ಯುವಕನ ಕಣ್ಣೀರಿಗೆ ಸ್ಪಂದಿಸಿದ್ರು ಈ ಕ್ರಿಕೆಟರ್
ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಹಣದ ಸಹಾಯ
ಕನ್ನಡಿಗನ ಸಹಾಯವನ್ನು ವಿದ್ಯಾರ್ಥಿ ಮರೆಯುವಂತಿಲ್ಲ
ಕೋಟಿ ಕೋಟಿ ಹಣ ಇದ್ದರೂ ದಾನ ಮಾಡದೇ ಕೂಡಿಟ್ಟುಕೊಳ್ಳುವ ಜನರೇ ಹೆಚ್ಚು. ಅಂತಹದರಲ್ಲಿ ದಾನ ಮಾಡುವ ಹೃದಯವಂತ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ನಮ್ಮ ಕನ್ನಡದ ಹೆಮ್ಮೆಯ ಪುತ್ರನಿಂದ ಯುವಕನೋರ್ವನ ಕಷ್ಟದ ಬದುಕಿನ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ. ಹುಬ್ಬಳ್ಳಿಯ ಯುವಕರ ಸಹಾಯದಿಂದ ಮಹತ್ವದ ಕಾರ್ಯ ಸಾಧನೆಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ? ಇಲ್ಲಿದೆ ಓದಿ.
ವಿದ್ಯಾರ್ಥಿಗೆ ನೆರವಾದ ಕೆ ಎಲ್ ರಾಹುಲ್
ಕೆ.ಎಲ್. ರಾಹುಲ್ ನಮ್ಮ ಕರ್ನಾಟಕದ ಯುವಕ. ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ, ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್.ರಾಹುಲ್ ಅವರು ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.
ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು
ಅಮೃತ ಮಾವಿನಕಟ್ಟಿ ಎಂಬುವ ಮಹಾಲಿಂಗಪುರದ ಸಾಮಾನ್ಯ ಯುವಕ ಮೊನ್ನೆಯಷ್ಟೇ ಸೆಕೆಂಡ್ ಪಿಯುಸಿ ಕಾಮರ್ಸ್ ನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದ. ಆದರೆ, ಕಡುಬಡತನದಲ್ಲಿರುವ ಈ ಯುವಕನಿಗೆ ತಂದೆ ತಾಯಿ ಇಲ್ಲಾ. ಓದಲೇ ಬೇಕು ಎಂಬ ಛಲದ ಯುವಕನಿಗೆ ನಿತೀನ್ ಹಾಗೂ ಹುಬ್ಬಳ್ಳಿಯ ಮಂಜುನಾಥ ಹೆಬಸೂರ ಎಂಬುವವರು ಭೇಟಿಯಾಗಿದ್ದಾರೆ. ಅದೃಷ್ಟವಶಾತ್ ಮಂಜುನಾಥ ಹೆಬಸೂರ ಅವರು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಮಾತನಾಡಿ, ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು ಕೊಡಿಸಿದ್ದಾರೆ.
ಬಡ ವಿದ್ಯಾರ್ಥಿಗಾಗಿ ಮಿಡಿದ ಕೆಎಲ್ ರಾಹುಲ್ ಹೃದಯ.. ಸ್ಟಾರ್ ಕ್ರಿಕೆಟಿಗ ಏನ್ ಮಾಡಿದ್ದಾರೆ ಹೊತ್ತಾ..? https://t.co/c0pG7PiPdT pic.twitter.com/BZVzL5aBO4
— NewsFirst Kannada (@NewsFirstKan) June 12, 2023
ಯುವಕನ ಬಾಳಿಗೆ ಬೆಳಕಾದ ಕ್ರಿಕೆಟರ್
ಇನ್ನೂ ಯುವಕ ಬಿಕಾಂ ಓದಲು ಕೆಎಲ್ಇ ಸಂಸ್ಥೆಯ ಬಿವಿಬಿ ಕಾಲೇಜಿಗೆ ಬಂದಿದ್ದಾನೆ. ಆತನ ಪರಿಸ್ಥಿತಿ ಹಾಗೂ ಆತನ ಅಂಕಗಳನ್ನು ನೋಡಿದ ಆಡಳಿತ ಮಂಡಳಿ 10 ಸಾವಿರ ರಿಯಾಯಿತಿ ನೀಡಿದೆ. ಆದರೆ, ಉಳಿದ ಹಣವನ್ನು ತುಂಬಲು ಸಾಧ್ಯವಾಗದೇ ಇದ್ದಾಗ ಕೆ.ಎಲ್.ರಾಹುಲ್ 75 ಸಾವಿರ ಹಣವನ್ನು ಯುವಕನ ಖಾತೆಗೆ ಜಮಾ ಮಾಡಿದ್ದು, ಯುವಕನ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ಒಟ್ಟಿನಲ್ಲಿ ಯುವಕನ ನೆರವಿಗೆ ಹುಬ್ಬಳ್ಳಿಯ ಮಂಜುನಾಥ ಹೆಬಸೂರ ಸಾಕಷ್ಟು ಶ್ರಮ ವಹಿಸಿದ್ದು, ಕೆ.ಎಲ್ ರಾಹುಲ್ ಮೂಲಕ ಯುವಕನ ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಕಷ್ಟದಲ್ಲಿದ್ದ ಯುವಕನ ಶಿಕ್ಷಣಕ್ಕೆ ಸಹಾಯ ಮಾಡಿದ ಕೆ ಎಲ್ ರಾಹುಲ್ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