6 ದಿನದ ಬಳಿಕ ಒಂದಾದ ಕತೆ.. ಮಾಲಕಿ ಮತ್ತು ಶ್ವಾನದ ದೃಶ್ಯ ಕಂಡು ಕಣ್ಣೀರಿಟ್ಟ ಜನ -VIDEO

author-image
Ganesh
Updated On
6 ದಿನದ ಬಳಿಕ ಒಂದಾದ ಕತೆ.. ಮಾಲಕಿ ಮತ್ತು ಶ್ವಾನದ ದೃಶ್ಯ ಕಂಡು ಕಣ್ಣೀರಿಟ್ಟ ಜನ -VIDEO
Advertisment
  • ಮನ ಕಲುಕಿದ ನಾಯಿ ಮತ್ತು ಮಾಲಕಿಯ ರೋದನೆ
  • ಕೇರಳ ಭೂ-ಕುಸಿತದಲ್ಲಿ ದಿಕ್ಕಪಾಲಾಗಿದ್ದ ಕುಟುಂಬಸ್ಥರು
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ

ಕೇರಳದಲ್ಲಿ ಘನಘೋರ ದುರಂತ ನಡೆದು ಆರು ದಿನಗಳು ಕಳೆದಿವೆ. ಇಷ್ಟಾದ್ರೂ ಅಲ್ಲಿ ನರಕಸದೃಶ್ಯವೇ ಕಾಣ್ತಿದೆ. ಕಲ್ಲುಬಂಡೆ, ಕೆಸರಿನ ಮಧ್ಯೆ, ಮರದ ಬುಡಗಳ ಕೆಳಗೆ ಎಲ್ಲೆಲ್ಲೂ ಶವಗಳೇ ಕಾಣ್ತಿವೆ. ಸಾವಿನ ಎದುರು ಹೋರಾಡಿ ಬದುಕಿ ಬಂದವರ ಮುಖದಲ್ಲಿ ಕರಾಳತೆಯ ಕರಿಛಾಯೆ ಇನ್ನೂ ಆವರಿಸಿದೆ.

ಚೂರಲ್ ಮಲದಲ್ಲಿ ಗುಡ್ಡ ಕುಸಿತ ಹಿನ್ನಲೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಮೂಕಪ್ರಾಣಿಗೆ ಇದರ ಬಗ್ಗೆ ಏನು ಗೊತ್ತು ಹೇಳಿ..? ಕಳೆದ 6 ದಿನಗಳಿಂದ ತನ್ನನ್ನು ಸಾಕಿದವರಿಗಾಗಿ ಹುಡುಕುತ್ತಾ.. ಕಾಯುತ್ತ ಈ ಶ್ವಾನ ಅಲೆದಾಡುತ್ತಿತ್ತು..

ಕುಟುಂಬಸ್ಥರು ಕಾಳಜಿ ಕೇಂದ್ರದಿಂದ ತಾವಿದ್ದ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಒಡತಿಯನ್ನು ನೋಡಿದ ಶ್ವಾನ ಓಡೋಡಿ ಬಂದಿದ್ದು, ಇಷ್ಟು ದಿನ ನನ್ನ ಬಿಟ್ಟು ಎಲ್ಲಿ ಹೋಗಿದ್ದೆ ಎಂದು ಅಪ್ಪಿಕೊಂಡಿದೆ. ಈ ವೇಳೆ ಶ್ವಾನ ಹಾಗೂ ಒಡತಿ ಕಣ್ಣೀರು ಹಾಕಿದ ಘಟನೆ ಮನಕಲಕುವಂತಿತ್ತು. ನೋಡುಗರ ಹೃದಯವೂ ಮಿಡಿಯುವಂತಿತ್ತು ಈ ದೃಶ್ಯ.

ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!

ಇದನ್ನೂ ಓದಿ:ಮ್ಯಾಕ್ಸ್​ವೆಲ್​ಗೆ ಗೇಟ್​ಪಾಸ್.. ರಿಲೀಸ್​​ಗೆ ಇಲ್ಲಿದೆ ಪ್ರಮುಖ 3 ಕಾರಣ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment