Advertisment

ವಾಲ್ಮೀಕಿ ಹಗರಣಕ್ಕೆ ಹೊಸ ಟ್ವಿಸ್ಟ್‌.. ಮಾಜಿ MD ಕಲ್ಲೇಶಪ್ಪ ಅಮಾನತು ಆದೇಶದ ಸಾಕ್ಷಿ ಬಿಚ್ಚಿಟ್ಟ ಬಿಜೆಪಿ!

author-image
admin
Updated On
ವಾಲ್ಮೀಕಿ ಹಗರಣಕ್ಕೆ ಹೊಸ ಟ್ವಿಸ್ಟ್‌.. ಮಾಜಿ MD ಕಲ್ಲೇಶಪ್ಪ ಅಮಾನತು ಆದೇಶದ ಸಾಕ್ಷಿ ಬಿಚ್ಚಿಟ್ಟ ಬಿಜೆಪಿ!
Advertisment
  • ಪಶ್ಚಿಮ ಬಂಗಾಳ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲೂ ಸಂಘರ್ಷ
  • ವಾಲ್ಮೀಕಿ ನಿಗಮದ ಮಾಜಿ MD ಕಲ್ಲೇಶಪ್ಪ ನೀಡಿರುವ ದೂರು
  • ಸಿಎಂ ಸಿದ್ದರಾಮಯ್ಯ ಅಮಾನತು ಮಾಡಿರುವ ಆದೇಶದ ಪ್ರತಿ ವೈರಲ್!

ವಾಲ್ಮೀಕಿ ಬಹುಕೋಟಿ ಹಗರಣದಲ್ಲಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ ಸಂಘರ್ಷಕ್ಕೆ ಹೊಸ ತಿರುವು ಸಿಕ್ಕಿದೆ. ಪಶ್ಚಿಮ ಬಂಗಾಳ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲೂ ಕೇಂದ್ರ & ರಾಜ್ಯ ಸರ್ಕಾರದ ಮಧ್ಯೆ ಜಟಾಪಟಿ ನಡೆಯುತ್ತಿದೆ.

Advertisment

publive-image

ರಾಜ್ಯ & ಕೇಂದ್ರ ಸರ್ಕಾರದ ನಡುವೆ ಶೀತಲ ಸಮರ ಆರಂಭವಾಗಿದ್ದು, ತನಿಖಾ ಸಂಸ್ಥೆಗಳನ್ನು ರಾಜಕೀಯದ ಕಿತ್ತಾಟಕ್ಕೆ ಬಳಸಿಕೊಳ್ಳಲಾಗಿದೆ. ಇ.ಡಿ ಅಧಿಕಾರಿಗಳ ಮೇಲೆ FIR ದಾಖಲು ಮಾಡಿರುವ ವಿಚಾರಕ್ಕೆ ಬಿಜೆಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಹಗರಣಕ್ಕೆ ಸ್ಫೋಟಕ ಟ್ವಿಸ್ಟ್; ಇ.ಡಿ ಅಧಿಕಾರಿಗಳ ವಿರುದ್ಧವೇ ತನಿಖೆಗೆ ಸಿಎಂ ಪಟ್ಟು; ಏನಿದರ ಪ್ಲಾನ್? 

ಯಾಕಂದ್ರೆ ಅಮಾನತು ಆದ ಅಧಿಕಾರಿ ಕಲ್ಲೇಶಪ್ಪನವರೇ ಇ.ಡಿ ವಿರುದ್ಧ ನೀಡಿರುವ ಕೇಸ್‌ನಲ್ಲಿ ದೂರುದಾರರು. ವಾಲ್ಮೀಕಿ ನಿಗಮದ ಮಾಜಿ MD ಕಲ್ಲೇಶಪ್ಪ ನೀಡಿದ ದೂರಿನ ಮೇಲೆ ಇ.ಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಮಾನತು ಅಧಿಕಾರಿಯಿಂದ ಈ ದೂರು ನೀಡಿರೋದು ಈಗ ಚರ್ಚೆಗೆ ಗ್ರಾಸವಾಗಿದೆ.

Advertisment

publive-image

ನಿಗಮದ ಮಾಜಿ MD ಕಲ್ಲೇಶಪ್ಪನವರು ಈಗಾಗಲೇ ಬೇರೆ ಪ್ರಕರಣದಲ್ಲಿ ಅಮಾನತು ಆಗಿದ್ದರು. 523 ಕೋಟಿ ಹಣದ ಯುಟಿಲೈಸ್ ಸರ್ಟಿಫಿಕೇಟ್ ನೀಡದ ಆರೋಪದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಇವರನ್ನ ಅಮಾನತು ಮಾಡಿ ಆದೇಶಿಸಿದ್ರು ಎನ್ನಲಾಗಿದೆ. ಕಳೆದ ತಿಂಗಳು 22ನೇ ತಾರೀಖು ಅಮಾನತು ಆಗಿದ್ರು. ಸದ್ಯ ಅವರಿಗೆ ಪೋಸ್ಟಿಂಗ್ ಪಡೆಯಲು ದೂರು ನೀಡಿದ್ರಾ? ಸರ್ಕಾರ ಕಲ್ಲೇಶ್‌ನ ಬ್ಲಾಕ್ ಮೇಲ್ ಮಾಡಿ ಬಳಸಿಕೊಳ್ತಿದೆಯಾ? ಅನ್ನೋ ಅನುಮಾನ ವ್ಯಕ್ತವಾಗಿದೆ.


">July 23, 2024

ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ ರವಿ ಅವರು ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಅಧಿಕಾರಿ ಕಲ್ಲೇಶಪ್ಪರನ್ನು ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿದೆ. ಕಳೆದ ತಿಂಗಳು ಜೂನ್ 26 ರಂದು ಭ್ರಷ್ಟಾಚಾರದ ಆರೋಪದ ಮೇಲೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಎಂ.ಡಿ ಕಲ್ಲೇಶಪ್ಪರನ್ನು ಅಮಾನತು ಮಾಡಿದ್ದ ಕಾಂಗ್ರೆಸ್ ಸರ್ಕಾರ, ಈಗ ತಾನು ಇಡಿ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇ.ಡಿ ವಿರುದ್ಧ ಆರೋಪ ಮಾಡಲು ಕಲ್ಲೇಶಪ್ಪರನ್ನು ಛೂ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment