newsfirstkannada.com

ರಾಮಲಲ್ಲಾನಿಗೆ ಪಟ್ಟಾಭಿಷೇಕ.. ಪ್ರತಿಷ್ಠಾಪನೆ ಬಳಿಕ ಮೋದಿ ವಸ್ತ್ರ ದಾನ ಮಾಡಿದ್ಯಾರಿಗೆ?

Share :

Published January 23, 2024 at 6:01am

  ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ರಾಮ ವಿರಾಜಮಾನ

  ಅಭೂತಪೂರ್ವ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿ ಆಗಿತ್ತು

  ‘ಯಜಮಾನ’ನ ಸ್ಥಾನದಲ್ಲಿ ನಿಂತು ಪ್ರಧಾನಿ ಮೋದಿ ಪೂಜೆ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿರಾಜಮಾನನಾಗಿದ್ದಾನೆ. 11 ದಿನ ಕಠಿಣ ವ್ರತ ಕೈಗೊಂಡಿದ್ದ ಪ್ರಧಾನಿ ಮೋದಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನ ಸಂಪನ್ನಗೊಳಿಸಿದ್ದಾರೆ. ಎಲ್ಲೆಲ್ಲೂ ರಾಮನಾಮದ ಜೈಕಾರ ಮುಗಿಲುಮುಟ್ಟಿತ್ತು. ಶತ ಶತಮಾನಗಳ ಬಳಿಕ ಶತಕೋಟಿ ಭಕ್ತರ ಕಸನು ನನಸಾಯ್ತು. ಆ ಕ್ಷಣ ವೈಭವದ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಮಭಕ್ತರು ಪಂಚ ಶತಮಾನಗಳ ಕಾಲ ಶಬರಿ ಕಾಯ್ದಂಗೆ ಕಾಯ್ದಿದ್ರು. ರಘುಕುಲ ತಿಲಕನ ಜನ್ಮಭೂಮಿಯಲ್ಲಿ ಅವನಿಗೊಂದು ಮಂದಿರ ನಿರ್ಮಾಣ ಮಾಡಬೇಕೆಂಬ ಕೋಟಿ ಕೋಟಿ ಹೃದಯಗಳ ಕನಸು ನನಸಾಗಿದೆ. ಇಂದು ಆ ಅಭೂತಪೂರ್ವ ಕ್ಷಣಕ್ಕೆ ಮುಕ್ಕೋಟಿ ದೇವಾನುದೇವತೆಗಳ ಜೊತೆ ಇಡೀ ಭೂಮಂಡಲ ಸಾಕ್ಷಿಯಾಗಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಟ್ಟಾಭಿಷೇಕ

ಎಲ್ಲೆಲ್ಲೂ ರಾಮನಾಮ ಜಪ.. ದಶದಿಕ್ಕುಗಳಲ್ಲೂ ರಾಘವನದ್ದೇ ತಪ.. ಸರ್ವಂ ರಾಮಮಯಂ.. ತಲೆಯಿಂದ ಪಾದದವರೆಗೆ ಆಭರಣಗಳಿಂದ ಶೃಂಗಾರ. ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣ. ಹಣೆಗೆ ಬೆಳ್ಳಿ ಮತ್ತು ಕೆಂಪು ತಿಲಕ ಈ ದೃಶ್ಯವನ್ನು ಕಂಡು ರಾಮ ಭಕ್ತರು ಭಕ್ತಿ ಭಾವದಲ್ಲಿ ತಲ್ಲೀನರಾಗಿದ್ದಾರೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಂಡಿದೆ. ಮೃಗಶಿರಾ ನಕ್ಷತ್ರ, ಮೇಷ ಲಗ್ನ, ಅಭಿಜಿತ್‌ ಮುಹೂರ್ತದಲ್ಲಿ ಪ್ರಧಾನಿ ಮೋದಿ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಈ ಅದ್ಭುತ ದೃಶ್ಯವನ್ನು ಭರತಖಂಡ ಮಾತ್ರವಲ್ಲದೇ ವಿದೇಶಗಳಲ್ಲಿರುವ ರಾಮಭಕುತರು ಕೂಡ ಕಣ್ತುಂಬಿಕೊಂಡು ಭಾವಪರವಶರಾಗಿದ್ದಾರೆ. ಸಂಭ್ರಮಿಸಿದ್ದಾರೆ. ಜೈ ಶ್ರೀರಾಮ್‌ ಅಂತ ತಮ್ಮ ಎದೆಯೊಳಗಿನ ಭಕ್ತಿಯನ್ನು ರಾಮನಪಾದತಲಗಳಿಗೆ ಸಮರ್ಪಿಸಿದ್ದಾರೆ.

