/newsfirstlive-kannada/media/post_attachments/wp-content/uploads/2024/09/Bangalore-Women-Death-Sketch.jpg)
ಬೆಂಗಳೂರು: ಹೆತ್ತ ಮಗಳೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿರೋ ಭೀಕರ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಯಲಕ್ಷ್ಮಿ (46) ಸಾವನ್ನಪ್ಪಿದ ಮಹಿಳೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಯಾನಕವಾದ ಸತ್ಯ ಹೊರಬಿದ್ದಿದೆ.
ಹೊಂಗಸಂದ್ರದ ಬಳಿ ಮೃತ ಜಯಲಕ್ಷ್ಮಿ ಅವರು ದಿನಸಿ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಜಯಲಕ್ಷ್ಮಿ ಅವರ ಮಗಳು ಪವಿತ್ರಾ ಮದುವೆಯಾದ ಮೇಲೂ ಪ್ರಿಯಕರ ಲವಲೀಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ತನ್ನ ಸ್ನೇಹಿತನ ಜೊತೆ ಸೇರಿ ಮಗಳೇ ತಾಯಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಯಾರು ಇಲ್ಲದಿದ್ದಾಗ ಸ್ನೇಹಿತನೊಂದಿಗೆ ಮಲಗಿದ್ದ ಮಗಳು; ಪ್ರಶ್ನಿಸಿದ್ದಕ್ಕೆ ತಾಯಿ ಜೀವವನ್ನೇ ತೆಗೆದುಬಿಟ್ಳು!
ಇತ್ತೀಚೆಗೆ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಪವಿತ್ರಾ ತನ್ನ ಸ್ನೇಹಿತನನ್ನ ಮನೆಗೆ ಕರೆಸಿಕೊಂಡಿದ್ದರಂತೆ. ತಾಯಿ ಮನೆಗೆ ಬಂದಾಗ ಇಬ್ಬರ ಸಂಬಂಧದ ಬಗ್ಗೆ ಗೊತ್ತಾಗಿದೆ. ಈ ವೇಳೆ ತಾಯಿ-ಮಗಳ ಮಧ್ಯೆ ಜಗಳ ಶುರುವಾಗಿದೆ. ಈ ವೇಳೆ ಸ್ನೇಹಿತನ ಜೊತೆ ಸೇರಿ ಪವಿತ್ರಾ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆಮೇಲೆ ಪೊಲೀಸರ ಮುಂದೆ ಆರೋಪಿ ಮಗಳು ಹೊಸ ಕಥೆ ಕಟ್ಟಿ ನಾಟಕ ಮಾಡಿದ್ದಾರೆ.
ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು.. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ 3 ಬಾರಿ ಫೈರಿಂಗ್; ಬರ್ಬರ ಹ*ತ್ಯೆ!
ನನ್ನ ತಾಯಿ ಬಾತ್ ರೂಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಮೃತದೇಹ ನೋಡಿದಾಗಲೇ ಪೊಲೀಸರಿಗೆ ಅನುಮಾನ ಮೂಡಿದೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಮಹಿಳೆ ಸಾವು ಕೊಲೆ ಅನ್ನೋದು ಖಚಿತವಾಗಿದೆ. ನಂತರ ಪಾಪಿ ಮಗಳ ವಿಚಾರಣೆ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಪವಿತ್ರ ಹಾಗೂ ಆಕೆಯ ಪ್ರಿಯಕರ ಲವಲೀಶ್ ಅನ್ನು ಬೊಮ್ಮನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