newsfirstkannada.com

26 ವರ್ಷದ ಬದುಕಿನಲ್ಲಿ ದುರಂತ.. ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ಅಭಿಮಾನಿ

Share :

Published May 12, 2024 at 3:38pm

Update May 12, 2024 at 3:39pm

  ಯುವಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಲಿಖಿತ್ ಸಾವನ್ನು ಘೋಷಿಸಿದ್ದರು

  ಆಘಾತಕಾರಿ ಸುದ್ದಿ ಕೇಳಿದ ಲಿಖಿತ್ ಕುಟುಂಬಸ್ಥರು ಸಾರ್ಥಕತೆ ನಿರ್ಧಾರ

  ಮಣ್ಣಾಗುವ ಮುನ್ನ ಹಲವರ ಬದುಕಿಗೆ ಕಣ್ಣಾದ ಅಪ್ಪು ಅಭಿಮಾನಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾದ 26 ವರ್ಷದ ಎಂಬ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಯುವಕನ ಕುಟುಂಬಸ್ಥರು ಮಗನನ್ನು ಕಳೆದುಕೊಂಡ ನೋವಿನಲ್ಲೂ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇತ್ತೀಚೆಗೆ ತುಮಕೂರು ಜಿಲ್ಲೆ ಕುಣಿಗಲ್ ಮುಖ್ಯರಸ್ತೆಯಲ್ಲಿ‌ ಭೀಕರ ದುರಂತ ನಡೆದಿತ್ತು. ಬೈಕ್‌ನಲ್ಲಿ‌ ಹೋಗುತ್ತಿದ್ದಾಗ 26 ವರ್ಷದ ಲಿಖಿತ್ ಎಂಬ ಯುವಕ ಆಯತಪ್ಪಿ ಬಿದ್ದಿದ್ದ. ಆಸ್ಪತ್ರೆಗೆ ಸೇರಿದ್ದ ಯುವಕನ ತಲೆಗೆ ಬಲವಾದ ಪೆಟ್ಟಾಗಿ ಮೆದುಳು‌ ನಿಷ್ಕ್ರಿಯವಾಗಿತ್ತು. ಯುವಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಲಿಖಿತ್ ಸಾವನ್ನು ಖಚಿತ ಪಡಿಸಿದ್ದಾರೆ. ಈ ಆಘಾತಕಾರಿ ಸುದ್ದಿ ಕೇಳಿದ ಲಿಖಿತ್ ಕುಟುಂಬಸ್ಥರು ಸಾರ್ಥಕತೆಯ ನಿರ್ಧಾರ ಕೈಗೊಂಡಿದ್ದಾರೆ.

ಅಂಗಾಗ ದಾನ ಮಾಡಿದ ಮೃತ ಲಿಖಿತ್ ಅವರ ಸಹೋದರ

ನನ್ನ ಮಗ ಡಾ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಅಪ್ಪುವಿನಂತೆ ನನ್ನ ಮಗ ಮಣ್ಣಾಗುವ ಮುನ್ನ ಬೇರೆಯವರ ಬದುಕಿಗೆ ಕಣ್ಣಾಗಬೇಕೆಂದು ಮಗನ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ರಾಧಾ ರಮಣ ಸೀರಿಯಲ್ ನಟಿ ಪವಿತ್ರಾ ಜಯರಾಂ ನಿಧನ; ಅಸಲಿಗೆ ಆಗಿದ್ದೇನು? 

ಮಗನ ಸಾವಿನ ನೋವಲ್ಲೂ ಲಿಖಿತ್ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಅಪ್ಪು ಪ್ರೇರಣೆಯಿಂದ ಮಗನ ಅಂಗಾಂಗ ದಾನ ಮಾಡೋ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯಲು ಸಹಾಯವಾಗಿದ್ದಾರೆ. ಅಪ್ಪು ಅಭಿಮಾನಿ ಮಣ್ಣಾಗುವ ಮುನ್ನ ಹಲವರ ಬದುಕಿಗೆ ಕಣ್ಣಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

26 ವರ್ಷದ ಬದುಕಿನಲ್ಲಿ ದುರಂತ.. ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ಅಭಿಮಾನಿ

https://newsfirstlive.com/wp-content/uploads/2024/05/Bangalore-Appu-Fans.jpg

Load More