Advertisment

ವರದಾ ನದಿಯನ್ನೇ ತುಂಬಿಸುವ ಸಾಹಸಕ್ಕೆ ಮುಂದಾದ ರೈತ! ಇದೆಲ್ಲಾ ಪ್ರಾಣಿ, ಪಕ್ಷಿ, ಜಲಚರಗಳಿಗಾಗಿ ಅಂದ್ರೆ ನಂಬ್ತೀರಾ?

author-image
AS Harshith
Updated On
ವರದಾ ನದಿಯನ್ನೇ ತುಂಬಿಸುವ ಸಾಹಸಕ್ಕೆ ಮುಂದಾದ ರೈತ! ಇದೆಲ್ಲಾ ಪ್ರಾಣಿ, ಪಕ್ಷಿ, ಜಲಚರಗಳಿಗಾಗಿ ಅಂದ್ರೆ ನಂಬ್ತೀರಾ?
Advertisment
  • ಬಿಸಿಲಿನ ಬೇಗೆಗೆ ಒಣಗುತ್ತಿದೆ ಕರುನಾಡು, ನೀರಿನಾಗಿ ದೊಡ್ಡ ಗೋಳು
  • ಒಣಗಿದ ನದಿಯನ್ನೇ ತುಂಬಿಸಲು ಮುಂದಾದ ಹಾವೇರಿ ಮೂಲದ ರೈತ
  • ಪ್ರಾಣಿ ಪಕ್ಷಗಳಿಗೆ ಬಾಯಾರಿಕೆ ಆರಿಸಿಕೊಳ್ಳಲು ನದಿಯನ್ನೇ ಭರ್ತಿ ಮಾಡೋ ಕಾರ್ಯ

ಬಿಸಿಲಿನಿಂದ ಬೇಯುತ್ತಿರೋ ಕರುನಾಡು ಕಾದ ಕಾವಲಿಯಂತಾಗಿದೆ. ಜನರೇ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ರೆ, ಕೆರೆ, ಕಟ್ಟೆಗಳು ಒಣಗಿ ಮೂಕ ಪ್ರಾಣಿಗಳ ಗೋಳು ಹೇಳತೀರದಾಗಿದೆ. ಇಲ್ಲೊಬ್ಬ ರೈತ ನೀರಿಗಾಗಿ ಪರಿತಪಿಸುತ್ತಿರೋ ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿ ಮನಕುಲಕ್ಕೆ ಮಾದರಿಯಾಗಿದ್ದಾನೆ.

Advertisment

ಒಂದೆಡೆ ಕುಡಿಯೋಕೆ ನೀರಿಲ್ಲದೇ ಜನರು ಸಂಕಷ್ಟ ಪಡುತ್ತಿದ್ರೆ, ಮತ್ತೊಂದೆಡೆ ಬೆಳೆ ಉಳಿಸಿಕೊಳ್ಳೋಕೆ ಅನ್ನದಾತರು ಪರಡಾಡುತ್ತಿದ್ದಾರೆ. ಸೂರ್ಯನ ಶಾಖಕ್ಕೆ ಭೂ ತಾಯಿ ಮಡಿಲು ಕಾದು ಕೆಂಡದಂತಾಗಿದೆ. ಪ್ರಾಣಿ ಪಕ್ಷಗಳಿಗೆ ಬಾಯಾರಿಕೆ ಆರಿಸಿಕೊಳ್ಳಲು ಒದ್ದಾಡುತ್ತಿವೆ. ಇವುಗಳ ಕಷ್ಟ ನೋಡಲಾಗದೇ ಹಾವೇರಿಯ ರೈತನೊಬ್ಬರು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.

publive-image

ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ ಆರಂಭ; ಮಕ್ಕಳನ್ನು ಎಕ್ಸಾಂಗೆ ಕಳಿಸೋ ಪೋಷಕರು ಓದಲೇಬೇಕಾದ ಸ್ಟೋರಿ

ಹಾವೇರಿ ತಾಲ್ಲೂಕಿನ ಸಂಗೂರು ಗ್ರಾಮದ ರೈತ ಭುವನೇಶ್ವರ ಸ್ವಂತ ಹಣದಿಂದ ಪ್ರಾಣಿ, ಪಕ್ಷಿಗಳ ದಾಹ ತೀರಿಸಲು ಮುಂದಾಗಿದ್ದಾರೆ. ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ವರದಾ ನದಿ ಮಳೆ ಇಲ್ಲದೆ ಬರಿದಾಗಿದೆ. ಹೀಗಾಗಿ ರೈತ ವರದಾ ನದಿಯನ್ನೇ ತುಂಬಿಸುವ ಸಾಹಸಕ್ಕೆ ಕೈ ಹಾಕಿದ್ದಾನೆ. ಬರೋಬ್ಬರಿ 1 ಲಕ್ಷದ 60 ಸಾವಿರ ರೂಪಾಯಿ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ನೀರನ್ನು ನೇರವಾಗಿ ಸಂಗೂರು ಗ್ರಾಮದ ಪಕ್ಕದಲ್ಲಿರುವ ವರದಾ ನದಿಗೆ ಬಿಡುತ್ತಿದ್ದಾರೆ. ದಿನಕ್ಕೆ ಆರು ತಾಸಿನಂತೆ ಕಳೆದ ಐದು ದಿನಗಳಿಂದ ನಿರಂತರ ನೀರು ವರದಾ ನದಿಗೆ ಬಿಡಲಾಗುತ್ತಿದೆ. ಈಗಾಗಲೇ ಅರ್ಧ ಅಡಿಯಷ್ಟು ನದಿಯಲ್ಲಿ ಸಂಗ್ರಹವಾಗಿದೆ. ಇದರಿಂದಾಗಿ ವರದಾ ನದಿಯ ನೀರಿನ ಮೇಲೆ ಅವಲಂಬಿಸಿರುವ ಸಾವಿರಾರು ಪಕ್ಷಿಗಳಿಗೆ ಅನುಕೂಲವಾಗಿದೆ.

Advertisment

ಜಿಲ್ಲೆಯಾದ್ಯಂತ ರೈತ ಮಾಡಿರುವ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ, ಅಲ್ಲದೆ ರೈತನ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ರೈತ ಮಾಡಿರೋ ಒಳ್ಳೆಯ ಕೆಲಸದಿಂದಾಗಿ ಅದೆಷ್ಟೋ ಮೂಕ ಪ್ರಾಣಿಗಳ ದಾಹ ತೀರಿಸಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment