newsfirstkannada.com

ಬೆಂಗಳೂರಲ್ಲಿ ಮತ್ತೊಂದು ಮಹಾ ದೋಖಾ; ಚೀಟಿ ಹೆಸರಲ್ಲಿ ಕೋಟಿ, ಕೋಟಿ ವಂಚಿಸಿದ ದಂಪತಿ

Share :

Published April 18, 2024 at 4:08pm

Update April 18, 2024 at 4:09pm

  ಚೀಟ್ ಫಂಡ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಪಂಗನಾಮ

  ಶ್ರೀಸಾಯಿ ಲಕ್ಷ್ಮಿ ಕೃಪೆ ಚಿಟ್ಸ್ ಎಂಬ ಕಂಪನಿ ನಡೆಸುತ್ತಿದ್ದ ಸಿದ್ದಲಿಂಗಯ್ಯ

  ಸಿದ್ದಲಿಂಗಯ್ಯ ಮಾತು ನಂಬಿ ಲಕ್ಷ, ಲಕ್ಷ ಹಣ ಹೂಡಿಕೆ ಮಾಡಿದ್ದವರು ಕಂಗಾಲು

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮೊನ್ನೆ, ಮೊನ್ನೆಯಷ್ಟೇ ಯುಗಾದಿ ಹಬ್ಬದ ಮಾಂಸದ ಚೀಟಿಯಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪ ಬೆಳಕಿಗೆ ಬಂದಿತ್ತು. ಇದೀಗ ಚೀಟ್ ಫಂಡ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಿದ್ದಲಿಂಗಯ್ಯ ಹಾಗೂ ಪ್ರೇಮಕುಮಾರಿ ಎಂಬ ದಂಪತಿ ಶ್ರೀಸಾಯಿ ಲಕ್ಷ್ಮಿ ಕೃಪೆ ಚಿಟ್ಸ್ ಎಂಬ ಕಂಪನಿ ನಡೆಸುತ್ತಿದ್ದರು. ಸಿದ್ದಲಿಂಗಯ್ಯ ಅವರನ್ನ ನಂಬಿ ಜನರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಚೀಟಿ ನಡೆಸುತ್ತಿದ್ದ ಸಿದ್ದಲಿಂಗಯ್ಯ ಅವರ ಫ್ಯಾಮಿಲಿ ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಚೀಟಿದಾರರು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು‌ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ ಮಟನ್ ಚೀಟಿ ಹೆಸರಲ್ಲಿ ಮೋಸ.. ಆಸಾಮಿ ಗುಡ್ಡೆ ಹಾಕಿದ್ದು ಒಂದು, ಎರಡು ಕೋಟಿಯಲ್ಲ; ಎಷ್ಟು?

ಚೀಟಿದಾರರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ಸಿದ್ದಲಿಂಗಯ್ಯ ಹಾಗೂ ಅವರ ಪತ್ನಿ ಪ್ರೇಮಕುಮಾರಿ ಅವರನ್ನು ಬಂಧಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಚೀಟಿ ಹಣ ಕೊಡಿಸುವಂತೆ ಸುಮಾರು 50ಕ್ಕೂ ಹೆಚ್ಚು ಚೀಟಿದಾರರು ಪೊಲೀಸ್‌ ಠಾಣೆ ಮುಂದೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಸಿದ್ದಲಿಂಗಯ್ಯ ಕುಟುಂಬದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮತ್ತೊಂದು ಮಹಾ ದೋಖಾ; ಚೀಟಿ ಹೆಸರಲ್ಲಿ ಕೋಟಿ, ಕೋಟಿ ವಂಚಿಸಿದ ದಂಪತಿ

https://newsfirstlive.com/wp-content/uploads/2024/04/Bangalore-Cheeting-Case.jpg

Load More