/newsfirstlive-kannada/media/post_attachments/wp-content/uploads/2024/09/Bangalore-mother-Daughter-Case.jpg)
ಬೆಂಗಳೂರು: ಮಗಳಿಂದಲೇ ಹೆತ್ತ ತಾಯಿ ಕೊ*ಲೆಯಾಗಿರುವ ಭಯಾನಕ ಘಟನೆ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆಗೂಡಿ ಮಗಳು ತಾಯಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಬೊಮ್ಮನಹಳ್ಳಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಅಧಿಕಾರಿಗಳು ವಾರ್ನಿಂಗ್.. ಬಳ್ಳಾರಿ ಜೈಲಿಗೆ ಬಂದರೂ ಬುದ್ಧಿ ಕಲಿಯಲಿಲ್ಲ ಎಂದು ಬೇಸರ.. ಆಗಿದ್ದೇನು..?
ಮೃತ ಜಯಲಕ್ಷ್ಮಿ ತಮ್ಮ ಸುರೇಶ್ ಜೊತೆ ಮಗಳು ಪವಿತ್ರಾ ಮದುವೆಯಾಗಿತ್ತು. ಕಳೆದ 12 ವರ್ಷಗಳಿಂದ ಪವಿತ್ರಾ, ಸುರೇಶ್ ಸಂಸಾರ ನಡೆಸಿದ್ದಾರೆ. ಅಳಿಯ ಸುರೇಶ್ ಬಿಲ್ಡಿಂಗ್ನಲ್ಲೇ ಅತ್ತೆ ಜಯಲಕ್ಷ್ಮಿ ಮಾವ ಮುನಿರಾಜು ವಾಸವಿದ್ದರು. ಜಯಲಕ್ಷ್ಮಿ ಅವರು ಹೊಂಗಸಂದ್ರದಲ್ಲಿ ದಿನಸಿ ಅಂಗಡಿ ನೋಡಿಕೊಳುತ್ತಾ ಇದ್ದರು.
ಹೊಂಗಸಂದ್ರ ಮನೆಯಲ್ಲಿ ತಮಿಳುನಾಡು ಮೂಲದ ಲವನೀಶ್ ಬಾಡಿಗೆಗೆ ಬಂದಿದ್ದ. ಲವನೀಶ್ ಇದ್ದ ಪಕ್ಕದ ಮನೆಯಲ್ಲೇ ಜಯಲಕ್ಷ್ಮಿ & ಮುನಿರಾಜು ಇದ್ದರು. ಜಯಲಕ್ಷ್ಮಿ ಅಳಿಯ ಸುರೇಶ್ & ಪವಿತ್ರಾ ಬೇರೆ ಕಡೆ ವಾಸವಿದ್ದರು.
ಇದನ್ನೂ ಓದಿ: ಯಾರು ಇಲ್ಲದಿದ್ದಾಗ ಸ್ನೇಹಿತನೊಂದಿಗೆ ಮಲಗಿದ್ದ ಮಗಳು; ಪ್ರಶ್ನಿಸಿದ್ದಕ್ಕೆ ತಾಯಿ ಜೀವವನ್ನೇ ತೆಗೆದುಬಿಟ್ಳು!
ಪವಿತ್ರಾ ಅವರು ತಾಯಿ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಈ ವೇಳೆ ಲವನೀಶ್ ಜೊತೆಗೆ ಪವಿತ್ರಾ ಪರಿಚಯವಾಗಿದೆ. ಇತ್ತೀಚೆಗೆ ತಾಯಿ ಜಯಲಕ್ಷ್ಮಿಗೆ ಅನಾರೋಗ್ಯ ಕಾಡಿತ್ತು. ಆಗ ಪವಿತ್ರಾ ತಾನೇ ಅಂಗಡಿ ನೋಡಿಕೊಳ್ಳಲು ಬರ್ತೀನಿ ಎಂದಿದ್ದಳು. ಈ ವೇಳೆ ಲವನೀಶ್ ಜೊತೆಗಿನ ಅಕ್ರಮ ಸಂಬಂಧ ತಾಯಿ ಜಯಲಕ್ಷ್ಮಿಗೆ ಗೊತ್ತಾಗಿದೆ. ಜಗಳ ಮಾಡಿದ ಜಯಲಕ್ಷ್ಮಿ ಅವರು ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಇದಾದ ಮೇಲೆ ಒಂದು ತಿಂಗಳ ಹಿಂದೆ ಲವನೀಶ್ ಮನೆ ಖಾಲಿ ಮಾಡಿದ್ದಾನೆ.
ಕಳೆದ ಸೆಪ್ಟೆಂಬರ್ 11ರಂದು ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಪವಿತ್ರಾ, ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದಳು. ಇಬ್ಬರು ಏಕಾಂತದಲ್ಲಿ ರೂಮ್‌ನಲ್ಲಿರುವಾಗ ತಾಯಿ ಮನೆಗೆ ಬಂದಿದ್ದಾರೆ. ಈ ಇಬ್ಬರ ಅಕ್ರಮ ಸಂಬಂಧದ ಬಗ್ಗೆ ಜಯಲಕ್ಷ್ಮಿ ಅವರು ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ತಾಯಿ-ಮಗಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸ್ನೇಹಿತನ ಜೊತೆ ಸೇರಿ ಪವಿತ್ರಾ ಪಕ್ಕದಲ್ಲೇ ಟವೆಲ್‌ನಿಂದ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಜಯಲಕ್ಷ್ಮಿ ಉಸಿರು ನಿಲ್ಲಿಸಿದ ಮೇಲೆ ಪವಿತ್ರಾ ಹಾಗೂ ಲವನೀಶ್ ಬಾತ್ ರೂಮ್‌ನಲ್ಲಿ ಬಿದ್ದು ತಾಯಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹ ನೋಡಿದ ಪೊಲೀಸರಿಗೆ ಮೊದಲೇ ಅನುಮಾನ ಬಂದಿದೆ. ಮಾಹಿತಿ ನೀಡಿ ಕಥೆ ಕಟ್ಟಿದ್ದ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಪೋಸ್ಟ್ ಮಾರ್ಟಮ್ ವೇಳೆ ಜಯಲಕ್ಷ್ಮಿ ಅವರ ಸಾವು ಸಹಜ ಸಾವಲ್ಲ ಕತ್ತು ಹಿಸುಕಿ ಉಸಿರುಗಟ್ಟಿಸಿರೋದು ಪತ್ತೆಯಾಗಿದೆ. ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪವಿತ್ರಾ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ. ಜಯಲಕ್ಷ್ಮಿ ಅವರನ್ನು ಕಳೆದುಕೊಂಡ ಪತಿ ಮುನಿರಾಜು ಗೋಳಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