newsfirstkannada.com

ಖಡಕ್​ ಪೊಲೀಸಪ್ಪನಿಗೆ ತಲೆಬಾಗಿದ ಅಭಿಮಾನಿ.. ಎದೆ ಮೇಲೆ ಹಚ್ಚೆ ಹಾಕಿಸಿ ಅಭಿಮಾನ ತೋರಿಸಿಯೇ ಬಿಟ್ಟ

Share :

Published January 18, 2024 at 10:54am

Update January 18, 2024 at 11:14am

    ಪೊಲೀಸಪ್ಪನ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

    ಖಡಕ್ ಪೊಲೀಸ್ ಅಧಿಕಾರಿಯ ಅಧಿಕಾರಕ್ಕೆ ಮನಸೋತ

    ಕಾರ್ಯವೈಖರಿ ಮೆಚ್ಚಿ ಎದೆಮೇಲೆ ಹಚ್ಚೆ ಹಾಕಿಸಿ ಅಭಿಮಾನ ಮೆರೆದ

ಕೊಪ್ಪಳ: ಸಾಮಾನ್ಯವಾಗಿ ತಂದೆ-ತಾಯಿ, ಪ್ರೀತಿ ಪಾತ್ರರ ಅಥವಾ ನೆಚ್ಚಿನ ಸೆಲೆಬ್ರಿಟಿಗಳ ಹಚ್ಚೆಗಳನ್ನು ಮೈ ಮೇಲೆ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ  ಎದೆ ಮೇಲೆ ಪೊಲೀಸಪ್ಪನ ಹಚ್ಚೆ ಹಾಕಿಸಿಕೊಂಡಿದ್ದಾನೆ.

ಕೊಪ್ಪಳದ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮ ನಿವಾಸಿ ಗವಿಸಿದ್ದಪ್ಪ ಕಂಬ್ಳಿ ಎಂಬ ಅಭಿಮಾನಿಗೆ ಪೊಲೀಸಪ್ಪನೇ ಹೀರೋ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಸಜ್ಜನ್ ಅಂದ್ರೆ ಗವಿಸಿದ್ದಪ್ಪನಿಗೆ ಅಚ್ಚು ಮೆಚ್ಚು. ಅದಕ್ಕೆ ಪೊಲೀಸ್​ನ ಫೋಟೋವನ್ನೇ ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.

ಮಹಾಂತೇಶ್ ಸಜ್ಜನ್ ಕೊಪ್ಪಳದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಯುವಕರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ಸಜ್ಜನ್ ಅವರ ಕಾರ್ಯವೈಖರಿ ಮೆಚ್ಚಿ ಗವಿಸಿದ್ಧಪ್ಪ ಕಂಬ್ಳಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅತ್ತ ಅಭಿಮಾನಿಯ ಅಭಿಮಾನಕ್ಕೆ ಸಿಪಿಐ ಮಹಾಂತೇಶ ಸಜ್ಜನ್ ಮನಸೋತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಡಕ್​ ಪೊಲೀಸಪ್ಪನಿಗೆ ತಲೆಬಾಗಿದ ಅಭಿಮಾನಿ.. ಎದೆ ಮೇಲೆ ಹಚ್ಚೆ ಹಾಕಿಸಿ ಅಭಿಮಾನ ತೋರಿಸಿಯೇ ಬಿಟ್ಟ

https://newsfirstlive.com/wp-content/uploads/2024/01/koppal.jpg

Load More