newsfirstkannada.com

ಅಬ್ಬಬ್ಬಾ ಎಷ್ಟು ಕ್ರೌರ್ಯ.. ಇಲ್ಲಿ ನೈಟ್ರೋಜನ್ ಗ್ಯಾಸ್​ ಮೂಲಕ ಮರಣ ದಂಡನೆ ನೀಡಲಾಗುತ್ತೆ!

Share :

Published January 28, 2024 at 8:56pm

    ಮೊಟ್ಟ ಮೊದಲ ಬಾರಿಗೆ ಮರಣದಂಡನೆಯಲ್ಲಿ ಹೊಸ ವಿಧಾನ ಜಾರಿ

    ನೇಣು ಹಾಕುವುದರ ಮೂಲಕ ಕೊಲ್ಲುವುದು ಅಮಾನವೀಯ ಕೃತ್ಯನಾ?

    ನೈಟ್ರೋಜನ್ ಗ್ಯಾಸ್ ಬಳಸಿ ಕೊಲ್ಲುವುದು ಮರಣದಂಡನೆಗೆ ಉತ್ತಮ!

ಭಾರತೀಯ ಕಾನೂನಿನಲ್ಲಿ ಮರಣ ದಂಡನೆ ಅನ್ನೋದು ಅತ್ಯಂತ ಗರಿಷ್ಠ ಹಾಗೂ ಕೊನೆಯ ಶಿಕ್ಷೆ ಆಗಿದೆ. ಮರಣ ದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನ ಕಾನೂನು ಅಡಿಯಲ್ಲಿ ಹೇಗೆ ಗಲ್ಲಿಗೇರಿಸ್ತಾರೆ ಅನ್ನೋದ್ರ ಬಗ್ಗೆ ಬಹುಶಃ ನಿಮಗೆಲ್ಲಾ ಗೊತ್ತೇ ಇರುತ್ತೆ. ಅಪರಾಧಿಯನ್ನ ಬಲವಂತವಾಗಿ ನೇಣುಗಂಬಕ್ಕೆ ಏರಿಸಲಾಗುತ್ತೆ. ಆದರೆ ಮರಣದಂಡನೆಯ ವಿಧಾನದಲ್ಲಿ ಅಮೆರಿಕಾ ಹೊಸ ಆವಿಷ್ಕಾರ ಮಾಡಿದೆ. ಇದೇ ಮೊದಲ ಬಾರಿಗೆ ನೈಟ್ರೋಜನ್ ಗ್ಯಾಸ್ ಬಳಸಿ ಮರಣ ದಂಡನೆ ಶಿಕ್ಷೆ ನೀಡಿದೆ. ಅಷ್ಟಕ್ಕೂ, ನೈಟ್ರೋಜನ್ ಗ್ಯಾಸ್ ಮೂಲಕ ನೀಡುವ ಮರಣದಂಡನೆ ಶಿಕ್ಷೆ ಹೇಗಿರುತ್ತೆ? ಇಂಥ ಶಿಕ್ಷೆ ಜಾರಿಗೆ ತಂದ ಮೊದಲ ದೇಶ ಯಾವುದು ಅನ್ನೋ ಸ್ಪೆಷಲ್ ಸ್ಟೋರಿ ಇಲ್ಲಿದೆ.

ಭಾರತೀಯ ದಂಡ ಸಂಹಿತೆಯಲ್ಲಿ ಮರಣದಂಡನೆ ಅತ್ಯಂತ ದೊಡ್ಡ ಹಾಗೂ ಗರಿಷ್ಠ ಶಿಕ್ಷೆ. ಭಾರತದಲ್ಲಿ ಕೆಲವು ಅಪರಾಧಗಳಿಗೆ ಕಾನೂನುಬದ್ಧ ನೀಡುವ ದಂಡವಾಗಿದೆ. ಮರಣದಂಡನೆ ಶಿಕ್ಷೆಗೆ ಒಳಪಟ್ಟ ಅಪರಾಧಿಯನ್ನ ಕಾನೂನಡಿಯಲ್ಲಿ ಕೊಲ್ಲಲಾಗುವುದು. ಈ ಶಿಕ್ಷೆಯನ್ನ ‘ಅಪರೂಪದ ಪ್ರಕರಣಗಳಲ್ಲಿ’ ಮಾತ್ರ ವಿಧಿಸಲಾಗುತ್ತದೆ. ಭಾರತದಲ್ಲಿ ಕೊನೆಯದಾಗಿ 2012ರಲ್ಲಿ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ 2020ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಮರಣದಂಡನೆ ನೀಡಲಾಗಿತ್ತು.

