newsfirstkannada.com

BIGG BOSS: ಡ್ರೋನ್ ಪ್ರತಾಪ್ ಸೋಲು.. ಮಾತು ಕೊಟ್ಟಂತೆ ಅರ್ಧ ಮೀಸೆ, ಗಡ್ಡ ಬೋಳಿಸಿದ ಅಭಿಮಾನಿ

Share :

Published January 29, 2024 at 4:29pm

Update January 29, 2024 at 4:34pm

  ಬಿಗ್‌ಬಾಸ್ ಆನೆಯನ್ನು ಹೊಡೆದ ಮಾವುತ ಸೋತಿದ್ದಕ್ಕೆ ಬೇಸರ

  ಕೊನೇ ಹಂತದಲ್ಲಿ ಡ್ರೋನ್ ಪ್ರತಾಪ್‌ಗೆ ಬಿಗ್‌ಬಾಸ್ ಟ್ರೋಫಿ ಮಿಸ್

  ವಿನ್ ಆಗಿಲ್ಲ ಅಂದ್ರೆ ನನ್ನ ಅರ್ಧ ಮೀಸೆ, ಅರ್ಧ ಗಡ್ಡ ತೆಗೆಯುತ್ತೇನೆ

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ವಿನ್ನರ್ ಅನೌನ್ಸ್‌ ಆಗೋದೇ ಶಾಕಿಂಗ್‌ ನ್ಯೂಸ್‌. ಅದರಲ್ಲೂ ಸೀಸನ್‌ 10ರ ರಿಸಲ್ಟ್ ನಿಜಕ್ಕೂ ಡಬಲ್‌ ಶಾಕ್ ಕೊಟ್ಟಿದೆ. ಕಾರ್ತಿಕ್‌ ಮಹೇಶ್ ಗೆದ್ದು ಬೀಗಿದ್ರೆ ಉಳಿದ ರನ್ನರ್‌ಗಳು ನಿರಾಸೆ ಅನುಭವಿಸಿದ್ದಾರೆ. ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆಯೇ ಚರ್ಚೆ ಜೋರಾಗಿದೆ.

ಬಿಗ್‌ಬಾಸ್‌ ಸೀಸನ್‌ 10ರ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ ಟಾಪ್ 2ರಲ್ಲಿ ನಿಂತಿದ್ರು. ಬಿಗ್‌ಬಾಸ್ ಆನೆಯನ್ನು ಹೊಡೆದ ಮಾವುತ ಅನ್ನೋ ಖುಷಿಯಲ್ಲಿ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಆದರೆ ಬಿಗ್‌ಬಾಸ್ ವೀಕ್ಷಕರ ವೋಟಿಂಗ್ ಲೆಕ್ಕಾಚಾರದ ಪ್ರಕಾರ ಕೊನೆಗೆ ಈ ಸೀಸನ್ ವಿಜೇತರಾಗಿ ಕಾರ್ತಿಕ್ ಗೆದ್ದಿದ್ದಾರೆ. ಕೊನೇ ಹಂತದಲ್ಲಿ ಡ್ರೋನ್ ಪ್ರತಾಪ್‌ಗೆ ಬಿಗ್‌ಬಾಸ್ ಟ್ರೋಫಿ ಜಸ್ಟ್ ಮಿಸ್ ಆಗಿದೆ.

ಬಿಗ್‌ಬಾಸ್ ಫಿನಾಲೆಗೂ ಮುನ್ನ ಈ ಬಾರಿ ವಿನ್ನರ್ ಡ್ರೋನ್ ಪ್ರತಾಪ್ ಆಗುತ್ತಾರೆ ಅಂತ ಕೋಟ್ಯಾಂತರ ಜನ ನಿರೀಕ್ಷೆಯಲ್ಲಿದ್ದರು. ಕೋಟ್ಯಾಂತರ ಮಂದಿ ಡ್ರೋನ್ ಪ್ರತಾಪ್ ಅವರೇ ಗೆಲ್ಲಬೇಕು ಎಂದು ವೋಟ್ ಕೂಡ ಮಾಡಿದ್ದರು. ಈ ಕೋಟಿ, ಕೋಟಿ ಅಭಿಮಾನಿಗಳಲ್ಲಿ ಒಬ್ಬರು ಇಡೀ ಕರ್ನಾಟಕದ ಜನತೆಗೆ ಒಂದು ಸವಾಲು ಹಾಕಿದ್ದರು.

