newsfirstkannada.com

ಕ್ಷೀರ ಭಾಗ್ಯದ ಹಾಲಿನ ಪೌಡರ್ ಪ್ಯಾಕೆಟ್​ ಮಾರಾಟ.. ಮುಖ್ಯಶಿಕ್ಷಕನ ವಿರುದ್ಧ ಬಿತ್ತು ಕ್ರಿಮಿನಲ್ ಕೇಸ್​

Share :

Published February 9, 2024 at 9:28am

Update February 9, 2024 at 9:29am

    ಅಗತ್ಯ ವಸ್ತುಗಳ ಕಾಯ್ದೆ 1995ರ ಅಡಿ ಪೊಲೀಸ್ ಠಾಣೆಯಲ್ಲಿ ಕೇಸ್

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕ ಅಮಾನತು ಆಗಿದ್ದರು

    ಅಕ್ಷರ ದಾಸೋಹ ಯೋಜನೆಯ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಕೇಸ್

ಯಾದಗಿರಿ: ಕ್ಷೀರ ಭಾಗ್ಯದ ಹಾಲಿನ ಪೌಡರ್ ಪ್ಯಾಕೆಟ್​ಗಳನ್ನು ಮಾರಾಟ ಮಾಡಿದ್ದ ಮುಖ್ಯಶಿಕ್ಷಕ ಸೂರ್ಯಕಾಂತ್​ ಅಮಾನತು ಮಾಡಿದ ಬೆನ್ನಲ್ಲೇ ಯಾದಗಿರಿಯ ಗ್ರಾಮೀಣ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ.

ಯಾದಗಿರಿಯ ಲಿಂಗೇರಿ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕನಾಗಿದ್ದ ಸೂರ್ಯಕಾಂತ್ ಅವರು ಶಾಲೆಗೆ ಮಕ್ಕಳಿಗಾಗಿ ಬಂದಿದ್ದ ಕ್ಷೀರಭಾಗ್ಯದ ಹಾಲಿನ ಪೌಡರ್ ಪ್ಯಾಕೆಟ್​ಗಳನ್ನ ಕಿರಾಣಿ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಜಿಲ್ಲೆಯ ಡಿಡಿಪಿಐ ಮಂಜುನಾಥ ಅವರು ಮುಖ್ಯಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಇದರ ಬೆನ್ನಲ್ಲೇ ಸೂರ್ಯಕಾಂತ್​ ಮೇಲೆ ಅಕ್ಷರ ದಾಸೋಹ ಯೋಜನೆಯ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ಅವರು ಕೇಸ್ ದಾಖಲಿಸಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆ 1995ರ ಅಡಿಯಲ್ಲಿ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ಇನ್ನು ಕೇಸ್ ದಾಖಲು ಆಗುತ್ತಿದ್ದಂತೆ ಶಿಕ್ಷಕ ಸೂರ್ಯಕಾಂತ್ ನಾಪತ್ತೆ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಷೀರ ಭಾಗ್ಯದ ಹಾಲಿನ ಪೌಡರ್ ಪ್ಯಾಕೆಟ್​ ಮಾರಾಟ.. ಮುಖ್ಯಶಿಕ್ಷಕನ ವಿರುದ್ಧ ಬಿತ್ತು ಕ್ರಿಮಿನಲ್ ಕೇಸ್​

https://newsfirstlive.com/wp-content/uploads/2024/02/YDR_MASTER.jpg

Load More