ಅಂದ್ಹಾಗೆ, ಮರಣದಂಡನೆ ಶಿಕ್ಷೆಗೆ ಒಳಪಟ್ಟ ಕೈದಿಯನ್ನ ಹೇಗೆ ಗಲ್ಲಿಗೇರಿಸ್ತಾರೆ ಅನ್ನೋದ್ರ ಬಗ್ಗೆ ನಿಮಗೆಲ್ಲಾ ಸಣ್ಣ ಐಡಿಯಾ ಇರುತ್ತೆ. ಸಿನಿಮಾಗಳಲ್ಲಿಯೂ ಇಂಥಹ ದೃಶ್ಯವನ್ನ ನೋಡಿರ್ತೀರಾ. ಇನ್ನು ಕೆಲವ್ರು ಗಲ್ಲಿಗೇರಿಸುವ ಜಾಗವನ್ನ ನೋಡಿರಬಹುದು. ಸಾಮಾನ್ಯವಾಗಿ ಮರಣದಂಡನೆ ಶಿಕ್ಷೆಗೆ ಒಳಪಡುವ ಅಪರಾಧಿಗೆ ಯಾವ ಸಮಯದಲ್ಲಿ ಯಾವ ಜಾಗದಲ್ಲಿ ಶಿಕ್ಷೆ ಕೊಡಬೇಕು ಅನ್ನೋದು ಮೊದಲೇ ನಿರ್ಧಾರವಾಗಿರುತ್ತೆ. ಅದಕ್ಕೂ ಮುಂಚೆ ಆ ಅಪರಾಧಿಗೆ ಮೆಡಿಕಲ್ ಟೆಸ್ಟ್​ ನಡೆಸಲಾಗುತ್ತದೆ. ಕೊನೆಯ ಆಸೆ ಕೇಳಲಾಗುತ್ತದೆ. ನಿಗಧಿಯಾದ ದಿನದಂದು ಜೈಲಿನೊಳಗೆ ಇರುವ ನೇಣು ಕಂಬದ ಬಳಿ ಕರೆದುಕೊಂಡು ಹೋಗಿ ಆತನ ಮುಖಕ್ಕೆ ಬಟ್ಟೆ ಹಾಕಿ ಹ್ಯಾಂಗ್ ಮಾಡ್ತಾರೆ. ಉಸಿರು ನಿಂತಿದೆ ಅಂದ್ಮೇಲೆ ಆ ಶವವನ್ನ ಕುಟುಂಬಕ್ಕೆ ವರ್ಗಾಯಿಸ್ತಾರೆ. ಇದು ಭಾರತೀಯ ನೀತಿ ಸಂಹಿತೆಯ ಅಡಿ ಮರಣದಂಡನೆಯ ವಿಧಾನ. ವಿಶ್ವದ ಬಹುತೇಕ ರಾಷ್ಟ್ರಗಳು ಇದೇ ವಿಧಾನವನ್ನ ಬಳಸ್ತಾರೆ. ಆದರೀಗ ವಿಶ್ವದ ದೊಡ್ಡಣ್ಣ ಅಮೆರಿಕಾ ಮರಣದಂಡನೆಯಲ್ಲಿ ಹೊಸ ವಿಧಾನ ಜಾರಿ ಮಾಡಿದೆ.

ನೈಟ್ರೋಜನ್ ಗ್ಯಾಸ್ ಬಳಸಿ ಮರಣದಂಡನೆ ಶಿಕ್ಷೆ!