‘ಯಜಮಾನ’ನ ಸ್ಥಾನದಲ್ಲಿ ನಿಂತು ಮೋದಿಯಿಂದ ಪೂಜೆ

ಮಧ್ಯಾಹ್ನ 12 ಗಂಟೆ ನಂತರ ಪ್ರಾಣಪ್ರತಿಷ್ಠೆಯ ಸಕಲ ಪೂಜಾ ಕೈಂಕರ್ಯಗಳು ಶುರುವಾದವು. 12:12ಕ್ಕೆ ಕೆಂಪು ವಸ್ತ್ರದ ಮೇಲೆ ಬೆಳ್ಳಿ ಛತ್ರಿಯನ್ನು ಹಿಡಿದುಕೊಂಡು ಚಿನ್ನದ ಬಣ್ಣದ ಕುರ್ತಾ ಮತ್ತು ಬಿಳಿಯ ಬಣ್ಣದ ಚಿಕ್ಕ ಶಾಲನ್ನು ಧರಿಸಿ ರಾಮಮಂದಿರಕ್ಕೆ ಪ್ರಧಾನಿ ಮೋದಿ ಯಜಮಾನನಾಗಿ ಆಗಮಿಸಿದರು. ಗರ್ಭಗುಡಿಯಲ್ಲಿ ಮೂರ್ತಿ ಪೂಜೆಗೂ ಮುನ್ನ ರಾಮಮಂದಿರದ ಸುತ್ತಲೂ ಮೋದಿ ಪ್ರದಕ್ಷಿಣೆ ಹಾಕಿದ್ರು. ಅಯೋಧ್ಯೆ ರಾಮಮಂದಿರದ ಆವರಣ ಪ್ರವೇಶಿಸಿದ ಮೋದಿ, ಒಬ್ಬಂಟಿಯಾಗಿ ಪೂರ್ವ ಬಾಗಿಲಿನಿಂದ ದೇಗುಲದ ಒಳಗೆ ಪ್ರವೇಶಿಸಿ ನೇರವಾಗಿ ಗರ್ಭಗುಡಿಯತ್ತ ಸಾಗಿದ್ರು. ನೂತನ ಮೂರ್ತಿಗೆ ಪೂಜೆ ಸಲ್ಲಿಸುವ ಮುನ್ನ ಪ್ರಧಾನಿ ಮೋದಿ ಹಳೆಯ ರಾಮನ ಮೂರ್ತಿಗೆ ಪೂಜೆ ಸಲ್ಲಿಸಿದ್ರು.

12.20ಕ್ಕೆ ಭಗವಾನ್‌ ವಿಷ್ಣುವಿನ ಪ್ರಾರ್ಥನೆಯೊಂದಿಗೆ ಪ್ರತಿಷ್ಠಾಪನಾ ಕಾರ್ಯ ಆರಂಭವಾಯ್ತು. 12.21ಕ್ಕೆ ಪುರೋಹಿತರು ಶ್ರೀರಾಮನ ಉಪಸ್ಥಿತಿಯನ್ನು ಆಹ್ವಾನಿಸಲು ಮಂತ್ರ ಪಠಿಸಲು ಶುರು ಮಾಡಿದರು. 12.22 ಕ್ಕೆ ಗರ್ಭಗುಡಿ ಪ್ರವೇಶ ಮಾಡಿದ ಮೋದಿ ಪ್ರಾರ್ಥನೆ ಸಲ್ಲಿಸಿದ್ರು. 12.29ಕ್ಕೆ ಪ್ರಾಣ ಪ್ರತಿಷ್ಠಾಪನೆ ಶುರುವಾಗಿ ಶ್ರೀರಾಮನ ಪ್ರಾರ್ಥನೆ, ವಿವಿಧ ಪೂಜೆಗಳು ನೆರವೇರಿದವು. ‘ಯಜಮಾನ’ನ ಸ್ಥಾನದಲ್ಲಿ ನಿಂತು ಮೋದಿ ರಾಮಲಲ್ಲಾನ ಮೂರ್ತಿಯ ಪಾದಕ್ಕೆ ಕಮಲದ ಹೂ ಅರ್ಪಿಸಿ ಆರತಿ ಬೆಳಗಿದರು. ಈ ವೇಳೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶ ಸಿಎಂ ಯೋಗಿ, ಪೇಜಾವರ ಶ್ರೀಗಳು, ರಾಮಜನ್ಮಭೂಮಿ ಟ್ರಸ್ಟ್​​ನ ಸದಸ್ಯರು ಸೇರಿದಂತೆ ಹಲವರು ಪೂಜೆಯಲ್ಲಿ ಭಾಗಿಯಾಗಿದ್ದರು. ಅಂತಿಮವಾಗಿ 12.48ಕ್ಕೆ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಂಡಿತ್ತು.

