newsfirstkannada.com

ಚೀ ಕಳ್ಳಿ.. ಕೊಹ್ಲಿ ಸೆಂಚುರಿ ಬಾರಿಸ್ತಿದ್ದಂತೆ RCB ಜೆರ್ಸಿ ಧರಿಸಿದ ಮಹಿಳಾ ಫ್ಯಾನ್; ವಿಡಿಯೋ ವೈರಲ್‌!

Share :

Published April 7, 2024 at 2:55pm

Update April 7, 2024 at 2:57pm

    ವಿರಾಟ್ ಭರ್ಜರಿ ಬ್ಯಾಟಿಂಗ್‌ ನೋಡಿ ವರಸೆ ಬದಲಾಯಿಸಿದ ಫ್ಯಾನ್ಸ್‌

    ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಕಿಂಗ್‌ ಕೊಹ್ಲಿ ಹವಾ!

    ರಾಜಸ್ಥಾನ್ ರಾಯಲ್ಸ್‌ ಜೆರ್ಸಿ ತೊಟ್ಟಿದ್ದ ಮಹಿಳಾ ಅಭಿಮಾನಿ ಮಾಡಿದ್ದೇನು?

ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಹಾಗೂ ರಾಜಸ್ಥಾನ್ ರಾಯಲ್ಸ್‌ ಮಧ್ಯೆ ನಡೆದ ಐಪಿಎಲ್ ಹಣಾಹಣಿ ರೋಚಕವಾಗಿತ್ತು. ಹೈವೋಲ್ಟೇಜ್ ಪಂದ್ಯದಲ್ಲಿ RCB ಸೋತರೂ ಫ್ಯಾನ್ಸ್‌ಗೆ ವಿರಾಟ್‌ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಸಖತ್ ಖುಷಿ ಕೊಟ್ಟಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಕೊಹ್ಲಿ ಸೆಂಚುರಿಗೆ ಸಾಕ್ಷಿಯಾಗಿದ್ದು, ವಿರಾಟ್ ಅಭಿಮಾನಿಗಳು ಮಸ್ತ್ ಎಂಜಾಯ್ ಮಾಡಿದ್ದಾರೆ.

ಜೈಪುರದ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ಗೆ ವಿರಾಟ್ ಕೊಹ್ಲಿ ಆಸರೆಯಾದರು. ಕೊಹ್ಲಿ ಭರ್ಜರಿ ಬ್ಯಾಟಿಂಗ್ ಕೇವಲ ಬೆಂಗಳೂರು ಅಭಿಮಾನಿಗಳಿಗಷ್ಟೇ ಅಲ್ಲ ಪಿಂಕ್ ಸಿಟಿ ರಾಜಸ್ಥಾನ್ ರಾಯಲ್ಸ್‌ ಫ್ಯಾನ್ಸ್‌ಗೂ ಇಷ್ಟವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ಮಹಿಳಾ ಫ್ಯಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಮತ್ತೆ ಭದ್ರತಾ ಲೋಪ.. ಕೊಹ್ಲಿಯನ್ನು ಕಂಡು ಮೈದಾನಕ್ಕೆ ಓಡೋಡಿ ಬಂದ ಅಭಿಮಾನಿ.. ಮುಂದೇನಾಯ್ತು?

ರಾಜಸ್ಥಾನ್ ರಾಯಲ್ಸ್‌ ಬೆಂಬಲಿಸಲು ಸ್ಟೇಡಿಯಂಗೆ ಬಂದಿದ್ದ ಮಹಿಳಾ ಅಭಿಮಾನಿ ಕೊಹ್ಲಿ ಬ್ಯಾಟಿಂಗ್ ನೋಡಿ ಫಿದಾ ಆಗಿದ್ದಾರೆ. ಕೊನೇ ಓವರ್‌ನಲ್ಲಿ ಕೊಹ್ಲಿ ಸೆಂಚುರಿ ಬಾರಿಸುತ್ತಿದ್ದಂತೆ ರಾಜಸ್ಥಾನ್ ರಾಯಲ್ಸ್ ಲೇಡಿ ಫ್ಯಾನ್ RCB ಜೆರ್ಸಿಗೆ ಮೊರೆ ಹೋಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಜೆರ್ಸಿ ಮೇಲೆಯೇ RCB ಜೆರ್ಸಿ ಧರಿಸಿದ್ದು, ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್ ಸೋತಿರಬಹುದು. ಆದರೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿ, ವಿರಾಟ್ ಆರ್ಭಟ ಎದುರಾಳಿ ತಂಡದ ಅಭಿಮಾನಿಗಳ ಮನಸು ಕದ್ದಿದ್ದು ಸುಳ್ಳಲ್ಲ. ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದಾಗ ಆರ್‌ಸಿಬಿಯೇ ಈ ಸಲ ಗೆಲ್ಲೋ ನಂಬಿಕೆ ಇತ್ತು. ಅದರಲ್ಲೂ ಕೊಹ್ಲಿಗೆ ಎಲ್ಲೆಲ್ಲೂ ಅಪ್ಪಟ ಅಭಿಮಾನಿಗಳು ಇರುವಂತೆ ರಾಜಸ್ಥಾನ್ ರಾಯಲ್ಸ್‌ ಜೆರ್ಸಿ ತೊಟ್ಟಿದ್ದ ಮಹಿಳೆಯ ಅಭಿಮಾನ ನೆಟ್ಟಿಗರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ವಿಡಿಯೋಗೆ ಛೀ ಕಳ್ಳಿ, ಲಾಯಲ್ಟಿ ಬದಲಾಯ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀ ಕಳ್ಳಿ.. ಕೊಹ್ಲಿ ಸೆಂಚುರಿ ಬಾರಿಸ್ತಿದ್ದಂತೆ RCB ಜೆರ್ಸಿ ಧರಿಸಿದ ಮಹಿಳಾ ಫ್ಯಾನ್; ವಿಡಿಯೋ ವೈರಲ್‌!

https://newsfirstlive.com/wp-content/uploads/2024/04/Virat-Kohli-RR-Fans.jpg

Load More