ಹಿಮಪಾತದಲ್ಲಿ ಕರುಣಾಜನಕ ಕಥೆ.. 2 ದಿನಗಳಾದ್ರೂ ಮಾಲೀಕನ ಶವ ಬಿಟ್ಟು ಹೋಗದೆ ಕಾಯುತ್ತಿದ್ದ ಶ್ವಾನ

author-image
admin
Updated On
ಹಿಮಪಾತದಲ್ಲಿ ಕರುಣಾಜನಕ ಕಥೆ.. 2 ದಿನಗಳಾದ್ರೂ ಮಾಲೀಕನ ಶವ ಬಿಟ್ಟು ಹೋಗದೆ ಕಾಯುತ್ತಿದ್ದ ಶ್ವಾನ
Advertisment
  • ಹಿಮಾಚಲ ಪ್ರದೇಶಕ್ಕೆ ಇಬ್ಬರು ಟ್ರಕ್ಕಿಂಗ್ ಹೋಗಿದ್ದಾಗ ಸಾವು
  • 2 ದಿನ ಮಾಲೀಕರ ಶವದ ಜಾಗ ಬಿಟ್ಟು ಎಲ್ಲಿಯೂ ಹೋಗಿಲ್ಲ
  • ಜರ್ಮನ್ ಶೆಫರ್ಡ್‌ ಇದ್ದ ಜಾಗದಿಂದ ಮೃತದೇಹ ಸ್ಥಳಾಂತರ

ನಾಯಿಗಿರುವ ನಿಯತ್ತು ಯಾವ ಮನುಷ್ಯರಿಗೂ ಇರೋದಕ್ಕೆ ಸಾಧ್ಯವಿಲ್ಲ. ಈ ಮಾತು ಅಕ್ಷರಶಃ ಸತ್ಯ. ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್ ಪ್ರದೇಶದಲ್ಲಿ ಜರ್ಮನ್ ಶೆಫರ್ಡ್‌ ನಾಯಿಯೊಂದು ಸ್ವಾಮಿನಿಷ್ಠೆ ಮೆರೆದಿರುವ ಕರುಣಾಜನಕ ಘಟನೆ ನಡೆದಿದೆ.

ಹಿಮಾಚಲ ಪ್ರದೇಶಕ್ಕೆ ಇಬ್ಬರು ಟ್ರಕ್ಕಿಂಗ್ ಅಂತ ಹೋಗಿದ್ದಾರೆ. ಬೀರ್ ಬಿಲ್ಲಿಂಗ್ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ. ಆಗ ಜೊತೆಗಿದ್ದ ಜರ್ಮನ್ ಶೆಫರ್ಡ್‌ ನಾಯಿ ತನ್ನ ಮಾಲೀಕರ ಶವದ ಜಾಗ ಬಿಟ್ಟು ಎಲ್ಲಿಯೂ ಹೋಗಿಲ್ಲ. ಎರಡು ದಿನದವರೆಗೂ ಬೇರೆಯವರು ಆ ಸ್ಥಳಕ್ಕೆ ಬರುವವರೆಗೂ ಅಲ್ಲಿಯೇ ನಿಂತು ಕಾದಿದೆ.

ಇದನ್ನೂ ಓದಿ: ಹೋಗಿ ಬಾ ಭೈರವ.. ಇಡೀ ಕುಟುಂಬದ ಪ್ರೀತಿಯ ನಾಯಿ ಸಾವಿಗೆ ನಟ ಜಗ್ಗೇಶ್‌ ಕಣ್ಣೀರು

ಹಿಮಾಚಲ ಪ್ರದೇಶದಲ್ಲಿ ಎರಡು ವರ್ಷದ ಬಳಿಕ ಭಾರೀ ಹಿಮಪಾತ ಆಗುತ್ತಿದೆ. ತೀವ್ರ ಚಳಿ, ಹಿಮಪಾತದ ಕಾರಣದಿಂದ ಟ್ರಕ್ಕಿಂಗ್ ಹೋಗಿದ್ದ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಆದರೆ ಟ್ರಕ್ಕಿಂಗ್‌ನಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಈ ನಾಯಿ ತನ್ನ ಮಾಲೀಕರ ಶವವನ್ನು ಬಿಟ್ಟು ಹೋಗಿಲ್ಲ. 2 ದಿನದ ಬಳಿಕ ಯಾರೋ ಈ ನಾಯಿಯ ಮೊರೆ ಕೇಳಿ ಬಂದು ನೋಡಿದ್ದಾರೆ.


">February 8, 2024

ಸದ್ಯ ಜರ್ಮನ್ ಶೆಫರ್ಡ್‌ ಇದ್ದ ಜಾಗದಿಂದ ಮೃತದೇಹವನ್ನು ಸ್ಥಳಾಂತರ ಮಾಡಲಾಗಿದೆ. ತನ್ನ ಮಾಲೀಕ ಸಾವನ್ನಪ್ಪಿದ ದುಃಖದಿಂದ ಎರಡು ದಿನದ ಬಳಿಕ ಆಹಾರ ಕೊಟ್ಟರೂ ಜರ್ಮನ್ ಶೆಫರ್ಡ್ ನಾಯಿ ಸೇವಿಸುತ್ತಿಲ್ಲವಂತೆ. ಅಬ್ಬಾ.. ಈ ನಾಯಿಯ ಸ್ವಾಮಿನಿಷ್ಠೆಗೆ ಸೆಲ್ಯೂಟ್ ಹೇಳಲೇ ಬೇಕು. ಸೋಷಿಯಲ್ ಮೀಡಿಯಾದಲ್ಲಿ ಜರ್ಮನ್ ಶೆಫರ್ಡ್‌ ನಾಯಿ ಸ್ವಾಮಿನಿಷ್ಠೆ ತೋರಿರುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೋಡುಗರ ಕಣ್ಣು ಒದ್ದೆಯಾಗಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment