/newsfirstlive-kannada/media/post_attachments/wp-content/uploads/2024/09/Dubai-Divorce-Princess.jpg)
ಇತ್ತೀಚೆಗೆ ದುಬೈ ರಾಜಕುಮಾರಿ ತನ್ನ ಗಂಡನಿಗೆ ಇನ್ಸ್ಟಾಗ್ರಾಂನಲ್ಲೇ ತಲಾಖ್ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೇ ತನ್ನ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಈ ಡಿವೋರ್ಸ್ ಕೇಸ್‌ಗೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ಇನ್ಸ್ಟಾದಲ್ಲೇ ಗಂಡನಿಗೆ ‘ತ್ರಿವಳಿ ತಲಾಖ್’ ಕೊಟ್ಟ ದುಬೈ ರಾಜಕುಮಾರಿ! ಗಂಡನ ಕಣ್ಣಾ ಮುಚ್ಚಾಲೆ ಬಿಚ್ಚಿಟ್ಟಳು ಕಣ್ರಿ
ಅಚ್ಚರಿಯಾದ್ರೂ ಇದು ನಿಜವಾಗಲೂ ನಡೆದಿರುವ ಘಟನೆ. ದುಬೈ ರಾಜಕುಮಾರಿ ಶೈಖಾ ಮಹ್ರಾ ತನ್ನ ಗಂಡ ಶೇಖ್ ಮನ ಅಲ್ ಮಕ್ತೌಮ್ನಿಗೆ ತ್ರಿವಳಿ ತಲಾಖ್ ಹೇಳಿದ್ದರು. ಗಂಡನ ದಾಂಪತ್ಯ ದ್ರೋಹವೇ ವಿಚ್ಛೇದನ ನೀಡಲು ಕಾರಣ ಎಂದು ಇನ್ಸ್ಟಾಗ್ರಾಂನಲ್ಲೇ ಬರೆದುಕೊಂಡಿದ್ದರು.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ದುಬೈ ರಾಜಕುಮಾರಿ, ‘ಆತ್ಮೀಯ ಪತಿ, ನೀವು ಇತರರೊಂದಿಗೆ ಸಂಬಂಧ ಹೊಂದಿರುವುದರಿಂದ ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ಇಂತಿ ನಿಮ್ಮ ಮಾಜಿ ಹೆಂಡತಿ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ದರ್ಶನ್ ಬಿಡುಗಡೆಗೆ ಪಣ ತೊಟ್ಟ ಪತ್ನಿ ವಿಜಯಲಕ್ಷ್ಮೀ.. ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ: ಏನಿದರ ವಿಶೇಷ?
ಇನ್ಸ್ಟಾ ಮೂಲಕ ಪತಿಗೆ ವಿಚ್ಛೇದನ ನೀಡಿ ಸುದ್ದಿಯಾಗಿದ್ದ ದುಬೈ ರಾಜಕುಮಾರಿ ಶೇಖ್ ಮೆಹ್ರಾ ಮುಕ್ತಂ ಹೊಸ ಪರ್ಫ್ಯೂಮ್ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಇನ್ಸ್ಟಾ ಮೂಲಕವೇ ತಮ್ಮ ಪತಿ ಶೇಖ್ ಬಿನ್ ಮೊಹ್ಮದ್ ಬಿನ್ ರಶೀದ್ ಮನಾ ಅಲ್ ಮುಕ್ತಂಗೆ ವಿಚ್ಛೇದನ ನೀಡಿದ್ದರು. ದುಬೈ ರಾಜಕುಮಾರಿಯ ವಿಚ್ಛೇದನ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಇದೀಗ ಡಿವೋರ್ಸ್ ಹೆಸರಿನ ಪರ್ಫ್ಯುಮ್ ಬಾಟಲಿ ಚಿತ್ರ ಶೇರ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಶೈಖಾ ಮಹ್ರಾ 2023ರಲ್ಲಿ ವಿವಾಹವಾದರು. ಒಂದು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಮಗು ಹುಟ್ಟಿದ 2 ತಿಂಗಳ ಬಳಿಕ ಗಂಡನಿಗೆ ತಲಾಖ್ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