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಸರ್ಕಾರವೂ ನೈಟ್ರೋಜನ್ ಗ್ಯಾಸ್​ ಮೂಲಕ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಗೆ ವಿಷಾನಿಲ ನೀಡಿ ಜೀವ ತೆಗೆಯಲಾಗಿದೆ. ಈ ಬೆಳವಣಿಗೆ ಈಗ ಚರ್ಚೆಗೆ ಕಾರಣವಾಗಿದ್ದು, ಎಲ್ಲಾ ದೇಶಗಳು ಅಮೆರಿಕದ ಕಡೆ ನೋಡುವಂತಾಗಿದೆ. ಇದಕ್ಕೂ ಮುನ್ನ ವಿಷಕಾರಿ ರಾಸಾಯನಿಕ ದ್ರವ ಪದಾರ್ಥಗಳನ್ನು ಇಂಜೆಕ್ಷನ್ ಮೂಲಕ ಅಪರಾಧಿಗೆ ನೀಡಿ ಮರಣ ದಂಡನೆ ಶಿಕ್ಷೆಗೆ ಒಳಪಡಿಸಲಾಗ್ತಿತ್ತು. ಈ ರೀತಿಯ ಮರಣ ದಂಡನೆ ಈಗಲೂ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದೆ. ಆದರೆ, ಇದೀಗ ಅಮೆರಿಕ ಮರಣದಂಡನೆಯ ವಿಧಾನದಲ್ಲಿ ಹೊಸ ಪದ್ದತಿಯ ಮೊರೆ ಹೋಗಿದೆ. ಅಮೆರಿಕ ಪ್ರಜೆ ಕೆನ್ನೆತ್ ಯುಜಿನಿ ಸ್ಮಿತ್ ಎಂಬಾತನಿಗೆ ನೈಟ್ರೋಜನ್ ಗ್ಯಾಸ್​ ಮೂಲಕ ಮರಣದಂಡನೆ ನೀಡಿ ಜಗತ್ತಿಗೆ ಹೊಸ ಸಂದೇಶ ರವಾನಿಸಿದೆ.

ನೈಟ್ರೋಜನ್ ಗ್ಯಾಸ್ ಮರಣದಂಡನೆ ಹೇಗೆ ನೀಡಲಾಗುತ್ತದೆ?

ನೈಟ್ರೋಜನ್ ಗ್ಯಾಸ್ ಮರಣದಂಡನೆ ಅಂದ್ರೆ, ಅಪರಾಧಿಗೆ ಆಮ್ಲಜನಕ ಸಿಗದಂತೆ ಮಾಡಿ ಸಾಯಿಸುವುದು. ಅಂದ್ರೆ ಒಬ್ಬ ಮನುಷ್ಯ ಇಂಗಾಲದ ಡೈ ಆಕ್ಸೈಡ್​ ಬಿಡುಗಡೆ ಮಾಡಿ ಆಮ್ಲಜನಕ ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ಈ ಶಿಕ್ಷೆಯಲ್ಲಿ ಅಪರಾಧಿಗೆ ಆಮ್ಲಜನಕ ಸಿಗಲ್ಲ. ಇಲ್ಲಿ ಆಮ್ಲಜನಕದ ಬದಲು ಸಾರಜನಕ ನೀಡಲಾಗುತ್ತದೆ. ಅಪರಾಧಿಯ ಶ್ವಾಸಕೋಶಕ್ಕೆ ನೈಟ್ರೋಜನ್ ಸೇರಿದಾಗ ಆ ವ್ಯಕ್ತಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪುತ್ತಾನೆ. ಇದೇ ವಿಧಾನವನ್ನ ಈಗ ಅಮೆರಿಕ ಸರ್ಕಾರವೂ ಜಾರಿ ಮಾಡಿದೆ. ಹೌದು, ಮರಣದಂಡನೆ ಶಿಕ್ಷೆಗೆ ಒಳಪಟ್ಟ ಅಪರಾಧಿಯನ್ನ ಒಂದು ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಆತನಿಗೆ ಎಲ್ಲಿಯೂ ಆಮ್ಲಜನಕ ಸಿಗದಂತೆ ನೋಡಿಕೊಳ್ಳಲಾಗುತ್ತದೆ. ವ್ಯಕ್ತಿಗೆ ನೈಟ್ರೋಜನ್ ಮಾಸ್ಕ್​ವೊಂದನ್ನ ಹಾಕಿ ಸಾರಜನಕದ ಅನಿಲ ಆತನ ದೇಹ ಸೇರುವಂತೆ ಮಾಡಲಾಗುತ್ತದೆ. ಅಪರಾಧಿಯ ದೇಹದಲ್ಲಿ ನೈಟ್ರೋಜನ್ ಅನಿಲ ಸೇರಿದ ಕೆಲವೇ ನಿಮಿಷಗಳಲ್ಲಿ ಆತ ಉಸಿರಾಟದ ತೊಂದರೆಯಿಂದ ಒದ್ದಾಡೋಕೆ ಶುರು ಮಾಡ್ತಾನೆ. ಮೊದಲೇ ಆತನನ್ನ ಬೆಡ್​ ಮೇಲೆ ಬಂಧಿಸಿಟ್ಟು ತಪ್ಪಿಸಿಕೊಳ್ಳದಂತೆ ಮಾಡಲಾಗಿರುತ್ತೆ. ಆಗ ಆ ಅಪರಾಧಿ ಬೇರೆ ಯಾವುದೇ ಮಾರ್ಗವಿಲ್ಲದೇ ನೈಟ್ರೋಜನ್​ ಅನಿಲವನ್ನು ಸೇವನೆ ಮಾಡಲೇಬೇಕಾಗುತ್ತದೆ. ಅದ್ಯಾವಾಗ ಶ್ವಾಸಕೋಶಕ್ಕೆ ನೈಟ್ರೋಜನ್ ಹೋಗುತ್ತೋ ಇದಾದ ಕೆಲ ನಿಮಿಷಗಳಲ್ಲಿ ಆತ ಸಾವನ್ನಪ್ಪುತ್ತಾನೆ.

