newsfirstkannada.com

11 ತಿಂಗಳ ಮುದ್ದಾದ ಗಂಡು ಮಗುವನ್ನ ಮಾರಾಟ ಮಾಡಿದ ತಂದೆ.. ಕಾರಣವೇನು?

Share :

Published May 14, 2024 at 3:05pm

    ಹಣದಾಸೆಗೆ ತಂದೆಯಿಂದಲೇ ಗಂಡು ಮಗು ಮಾರಾಟ ಮಾಡಿರುವ ಆರೋಪ

    ಮಗು ಮಾರಾಟಕ್ಕೆ ಸಹಕರಿಸಿದ ಮಹಿಳೆ ವಿರುದ್ಧವೂ ದೂರು ದಾಖಲು

    ತಂದೆಯೇ ತನ್ನ ಮಗುವನ್ನು ಮಾರಾಟ ಮಾಡಿರುವುದು ಎಲ್ಲಿ?

ಕೋಲಾರ: ಹಣದಾಸೆಗೆ 11 ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿದ್ದ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.

ಬಂಗಾರಪೇಟೆ ನಗರದ ನಿವಾಸಿಯಾದ ಮುನಿರಾಜು ಹಾಗೂ ಪವಿತ್ರ ದಂಪತಿಯಾಗಿದ್ದಾರೆ. ಇವರಿಗೆ 2023 ಜೂನ್ 21 ರಂದು ಮುದ್ದಾದ ಗಂಡು ಮಗು ಜನಿಸಿತ್ತು. ಆದರೆ ಸಾಲ ತೀರಿಸಬೇಕೆಂದು ತಂದೆಯೇ ತನ್ನ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಮಗು ಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಗುವಿನ ತಾಯಿ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ

ಬಂಗಾರಪೇಟೆಯ ಕೆರೆಕೋಡಿ ನಿವಾಸಿ ವಲ್ಲಿ ಎನ್ನುವ ಮಹಿಳೆ ಮೂಲಕ ಮಗು ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಮಗು ಅಪಹರಣ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ತನ್ನ ಗಂಡ ಹಾಗೂ ವಲ್ಲಿ ವಿರುದ್ಧ ದೂರು ದಾಖಲಾಗಿದೆ. ಮಗುವನ್ನ ವಾಪಸ್ ಕೊಡಿಸುವಂತೆ ತಾಯಿ ರೋದಿಸುತ್ತಿದ್ದಾಳೆ. ಪೊಲೀಸರು ಮುನಿರಾಜುನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

11 ತಿಂಗಳ ಮುದ್ದಾದ ಗಂಡು ಮಗುವನ್ನ ಮಾರಾಟ ಮಾಡಿದ ತಂದೆ.. ಕಾರಣವೇನು?

https://newsfirstlive.com/wp-content/uploads/2024/05/KLR_DAD.jpg

Load More