newsfirstkannada.com

ಜಮೀನಿಗೆ ಬಿದ್ದ ಬೆಂಕಿ ಆರಿಸಲು ಹೋಗಿ ರೈತ ಮಹಿಳೆ ಸಾವು

Share :

Published March 25, 2024 at 9:43am

Update March 25, 2024 at 9:44am

    ನಿನ್ನೆ ರಾತ್ರಿ ರೈತ ಮಹಿಳೆಯ ಜಮೀನಿಗೆ ಬೆಂಕಿ ಬಿದ್ದಿತ್ತು

    ಬೆಂಕಿ ಬಿದ್ದ ವಿಚಾರ ತಿಳಿದು ರಾತ್ರಿ ಬೆಂಕಿ ನಂದಿಸಲು ಹೋದ ರೈತ ಮಹಿಳೆ

    ಬೆಂಕಿ ನಂದಿಸುವ ವೇಳೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿ ಸಾವನ್ನಪ್ಪಿದ ಮಹಿಳೆ

ಹಾಸನ: ಬೆಂಕಿ ಆರಿಸಲು ಹೋದ ರೈತ ಮಹಿಳೆ ಬೆಂಕಿಗಾಹುತಿಯಾದ ಘಟನೆ ಆಲೂರು ತಾಲ್ಲೂಕಿನ ಹಾಚಗೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (63)  ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ತಮ್ಮ ಜಮೀನಿಗೆ ಬೆಂಕಿ ಬಿದ್ದ ವಿಷಯ ತಿಳಿದು ರತ್ನಮ್ಮ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ತನ್ನ ಜಮೀನಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಇದನ್ನು ಕಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ರತ್ನಮ್ಮ ಸಿಲುಕಿದ್ದಾರೆ. ಬೆಂಕಿಗೆ ಸಿಲುಕಿ ಹೊರಬಾರಲಾರದೆ ರೈತ ಮಹಿಳೆ ರತ್ನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿ.. ಸವಾರಿಬ್ಬರು ಸ್ಥಳದಲ್ಲೇ ಸಾವು, ಹಿಂಬದಿ ಸವಾರರು ಗಂಭೀರ

ರತ್ನಮ್ಮ ಮೃತದೇಹ ಆಲೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನಿಗೆ ಬಿದ್ದ ಬೆಂಕಿ ಆರಿಸಲು ಹೋಗಿ ರೈತ ಮಹಿಳೆ ಸಾವು

https://newsfirstlive.com/wp-content/uploads/2024/03/ratnamma.jpg

Load More