ಅಮೆರಿಕಾ ಪ್ರಜೆಗೆ ನೈಟ್ರೋಜನ್ ಗ್ಯಾಸ್ ಮರಣದಂಡನೆ!

ಅಮೆರಿಕ ಸರ್ಕಾರ ಸದ್ಯ ಕೆನ್ನೆತ್ ಯುಜಿನಿ ಸ್ಮಿತ್ ಎನ್ನುವ ಅಪರಾಧಿಗೆ ಇಂಥದ್ದೇ ವಿಧಾನದಲ್ಲಿ ಮರಣದಂಡನೆ ಶಿಕ್ಷೆ ನೀಡಿದೆ. 1988ರಲ್ಲಿ ಪಾದ್ರಿಯೊಬ್ಬರ ಪತ್ನಿಯನ್ನು ಸ್ಮಿತ್ ಹತ್ಯೆ ಮಾಡಿದ್ದ. ಇದು ಸುಪಾರಿ ಹತ್ಯೆಯಾಗಿತ್ತು. ಈ ಘಟನೆ ನಡೆದ 3 ದಶಕಗಳ ಬಳಿಕ ಅಪರಾಧಿಗೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಈ ಹಿನ್ನೆಲೆ ಅಮೆರಿಕದ ಅಲಬಾಮಾ ರಾಜ್ಯದ ಹೋಲ್ಮನ್ ಕಾರಾಗೃಹದಲ್ಲಿ ಅಪರಾಧಿ ದೇಹಕ್ಕೆ ನೈಟ್ರೋಜನ್ ಅನಿಲ ಹರಿಸಿ ಸ್ಮಿತ್‌ನ ಕೊಲ್ಲಲಾಗಿದೆ. ಸುಮಾರು 22 ನಿಮಿಷಗಳ ಕಾಲ ಆತನಿಗೆ ನೈಟ್ರೋಜನ್ ಸಪ್ಲೈ ಮಾಡಲಾಗಿದ್ದು, ಇದಾದ ಕೆಲವು ನಿಮಿಷಗಳ ಕಾಲ ಆತ ಪ್ರಜ್ಞೆಯಲ್ಲಿಯೇ ಇದ್ದನಂತೆ. ಆಮೇಲೆ ಬಿಡಿಸಿಕೊಳ್ಳಲು ಯತ್ನಿಸಿದ್ದ. ಸುಮಾರು 4 ನಿಮಿಷಗಳ ಕಾಲ ಆತ ಒದ್ದಾಟ ನಡೆಸಿದ್ದ. 5ನೇ ನಿಮಿಷಕ್ಕೆ ಉಸಿರಾಟದ ತೀವ್ರತೆ ಹೆಚ್ಚಾಗಿತ್ತು. ನಂತರ ಪ್ರಜ್ಞೆ ತಪ್ಪಿ ಜೀವ ಬಿಟ್ಟ ಎಂದು ವರದಿಯಾಗಿದೆ. ಅಲಬಾಮಾ ಸೇರಿದಂತೆ ಅಮೆರಿಕ ದೇಶದ ಒಟ್ಟು 3 ಕಾರಾಗೃಹಗಳಲ್ಲಿ ಅಪರಾಧಿಗಳಿಗೆ ನೈಟ್ರೋಜನ್ ಗ್ಯಾಸ್​ ಮೂಲಕ ಮರಣ ದಂಡನೆ ಶಿಕ್ಷೆ ಜಾರಿಗೊಳಿಸುವ ವಿಧಾನ ಅಳವಡಿಸಲಾಗಿದೆಯಂತೆ. ಅಲಬಾಮಾ, ಓಕ್ಲಹೋಮಾ ಹಾಗೂ ಮಿಸ್ಸಿಸ್ಸಿಪ್ಪಿ ಕಾರಾಗೃಹದಲ್ಲಿ ಮಾತ್ರ ಈ ರೀತಿಯ ಗ್ಯಾಸ್‌ ಚೇಂಬರ್ ವ್ಯವಸ್ಥೆ ಅಳವಡಿಸಲಾಗಿದ್ದು, ಇನ್ಮುಂದೆ ಮರಣದಂಡನೆ ಕೈದಿಗಳಿಗೆ ಇದೇ ವಿಧಾನ ಬಳಸಲಾಗುವುದಂತೆ.

