/newsfirstlive-kannada/media/post_attachments/wp-content/uploads/2023/09/Police-Food.jpg)
ಬೆಂಗಳೂರು: ತಮಿಳುನಾಡಿಗೆ ನೀರು ಬಿಡುತ್ತಿರೋದನ್ನ ವಿರೋಧಿಸಿ ರೈತರು, ಕನ್ನಡ ಪರ ಹೋರಾಟಗಾರರು ಇವತ್ತು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ಬೆಂಗಳೂರು ಬಂದ್ ಹಿನ್ನೆಲೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ ಟೈಟ್ ಸೆಕ್ಯೂರಿಟಿ ಎಷ್ಟಿದೆ ಅಂದ್ರೆ ಕೆಲವಡೆ ಪ್ರತಿಭಟನಾಕಾರರಿಗಿಂತ ಪೊಲೀಸ್ ಸಿಬ್ಬಂದಿಯ ಸಂಖ್ಯೆಯೇ ಹೆಚ್ಚಾಗಿದೆ.
ಬೆಂಗಳೂರು ಬಂದ್‌ಗಾಗಿ ನೇಮಿಸಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕಳಪೆ ಆಹಾರ ಪೂರೈಸಿದ ಘಟನೆ ಬೆಳಕಿಗೆ ಬಂದಿದೆ. ಯಶವಂತಪುರ ಸರ್ಕಲ್‌ನಲ್ಲಿ ಕೆಲಸ ಮಾಡೋ ಪೊಲೀಸರಿಗೆ ಕೊಟ್ಟಿರುವ ಬಿರಿಯಾನಿಯಲ್ಲಿ ಸತ್ತ ಇಲ್ಲಿಯೊಂದು ಪತ್ತೆಯಾಗಿದೆ. ಅದೃಷ್ಟವಶಾತ್ ಯಾರೂ ಕಳಪೆ ಊಟವನ್ನು ಸೇವಿಸಿಲ್ಲ. ಒಂದು ವೇಳೆ ಇಲಿ ಇದ್ದ ಊಟ ಸೇವಿಸಿದ್ರೆ ಅನಾಹುತ ಆಗೋ ಸಾಧ್ಯತೆ ಇತ್ತು ಎನ್ನಲಾಗಿದೆ.
ಇದನ್ನೂ ಓದಿ: WATCH: ಕಾವೇರಿ ಕನ್ನಡಿಗರ ಸ್ವತ್ತು.. 365 ದಿನವೂ ಹೋರಾಟ ಮಾಡೋ ಈ ವಿಷ್ಣು ರಥದ ವಿಶೇಷ ಏನು ಗೊತ್ತಾ?
ಕಷ್ಟಪಟ್ಟು ಸಾರ್ವಜನಿಕರ ಭದ್ರತೆಗಾಗಿ ದುಡಿಯುತ್ತಿರುವ ಪೊಲೀಸರಿಗೆ ಕಳಪೆ ಆಹಾರ ಪೂರೈಕೆ ಮಾಡಿರೋದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಬಂದ್ ಹಿನ್ನೆಲ್ ಅಶೋಕ್ ಟಿಫಿನ್ ಸೆಂಟರ್ ಅವರು 180 ಊಟ ಕೊಟ್ಟಿದ್ದಾರೆ. ಅದರಲ್ಲಿ ಇಲಿ ಇರೋದು ಪತ್ತೆಯಾಗಿದೆ. ಊಟದಲ್ಲಿ ಇಲಿ ಕೊಟ್ಟ ಹೊಟೇಲ್ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ.
/newsfirstlive-kannada/media/post_attachments/wp-content/uploads/2023/09/Bangalore-Commissioner.jpg)
ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಇಲಿ ಇದ್ದ ಊಟ ಕೊಟ್ಟ ವಿಚಾರಕ್ಕೆ ಸಂಚಾರಿ ಕಮಿಷನರ್ ಎಂ.ಎನ್. ಅನುಚೇತ್ ಗರಂ ಆಗಿದ್ದಾರೆ. ಊಟ ಸಪ್ಲೈ ಮಾಡಿದ ಹೊಟೇಲ್‌ನವರಿಗೆ ಎಂ.ಎನ್ ಅನುಚೇತ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಎರಡು ಹೊತ್ತಿನ ಊಟಕ್ಕೆ ರಾಜ್ಯ ಸರ್ಕಾರ 200 ರೂಪಾಯಿ ಖರ್ಚು ಮಾಡುತ್ತೆ. ಇಷ್ಟಾದರೂ ಒಳ್ಳೆ ಗುಣಮಟ್ಟದ ಊಟ ಯಾಕೆ ಕೊಟ್ಟಿಲ್ಲ ಎಂದು ಅನುಚೇತ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಯಶವಂತಪುರ ಸಂಚಾರ ಮತ್ತು ಟ್ರಾಫಿಕ್ ಇನ್ಸ್‌ಪೆಕ್ಟರ್‌ಗಳಿಗೆ ನೊಟೀಸ್ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us