View this post on Instagram

A post shared by Abi razz_ (@abirazz_daily_blogger)

ಇನ್ಸ್‌ಸ್ಟಾಗ್ರಾಂನಲ್ಲಿ ಅಬಿರಾಜ್ ಅನ್ನೋರು ಬಿಗ್‌ಬಾಸ್ ಮನೆಯಲ್ಲಿ ಈ ಬಾರಿ ಡ್ರೋನ್ ಪ್ರತಾಪ್ ವಿನ್ ಆಗ್ತಾರೆ. ಡ್ರೋನ್ ಪ್ರತಾಪ್ ಕರಿ ಸಿಂಹ, ಕರಿ ಚಿರತೆ ಪ್ರತಾಪ್ ವಿನ್ ಆಗೇ ಆಗುತ್ತಾನೆ. ವಿನ್ ಆಗಿಲ್ಲ ಅಂದ್ರೆ ನಾನು ನನ್ನ ಅರ್ಧ ಮೀಸೆ, ಅರ್ಧ ಗಡ್ಡ ತೆಗೆಯುತ್ತೇನೆ. ನಾನು ಕೊಟ್ಟ ಮಾತು ತಪ್ಪೋದಿಲ್ಲ. ಸಂಗೀತಾ ಗೆದ್ರೂ ಸಹ ನಾನು ನನ್ನ ಅರ್ಧ ಮೀಸೆ, ಅರ್ಧ ಗಡ್ಡ ತೆಗೆಯುತ್ತೇನೆ ಎಂದಿದ್ದರು. ಕರ್ನಾಟಕದ ಜನತೆಗೆ ಗೊತ್ತು ಪ್ರತಾಪ್ ಎಂಥಾ ಆಟ ಆಡಿದ್ದಾನೆ ಅಂತ ಅನ್ನೋ ಭರವಸೆ ನೀಡಿದ್ದರು.

ಇದನ್ನೂ ಓದಿ: ಬಿಗ್​ ಬಾಸ್​​ ಮನೆಯಿಂದ ಹೊರಬಂದಿದ್ದೇ ತಡ.. ಡ್ರೋನ್​ ಪ್ರತಾಪ್​ ಮೇಲೆ ದಾಖಲಾಯ್ತು ಕೇಸ್​​!

ಇದೀಗ ಬಿಗ್‌ಬಾಸ್‌ನಲ್ಲಿ ಕಾರ್ತಿಕ್ ಗೆದ್ದು ಡ್ರೋನ್ ಪ್ರತಾಪ್ ರನ್ನರ್ ಆಗಿದ್ದಾರೆ. ಅಬಿರಾಜ್ ತಾನು ಹಾಕಿದ ಸವಾಲಿನಂತೆ ಅರ್ಧ ಮೀಸೆ, ಅರ್ಧ ಗಡ್ಡ ತೆಗೆದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಡ್ರೋನ್ ಪ್ರತಾಪ್ ಅಭಿಮಾನಿಗಳು ಈ ವಿಡಿಯೋ ನೋಡಿ ಸಮಾಧಾನ ಮಾಡ್ತಾ ಇದ್ರೆ, ಕಾರ್ತಿಕ್ ಅಭಿಮಾನಿಗಳು ನೀವು ಕಾರ್ತಿಕ್ ಮೇಲೆ ಬೆಟ್ ಕಟ್ಟಬೇಕಿತ್ತು ಎಂದು ಕಾಲೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಡ್ರೋನ್ ಪ್ರತಾಪ್ ಸೋಲು.. ಮಾತು ಕೊಟ್ಟಂತೆ ಅರ್ಧ ಮೀಸೆ, ಗಡ್ಡ ಬೋಳಿಸಿದ ಅಭಿಮಾನಿ

https://newsfirstlive.com/wp-content/uploads/2024/01/Drone-Pratap-Bigg-Boss-3.jpg

Load More