ಅಂದ್ಹಾಗೆ ಮರಣದಂಡನೆ ಅನ್ನೋದು ಹಿಂಸೆ. ಅದರಲ್ಲೂ ನೇಣು ಹಾಕುವುದರ ಮೂಲಕ ಕೊಲ್ಲುವುದು ಅಮಾನವೀಯ ಕೃತ್ಯ ಎಂದು ಹೇಳಲಾಗುತ್ತದೆ. ಹಾಗಾಗಿ ಅದಕ್ಕೆ ಪರ್ಯಾಯ ಮಾರ್ಗವಾಗಿ ನೈಟ್ರೋಜನ್ ಗ್ಯಾಸ್ ಬಳಸಿ ಕೊಲ್ಲುವುದು ಉತ್ತಮ ಎಂದು ಅಮೆರಿಕಾ ನಿರ್ಧರಿಸಿತ್ತು. ಇದರಿಂದ ಅಪರಾಧಿ ಅಷ್ಟು ಹಿಂಸಾತ್ಮಕವಾಗಿ ಸಾಯಲ್ಲ ಅನ್ನೋದು ನಂಬಿಕೆಯಾಗಿತ್ತು. ಆದರೆ ಕೆನ್ನೆತ್ ಯುಜಿನಿ ಸ್ಮಿತ್ ಪ್ರಕರಣದಲ್ಲಿ ಅದು ಸುಳ್ಳಾಗಿದೆ. ನೈಟ್ರೋಜನ್ ಗ್ಯಾಸ್​ ಸಪ್ಲೈ ಮಾಡಿದ ಬಳಿ ಸ್ಮಿತ್​ ಸಿಕ್ಕಾಪಟ್ಟೆ ಒದ್ದಾಡಿದ್ದ. ನರಳಿ ನರಳಿ ಪ್ರಾಣಬಿಟ್ಟಿದ್ದ. ಹಾಗಾಗಿ ಅಮೆರಿಕಾ ಅಂದುಕೊಂಡಿದ್ದ ಸುಳ್ಳಾಗಿದೆ. ಇನ್ನು ಈ ವಿಧಾನದ ಬಗ್ಗೆ ಸಾಕಷ್ಟು ವಿರೋಧವೂ ವ್ಯಕ್ತವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ ಎಷ್ಟು ಕ್ರೌರ್ಯ.. ಇಲ್ಲಿ ನೈಟ್ರೋಜನ್ ಗ್ಯಾಸ್​ ಮೂಲಕ ಮರಣ ದಂಡನೆ ನೀಡಲಾಗುತ್ತೆ!

https://newsfirstlive.com/wp-content/uploads/2024/01/us-death-sentence-1.jpg

Load More