ಪ್ರಾಣಪ್ರತಿಷ್ಠೆ ಬಳಿಕ 10 ಜನಕ್ಕೆ ಪ್ರಧಾನಿ ಮೋದಿ ವಸ್ತ್ರ ದಾನ

ಪ್ರಾಣ ಪ್ರತಿಷ್ಠಾಪನೆ ಬಳಿಕ ಮೂರ್ತಿಗೆ ಮೊದಲ ಆರತಿಯನ್ನ ಮೋದಿ ಮಾಡಿದ್ರು. ಮಹಾ ಆರತಿಯ ವೇಳೆ ಮಂಗಳಗೀತೆ ಮತ್ತು ಶಂಖ ನಾದ ಮೊಳಗಿತು. ರಾಮಲಲ್ಲಾನಿಗೆ ಪೂಜೆಯ ಬಳಿಕ ಪ್ರಧಾನಿ ಮೋದಿಗೆ ಕಂಕಣವನ್ನ ಕಟ್ಟಲಾಯ್ತು. ಬಳಿಕ 10 ಜನಕ್ಕೆ ಪ್ರಧಾನಿ ಮೋದಿ ವಸ್ತ್ರ ದಾನ ಮಾಡಿದ್ರು. ಮೂರ್ತಿ ಪ್ರದಕ್ಷಿಣೆ ಹಾಕಿ ರಾಮಲಲ್ಲಿನಿಗೆ ನಮೋ ನಮನ ಸಲ್ಲಿಸಿದ್ರು. ಅಂತಿಮವಾಗಿ ಬಾಲರಾಮನಿಗೆ ದೀರ್ಘದಂಡ ನಮಸ್ಕರಿಸಿದ್ರು. ಇನ್ನು ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಭಾರತೀಯ ಸೇನಾ ಹೆಲಿಕಾಪ್ಟರ್​ ಹೂ ಮಳೆ ಸುರಿಸಿತು. ಎಲ್ಲೆಡೆ ಶ್ರೀರಾಮ ಜೈಕಾರ ಮೊಳಗಿತ್ತು. ದಶದಿಕ್ಕುಗಳಲ್ಲೂ ಮರ್ಯಾದಾ ಪುರುಷೋತ್ತಮನ ಜಪ ಜೋರಾಗಿತ್ತು. ಒಟ್ಟಾರೆ ಶತಕೋಟಿ ರಾಮ ಭಕ್ತರ ಕನಸು ಶತಮಾನಗಳ ಬಳಿಕ ನನಸಾಯ್ತು. ಅಯೋಧ್ಯೆಯಲ್ಲಿ ರಾಮರಾಜ್ಯ ಸ್ಥಾಪನೆಯಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾನಿಗೆ ಪಟ್ಟಾಭಿಷೇಕ.. ಪ್ರತಿಷ್ಠಾಪನೆ ಬಳಿಕ ಮೋದಿ ವಸ್ತ್ರ ದಾನ ಮಾಡಿದ್ಯಾರಿಗೆ?

https://newsfirstlive.com/wp-content/uploads/2024/01/rama-mandira-15.jpg

Load More