newsfirstkannada.com

ನಟ ದರ್ಶನ್ ವಿರುದ್ಧ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ನಾಯಕರು; ಪೊಲೀಸ್ ಠಾಣೆಗೆ ದೂರು

Share :

Published February 23, 2024 at 2:12pm

Update February 23, 2024 at 2:21pm

  ರಾಜ್ಯದ ಪ್ರಭಾವಿ ಸಮುದಾಯದ ನಾಯಕರ ಬಗ್ಗೆ ಮಾತನಾಡಿದ್ದಾರೆ

  ಸಮುದಾಯ ರೊಚ್ಚಿಗೇಳುವ ಮುಂಚೆ ಕಾನೂನು ಕ್ರಮ ಕೈ ಗೊಳ್ಳಬೇಕು

  ವೇದಿಕೆ ಮೇಲೆ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ದರ್ಶನ್ ಮಾತು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ವಿರುದ್ಧ ದೂರುಗಳ ಮೇಲೆ ದೂರು ದಾಖಲಾಗುತ್ತಿದೆ. ಇಂದು ಅವರ ಹೇಳಿಕೆ ಖಂಡಿಸಿ ಆರ್.ಆರ್ ನಗರ ಮತ್ತು ಚಂದ್ರಲೇಔಟ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ದರ್ಶನ್ ಅವರ ಮಾತು ಒಂದು ಸಮುದಾಯವನ್ನ ಕೆರಳಿಸುವಂತಿದೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಕಾಟೇರ ಟೈಟಲ್‌ ವಿವಾದದಲ್ಲಿ ನಟ ದರ್ಶನ್, ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ವಾಗ್ವಾದವೇ ನಡೆದಿತ್ತು. ಈ ವಾಕ್ಸಮರದ ಹಿನ್ನೆಲೆಯಲ್ಲಿ ಗಣೇಶ್ ಗೌಡ ಹಾಗೂ ಜಗದೀಶ್ ಎಂಬುವವರು ಎರಡು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟ ದರ್ಶನ್‌ ಅವರು ರಾಜ್ಯದ ಪ್ರಭಾವಿ ಸಮುದಾಯದ ನಾಯಕರ ಬಗ್ಗೆ ಮಾತನಾಡಿದ್ದಾರೆ. ವೇದಿಕೆ ಮೇಲೆ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ದರ್ಶನ್‌ಗೆ ಹೆಣ್ಣು ಮಕ್ಕಳು ಎಂದರೆ ಆಟಿಕೆಯ ವಸ್ತುಗಳ ರೀತಿ ಬಳಸಿ ಬಿಸಾಡುವಂತಾಗಿದೆ. ಇದು ಈ ರಾಜ್ಯದ ಮತ್ತು ದೇಶದ ಮಹಿಳಾ ಕುಲಕ್ಕೆ ಮಹಾ ಅಪಮಾನ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ’ಹೆತ್ತ ತಾಯಿಯ ಮರ್ಯಾದೆಯನ್ನೇ ತೆಗೆದುಬಿಟ್ರು ನಟ ದರ್ಶನ್​’- ಮಹಿಳೆಯರ ಆಕ್ರೋಶ

ಇದರ ಜೊತೆಗೆ ಒಕ್ಕಲಿಗ ನಾಯಕರ ವಿರುದ್ಧ ಚುನಾವಣೆಯ ಸಂದರ್ಭದಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಒಂದು ಸಮುದಾಯ ರೊಚ್ಚಿಗೇಳುವ ಮುಂಚೆ ಕಾನೂನು ಕ್ರಮ ಕೈ ಗೊಳ್ಳುವಂತೆ ಒತ್ತಾಯಿಸಲಾಗಿದೆ. ಆರ್.ಆರ್ ನಗರ ಹಾಗೂ ಚಂದ್ರಾಲೇಔಟ್ ಠಾಣೆಯ ಪೊಲೀಸರು ಈ ಸಂಬಂಧ ಎನ್‌ಸಿಆರ್ ದಾಖಲು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ವಿರುದ್ಧ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ನಾಯಕರು; ಪೊಲೀಸ್ ಠಾಣೆಗೆ ದೂರು

https://newsfirstlive.com/wp-content/uploads/2024/02/Darshan-Katera-1.jpg

Load More