ಸವದತ್ತಿ ಯಲ್ಲಮ್ಮಗೆ ನಾಲ್ಕೂವರೆ ಲಕ್ಷ ಮೌಲ್ಯದ ಸೀರೆ ಅರ್ಪಣೆ.. ಈಡೇರಿದ 70 ವರ್ಷದ ಸಂಕಲ್ಪ..!

author-image
Ganesh
Updated On
ಸವದತ್ತಿ ಯಲ್ಲಮ್ಮಗೆ ನಾಲ್ಕೂವರೆ ಲಕ್ಷ ಮೌಲ್ಯದ ಸೀರೆ ಅರ್ಪಣೆ.. ಈಡೇರಿದ 70 ವರ್ಷದ ಸಂಕಲ್ಪ..!
Advertisment
  • ದುಬಾರಿ ಬೆಲೆಯ ಚಿನ್ನ ಲೇಪಿತ ಸೀರೆ ಕಾಣಿಕೆ
  • ಯಲ್ಲಮ್ಮಗೆ ಸೀರೆ ಅರ್ಪಿಸಿದ ಸ್ವಾಮೀಜಿ ಯಾರು?
  • ಐತಿಹಾಸಿಕ ಪ್ರಸಿದ್ಧ ಯಾತ್ರಾ ಸ್ಥಳ ಈ ಯಲ್ಲಮ್ಮ ಗುಡ್ಡ

ಬೆಳಗಾವಿ: ಸವದತ್ತಿ ಯಲ್ಲಮ್ಮನಿಗೆ ದುಬಾರಿ ಬೆಲೆಯ ಚಿನ್ನ ಲೇಪಿತ ಸೀರೆಯನ್ನ ಕಾಣಿಕೆಯಾಗಿ ನೀಡಲಾಗಿದೆ. ವೀರಗೊಟದ ಅಡವಿಲಿಂಗ ಸ್ವಾಮೀಜಿ ಬರೋಬ್ಬರಿ 4.5 ಲಕ್ಷ ಮೌಲ್ಯದ ಸೀರೆಯನ್ನು ಅರ್ಪಣೆ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೊಟದ ಅಡವಿಲಿಂಗ ಸ್ವಾಮೀಜಿ ಯಲ್ಲಮ್ಮನಿಗೆ ಸೀರೆ ನೀಡಿದ್ದಾರೆ. ಜಂಬಗಿಯ ಪ್ರಭುದೇವ ಬೆಟ್ಟದ ಶಿವಯೋಗೀಶ್ವರರ ಸಂಕಲ್ಪದಂತೆ ಅರ್ಪಣೆ ಮಾಡಿದ್ದಾರೆ. ಸುಮಾರು 70 ವರ್ಷಗಳ ಹಿಂದೆ ಮಾಡಿಕೊಂಡ ಸಂಕಲ್ಪವನ್ನು ಇಂಡು ಈಡೇರಿಸಲಾಗಿದೆ ಎಂದು ತಿಳಿದುಬಂದಿದೆ. ಶಿವಯೋಗೀಶ್ವರರು ದೇವಿಗೆ ಉಡಿ ತುಂಬು ಸಂಕಲ್ಪ ಹೊಂದಿದ್ದರು. ಅಂತೆಯೇ ಇಂದು ಹರಕೆ ತೀರಿಸಲಾಗಿದೆ. ಎಲ್ಲರಿಗೂ ಒಳ್ಳೆಯಾಗಲಿ ಎಂದು ‌ಅಡವಿಲಿಂಗ ಸ್ವಾಮೀಜಿ ವಿಶೇಷ ಪ್ರಾರ್ಥನೆ ಮಾಡಿಕೊಂಡರು.

ಇದನ್ನೂ ಓದಿ: ಚಿನ್ನದ ಬೆಲೆ ಲಕ್ಷದತ್ತ.. ಒಂದೇ ದಿನದಲ್ಲಿ 6 ಸಾವಿರ ರೂಪಾಯಿ ಹೆಚ್ಚಳ..!

publive-image

ಸವದತ್ತಿ ಯಲ್ಲಮ್ಮ ದೇವಸ್ಥಾನ ರೇಣುಕಾ ದೇವಿಯ ದೇವಾಲಯವಾಗಿದೆ. ಭಾರತದ ಕರ್ನಾಟಕ ರಾಜ್ಯದ ಸೌವದತ್ತಿ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಯಾತ್ರಾಸ್ಥಳ. ಇದು ಹಿಂದೆ ಸಿದ್ಧಾಚಲ ಪರ್ವತ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ನೆಲೆಗೊಂಡಿದೆ. ಈಗ ಇದನ್ನು ‘ಯಲ್ಲಮ್ಮ ಗುಡ್ಡ’ ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿರುವ ದೇವತೆ ಯಲ್ಲಮ್ಮ ಅಥವಾ ಎಲ್ಲಮ್ಮ ಅಥವಾ ರೇಣುಕಾ, ಫಲವತ್ತತೆಯ ದೇವತೆ ಎಂದು ಪೂಜಿಸಲ್ಪಡುತ್ತಾರೆ.

ಇದನ್ನೂ ಓದಿ: ಸ್ಟ್ರಾಂಗ್ ಕಂಬ್ಯಾಕ್​​ಗೆ ಮತ್ತೊಂದು ಅವಕಾಶ.. RCB ಮುಂದಿನ ಪಂದ್ಯ ಯಾವಾಗ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment