VIDEO: ಬೆಡ್‌ ರೂಮ್‌ನಲ್ಲಿ ಬುಸುಗುಟ್ಟಿದ ನಾಗರಹಾವು; ಪಕ್ಕದಲ್ಲೇ ಮಲಗಿದ್ದ ಹುಡುಗ ಎದ್ದು, ಬಿದ್ದು ಓಡಿದ!

author-image
admin
Updated On
VIDEO: ಬೆಡ್‌ ರೂಮ್‌ನಲ್ಲಿ ಬುಸುಗುಟ್ಟಿದ ನಾಗರಹಾವು; ಪಕ್ಕದಲ್ಲೇ ಮಲಗಿದ್ದ ಹುಡುಗ ಎದ್ದು, ಬಿದ್ದು ಓಡಿದ!
Advertisment
  • ಬೆಡ್‌ ರೂಮ್‌ನಲ್ಲಿ ಮಲಗಿದ್ದಾಗ ಬುಸ್, ಬುಸ್ ಶಬ್ಧ!
  • ಮನೆಯೊಳಗೆ ಬಂದ ನಾಗರಹಾವಿನ ಪಕ್ಕ ಮಲಗಿದ್ದ
  • ಭೀಮನ ಅಮಾವಾಸ್ಯೆ ದಿನ ನಾಗರಹಾವಿನ ದರ್ಶನ

ಮೈಸೂರು: ಮನೆಯ ಬೆಡ್‌ ರೂಮ್‌ನಲ್ಲಿ ಮಲಗಿದ್ದಾಗ ಬುಸ್, ಬುಸ್ ಶಬ್ಧ ಕೇಳಿ ಬರ್ತಿತ್ತು. ಏನು ಅಂತಾ ನೋಡಿದ್ರೆ ಹಾಸಿಗೆ ಮೇಲೆ ನಾಗರಹಾವು ಮಲಗಿತ್ತು. ಅಬ್ಬಾ.. ಒಂದು ಕ್ಷಣ ಕಲ್ಪನೆ ಮಾಡಿಕೊಳ್ಳೋಕೂ ಕಷ್ಟವಾಗುತ್ತೆ. ಆದ್ರೆ, ರಿಯಲ್ ಆಗಿ ಮಲಗಿದ್ದ ಹಾಸಿಗೆಯಲ್ಲಿ ನಾಗರಾಜ ಬುಸುಗುಟ್ಟಿರೋ ಘಟನೆ ಮೈಸೂರಿನ ಹೆಬ್ಬಾಳ‌ದ ಎರಡನೇ ಹಂತದಲ್ಲಿ ನಡೆದಿದೆ.

publive-image

ಚೆನ್ನಮ್ಮ ಸರ್ಕಲ್‌ನ ಪ್ರಜ್ವಲ್ ಎಂಬುವವರ ಮನೆಯಲ್ಲಿ ಈ ಹಾವು ಪ್ರತ್ಯಕ್ಷವಾಗಿದೆ. ಪ್ರಜ್ವಲ್‌ ತಮ್ಮ ಪಾಡಿಗೆ ಮನೆಯ ಕೊಠಡಿಯಲ್ಲಿ ಮಲಗಿದ್ದರು. ಸದ್ದಿಲ್ಲದೇ ಮನೆಯೊಳಗೆ ಬಂದ ನಾಗರಹಾವು ಪ್ರಜ್ವಲ್‌ ಪಕ್ಕದಲ್ಲೇ ಬಂದಿದೆ. ನಾಗರಹಾವು ಬುಸುಗುಡುವ ಶಬ್ಧ ಕೇಳಿ ಪ್ರಜ್ವಲ್‌ ಎಚ್ಚರಗೊಂಡಿದ್ದಾನೆ. ತಕ್ಷಣವೇ ಭಯಭೀತನಾಗಿ ಮನೆಯಿಂದ ಹೊರಗೆ ಬಂದು ಕೂಗಿ ಕೊಂಡಿದ್ದಾನೆ.

publive-image

ಪ್ರಜ್ವಲ್ ಮನೆಯ ಹಾಸಿಗೆಲ್ಲಿ ನಾಗರಹಾವು ಇರೋ ವಿಷ್ಯ ಉರಗತಜ್ಞ ಸ್ನೇಕ್ ಶ್ಯಾಮ್ ಅವರಿಗೆ ತಿಳಿಸಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಮ್ ಅವರು ಮನೆಯಲ್ಲಿದ್ದ ನಾಗರಹಾವನ್ನು ರಕ್ಷಿಸಿದ್ದಾರೆ. ಇವತ್ತು ಭೀಮನ ಅಮಾವಾಸ್ಯೆ ಆದ ಕಾರಣ ಅಕ್ಕ ಪಕ್ಕದ ಮನೆಯವರು ನಾಗರಹಾವಿನ ದರ್ಶನ ಮಾಡಿದ್ದಾರೆ. ಮಹಿಳೆಯರಂತೂ ಹಾವಿಗೆ ಪೂಜೆ ಮಾಡಿ ಕೈ ಮುಗಿದು ಬೇಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment