾದ ಸ್ಟೋರಿ!

ಹೌದು, ಪ್ರತೀಕ್ (1) ಮೀನು ನುಂಗಿದ ಮಗು. ಮನೆಯಲ್ಲಿ ಅಡುಗೆ ಮಾಡಲು ತಂದಿದ್ದ 2 ಇಂಚಿನ ಜಿಲೇಬಿ ಮೀನನ್ನ ಮಗು ಕೈಯಲ್ಲಿ ಹಿಡಿದುಕೊಂಡು ಆಡುತ್ತಿತ್ತು. ಇದೇ ವೇಳೆ ಬಾಯಲ್ಲಿ ಹಿಡಿಯುತ್ತಾ ಆಕಸ್ಮಿಕವಾಗಿ ನುಂಗಿ ಬಿಟ್ಟಿದೆ. ಗಂಟಲಲ್ಲೇ ಮೀನು ಸಿಕ್ಕಿಹಾಕಿಕೊಂಡಿದ್ದರಿಂದ ಉಸಿರಾಡಲಾಗದೇ ಮಗು ಕಷ್ಟ ಪಡುತ್ತಿತ್ತು. ಇದನ್ನು ಗಮನಿಸಿದ ಕೂಡಲೇ ಪೋಷಕರು ಮಗುವನ್ನ ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜಿನಹಳ್ಳಿ ಯೋಗೇಶ್ ಹಾಗೂ ರೋಜಾ ದಂಪತಿಗೆ ಸೇರಿದ ಮಗು ಇದಾಗಿದೆ. ಇನ್ನೂ ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರೋ ವೀನನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರತೆಗೆಯಲಾಗಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು. ಆತಂಕಗೊಂಡಿದ್ದ ಪೋಷಕರು ನಿಟ್ಟಿಸಿರು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಹುಷಾರ್‌! ಆಟ ಆಡುವಾಗ ಮೀನು ನುಂಗಿದ ಒಂದು ವರ್ಷದ ಮಗು; ಆಮೇಲೇನಾಯ್ತು?

https://newsfirstlive.com/wp-content/uploads/2024/02/child-2.jpg

Load More