/newsfirstlive-kannada/media/post_attachments/wp-content/uploads/2024/07/Vidhansoudha.jpg)
ರಾಜ್ಯದ ಆಡಳಿತ ಕೇಂದ್ರ, ಶಕ್ತಿಸೌಧದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಇರುವ ಗುಮ್ಮಟದಲ್ಲಿ ಸಣ್ಣ ಬಿರುಕು ಮೂಡಿದ್ದು, ಸ್ಪೀಕರ್ ಯು.ಟಿ ಖಾದರ್ ಅವರು ಇಂದು ದಿಢೀರ್ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಾಟ-ಮಂತ್ರಕ್ಕಾಗಿ ಡಿಕೆ ಶೂ ಕಳ್ಳತನ ಮಾಡಿದ್ರಾ? ಪತ್ತೆ ಹಚ್ಚಲು ಪೊಲೀಸರಿಗೆ ಕಟ್ಟಪ್ಪಣೆ; ಏನಿದರ ಅಸಲಿಯತ್ತು?
ಬಿರುಕು ಕಾಣಿಸಿಕೊಂಡಿರುವ ಮಾಹಿತಿ ತಿಳಿದ ಕೂಡಲೇ ಸ್ಪೀಕರ್ ಯು.ಟಿ ಖಾದರ್ ಅವರು ಗುಮ್ಮಟದ ಪರಿಶೀಲನೆ ನಡೆಸಿದರು. ಬಳಿಕ ಮಾಹಿತಿ ನೀಡಿದ ಅವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಈ ವಿಷಯವನ್ನು ಸಿಎಂ ಗಮನಕ್ಕೆ ನಾನು ತರ್ತಿನಿ ಎಂದರು.
ಐತಿಹಾಸಿಕ ವಿಧಾನಸೌಧ ಇದೊಂದು ಬಹಳ ವರ್ಷದ ಹಳೆಯ ಕಟ್ಟಡ. ಇದು ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರಿಗೆ ಬರುತ್ತದೆ. ಕೆಲವೊಂದು ಲೋಪದೋಷ ಆಗಿರಬಹುದು. ಬಿರುಕು ಕಾಣಿಸಿಕೊಂಡಿದ್ದನ್ನು ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ. ನಾನು ಆದಷ್ಟು ಬೇಗ ಸಿಎಂಗೆ ಈ ವಿಚಾರ ತಿಳಿಸುತ್ತೇನೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: 21 ಹಗರಣಗಳ ಬಾಂಬ್.. ವಾಲ್ಮೀಕಿ, ಮುಡಾ ಬಿಜೆಪಿ ಹೋರಾಟಕ್ಕೆ ಸಿಎಂ ಸಿದ್ದು ಕೌಂಟರ್ ಅಟ್ಯಾಕ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