newsfirstkannada.com

ರಷ್ಯಾ ಸೇನೆಗೆ ಕಳುಹಿಸಿದ ಪ್ರಕರಣದಲ್ಲಿ ತಗಲಾಕಿಕೊಂಡ ಖ್ಯಾತ ಯೂಟ್ಯೂಬರ್​! ಪ್ರಕರಣ ಭೇದಿಸಿದ ಸಿಬಿಐ

Share :

Published March 9, 2024 at 6:26pm

Update March 9, 2024 at 6:27pm

    ಯಾರು ಈ ಫೈಸಲ್​​ ಅಬ್ದುಲ್​ ಮುತಾಲಿಬ್​ ಖಾನ್?

    ಉದ್ಯೋಗ ಕೊಡಿಸುವ ನೆಪದಲ್ಲಿ ಭಾರತೀಯರಿಗೆ ಮೋಸ

    ಇತ್ತೀಚೆಗೆ 30 ವರ್ಷದ ಮೊಹಮ್ಮದ್​​ ಅಸ್ಫಾನ್ ಸಾವನ್ನಪ್ಪಿದ್ದನು

ಇತ್ತೀಚೆಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಭಾರತೀಯರನ್ನ ರಷ್ಯಾಗೆ ಕಳುಹಿಸಿ ಅಲ್ಲಿನ ಸೇನೆಯಲ್ಲಿ ದುಡಿಸಿದ ಪ್ರಕರಣ ಬಯಲಿಗೆ ಬಂದಿತ್ತು. ಕರ್ನಾಟಕದವರು ಸೇರಿ ಅನೇಕ ಭಾರತೀಯರು ರಷ್ಯಾದಲ್ಲಿ ಸಿಲುಕಿಕೊಂಡಿದ್ದು, ವಿಡಿಯೋ ಮಾಡಿ ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದರು. ಮಾತ್ರವಲ್ಲದೆ, ಈಗಾಗಲೇ 2 ಭಾರತೀಯರು ಪ್ರಾಣವನ್ನು ಕಳೆದುಕೊಂಡಿದ್ದರು. ಆದರೀಗ ಈ ಪ್ರಕರಣವನ್ನ ಕೇಂದ್ರೀಯ ತನಿಖಾ ದಳ ಭೇದಿಸಿದೆ.

ಫೈಸಲ್​ ಅಬ್ದುಲ್​ ಮುತಾಲಿಬ್​ ಖಾನ್​​ ಎಂಬ ಯೂಟ್ಯೂಬರ್​ ಸೇರಿ ಈ ಪ್ರಕರಣದಲ್ಲಿ ನಾಲ್ವರು ಶಂಕಿತರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್​ನ 30 ವರ್ಷದ ಮೊಹಮ್ಮದ್​​ ಅಸ್ಫಾನ್ ಕೆಲಸದ ಆಸೆಗಾಗಿ ರಷ್ಯಾಗೆ ಹೋಗಿ ಅಲ್ಲಿ ಉಕ್ರೇನ್​ ವಿರುದ್ಧದ ಯುದ್ಧದಲ್ಲಿ ಸಾವನ್ನಪ್ಪಿದನು. ಅಸ್ಫಾನ್​​ನನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸಿ ರಷ್ಯಾ ಸೇನೆಗೆ ಒಪ್ಪಿಸಿದ್ದರು. ಈತನ ಸಾವಿನ ಬಳಿಕ ಯೂಟ್ಯೂಬರ್ ಅಬ್ದುಲ್​ ಮುತಾಲಿಕ್​ ಖಾನ್​ ಹೆಸರು ಬೆಳಕಿಗೆ ಬಂದಿದೆ.

ಯಾರು ಈ ಯೂಟ್ಯೂಬರ್​? ಫೈಸಲ್​​ ಖಾನ್​ ಹಿನ್ನೆಲೆ ಏನು?

ಫೈಸಲ್​​ ಅಬ್ದುಲ್​ ಮುತಾಲಿಬ್​ ಖಾನ್ ಅಲಿಯಾಸ್​ ಬಾಬಾ​ ಬಗ್ಗೆ ಸಿಬಿಐ ತನಿಖೆ ಚುರುಕುಗೊಳಿಸಿದೆ. ಈತ ದುಬೈನಲ್ಲಿ ಬಾಬಾ ವ್ಲಾಗ್ಸ್​ ಓವರ್​ಸೀಸ್​ ರಿಕ್ರೂಟ್​ಮೆಂಟ್​​ ಸೆಲ್ಯೂಷನ್ಸ್​ ಪ್ರೈವೇಟ್​​ ಲಿಮಿಟೆಡ್​​ನ ನಿರ್ದೇಶಕರಾಗಿದ್ದಾನೆ. ತನ್ನ ಬಾಬಾ ವ್ಲಾಗ್ಸ್​ನಲ್ಲಿ ರಷ್ಯಾ ಸೈನ್ಯದ ಉದ್ಯೋಗಗಳ ಬಗ್ಗೆ ಜಾಹೀರಾತು ನೀಡುತ್ತಿದ್ದನು.

ಇದಲ್ಲದೆ ಈತ ಯೂಟ್ಯೂಬ್, ಇನ್​ಸ್ಟಾ, ಟಿಕ್​ಟಾಕ್​ನಲ್ಲೂ ಸಕ್ರೀಯನಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗ ನೇಮಕಾತಿ ಬಗ್ಗೆ ಪೋಸ್ಟ್​ ಮಾಡಿದ್ದನು. ಅದರಲ್ಲಿ ರಷ್ಯಾಗೆ ಮಾನವ ಶಕ್ತಿ ಬೇಕು, ರಷ್ಯಾ ಸೈನ್ಯದ ಸಹಾಯಕರಾಗಿ ಕೆಲಸ ಪಡೆಯಿರಿ. ನೀವು ಹೋರಾಡಬೇಕಿಲ್ಲ. ಈಗಾಗಲೇ ನೆಲಸಮವಾದ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಎಂದು ಬಾಬಾ ವಿಡಿಯೋವೊಂದರಲ್ಲಿ ಹೇಳಿದ್ದನು.

ಸದ್ಯ ಫೈಸಲ್​ ಅಬ್ದುಲ್​ ಮುತಾಲಿಬ್​ ಖಾನ್ ಸೇರಿದಂತೆ ನಾಲ್ವರು ಶಂಕಿತ ಬಗ್ಗೆ ಸಿಬಿಐ ಮಾಹಿತಿ ತನಿಖೆ ನಡೆಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಷ್ಯಾ ಸೇನೆಗೆ ಕಳುಹಿಸಿದ ಪ್ರಕರಣದಲ್ಲಿ ತಗಲಾಕಿಕೊಂಡ ಖ್ಯಾತ ಯೂಟ್ಯೂಬರ್​! ಪ್ರಕರಣ ಭೇದಿಸಿದ ಸಿಬಿಐ

https://newsfirstlive.com/wp-content/uploads/2024/03/khan.jpg

Load More